ಸ್ಪೇನ್ ಗಡಿಯ ಫೋಟೋ ತನ್ನ ವರದಿಯಲ್ಲಿ ಬಳಸಿ ಮುಜುಗರಕ್ಕೊಳಗಾದ ಮೋದಿ ಸರ್ಕಾರ

By Suvarna Web DeskFirst Published Jun 16, 2017, 1:04 PM IST
Highlights

ಈ ಹಿಂದೆ ಫೋಟೋಶಾಪ್ ಮೂಲಕ ವಿಷಯಗಳನ್ನು ಉತ್ಪ್ರೇಕ್ಷಿಸಿ  ಬೆಂಬಲಿಗರು, ಬಳಿಕ ಕೇಂದ್ರೀಯ ವಾರ್ತಾ ಇಲಾಖೆ ಪ್ರಧಾನಿ ಮೋದಿಗೆ ಮುಜುಗರವನ್ನುಂಟು ಮಾಡಿದ್ದರೆ, ಈ ಬಾರಿ ಕೇಂದ್ರ ಗೃಹ ಇಲಾಖೆಯೇ ಅಂತಹದೊಂದು ಎಡವಟ್ಟು ಮಾಡಿ ಅಂತರಾಷ್ಟ್ರೀಯ ಮಟ್ಟದಲ್ಲೇ ಮುಜುಗರ ಉಂಟುಮಾಡಿದೆ.

ಈ ಹಿಂದೆ ಫೋಟೋಶಾಪ್ ಮೂಲಕ ವಿಷಯಗಳನ್ನು ಉತ್ಪ್ರೇಕ್ಷಿಸಿ  ಬೆಂಬಲಿಗರು, ಬಳಿಕ ಕೇಂದ್ರೀಯ ವಾರ್ತಾ ಇಲಾಖೆ ಪ್ರಧಾನಿ ಮೋದಿಗೆ ಮುಜುಗರವನ್ನುಂಟು ಮಾಡಿದ್ದರೆ, ಈ ಬಾರಿ ಕೇಂದ್ರ ಗೃಹ ಇಲಾಖೆಯೇ ಅಂತಹದೊಂದು ಎಡವಟ್ಟು ಮಾಡಿ ಅಂತರಾಷ್ಟ್ರೀಯ ಮಟ್ಟದಲ್ಲೇ ಮುಜುಗರ ಉಂಟುಮಾಡಿದೆ.

ಗೃಹ ಇಲಾಖೆಯು ಹೊರತಂದ 2016-17ರ ವಾರ್ಷಿಕ ವರದಿಯಲ್ಲಿ ಭಾರತ ಪಾಕಿಸ್ತಾನ ಗಡಿಯುದ್ದಕ್ಕೂ ಹೊನಲು ದೀಪಗಳನ್ನು ಹಾಕಲಾಗಿರುವ ಬಗ್ಗೆ ಇಲಾಖೆಯು ವಿವರಗಳನ್ನು ಹಾಗೂ ಫೋಟೋವೊಂದನ್ನು ನೀಡಿದೆ. ಕುತೂಹಲಕಾರಿ ಅಂಶವೆಂದರೆ, ಅದೇ ಫೋಟೋವನ್ನು ಬಿಜೆಪಿ  ಕಾರ್ಯಕರ್ತರು ಮೋದಿ ಸರ್ಕಾರದ ಮಹತ್ತರ ಸಾಧನೆಯೆಂಬಂತೆ ಸೋಶಿಯಲ್ ಮೀಡಿಯಾದಲ್ಲಿ ಪ್ರಚುರಪಡಿಸುತ್ತಾ ಬಂದಿದ್ದಾರೆ. ಆದರೆ ಅಲ್ಲಿ ಬಳಸಿರುವ ಫೋಟೋ ವಾಸ್ತವದಲ್ಲಿ ಭಾರತ-ಪಾಕ್ ಗಡಿಯದ್ದಾಗಿರದೆ, ಸ್ಪೇನ್- ಮೊರೊಕ್ಕೋ ಗಡಿಯದ್ದಾಗಿದೆ. ಜೇವಿಯರ್ ಮೊಯಾನೋ ಎಂಬ ಸ್ಪಾನಿಶ್ ಪೋಟೊಗ್ರಾಫರ್ ಈ ಚಿತ್ರವನ್ನು 2006ರಲ್ಲಿ ತೆಗೆದಿದ್ದರು ಎನ್ನಲಾಗಿದೆ.

ಭಾರತ ಪಾಕಿಸ್ತಾನ ಗಡಿ (ಐಪಿಬಿ)ಯುಲ್ಲಿ ಹೊನಲು ದೀಪಗಳನ್ನು ಹಾಕುವ ಕೆಲಸ ಸಂಪೂರ್ಣಗೊಂಡಿದ್ದು ಸ್ವಲ್ಪ ಕೆಲಸವಷ್ಟೇ ಬಾಕಿಯಿದೆಯೆಂದು ಕೂಡಾ ವರದಿಯು ಹೇಳಿದೆ.

ಆದರೆ, ಭಾರತ-ಪಾಕ್ ಗಡಿಯಲ್ಲಿ ಹೊನಲು ದೀಪಗಳನ್ನು ಅಳವಡಿಸುವ ಕಾರ್ಯ 2003ರಲ್ಲೇ ಆರಂಭಗೊಂಡಿದ್ದು, 2013ರಲ್ಲೇ ಬಹುತೇಕ ಕಾರ್ಯ ಪೂರ್ಣಗೊಂಡಿದೆ. ಮೋದಿ ಸರ್ಕಾರವು ಭಾರತ-ಪಾಕ್ ಗಡಿಯಲ್ಲಿ ಕೇವಲ 45 ಕಿ.ಮೀಗೆ ಮಾತ್ರ ಹೊನಲು ದೀಪಗಳನ್ನು ಹಾಕಿದೆಯೆಂದು ಆಲ್ಟ್ ನ್ಯೂಸ್ ವರದಿ ಮಾಡಿದೆ.

ಇನ್ಮೊಂದೆಡೆ, 2840 ಕಿ.ಮೀ ಉದ್ದದ ಭಾರತ-ಬಾಂಗ್ಲಾ ಗಡಿಯ ಪೈಕಿ 1763 ಕಿ,ಮೀನಲ್ಲಿ 2013ರಲ್ಲೇ ಹೊನಲು ದೀಪಗಳನ್ನು ಹಾಕಲಾಗಿತ್ತು. ಪ್ರಧಾನಿ ಮೋದಿ ಅಧಿಕಾರಕ್ಕೆ ಬಂದ ನಂತರ ಕೇವಲ 647 ಕಿ.ಮೀ’ಗೆ ಮಾತ್ರ ಹೊನಲು ದೀಪಗಳನ್ನು ಅಳವಡಿಸಲಾಗಿದೆ ಎಂದು ಆಲ್ಟ್ ನ್ಯೂಸ್ ವರದಿ ಮಾಡಿದೆ. ಉಳಿದ 496 ಕಿ.ಮೀ ನಲ್ಲಿ ದಿಪಗಳನ್ನು ಅಳವಡಿಸುವ ಕೆಲಸ ಬಾಕಿಯಿದೆ.

ಈ ಫೋಟೋ ಪ್ರಮಾದವನ್ನು ಬಿಬಿಸಿಯು ಕೂಡಾ ವರದಿ ಮಾಡಿದ್ದು ಸೊಶಿಯಲ್ ಮೀಡಿಯಾದಲ್ಲಿ ಭಾರೀ ಟೀಕೆ ವ್ಯಕ್ತವಾಗಿದೆ. ಈ ಎಡವಟ್ಟನ್ನು ಗಂಭೀರವಾಗಿ ಪರಿಗಣಿಸಿರುವ ಗೃಹ ಇಲಾಖೆ ತನಿಖೆಗೆ ಆದೇಶಿಸಿದೆ ಎಂದು ಎನ್’ಡಿಟಿವಿ ವರದಿ ಮಾಡಿದೆ.

click me!