ಶೌರ್ಯ ಪ್ರಶಸ್ತಿಗೆ 14 ಸಾಧಕರ ಆಯ್ಕೆ

By Suvarna Web DeskFirst Published Jun 16, 2017, 12:18 PM IST
Highlights

ಪ್ರಶಸ್ತಿಗಾಗಿ ಒಟ್ಟು 78 ಮಂದಿ ಅರ್ಜಿ ಸಲ್ಲಿಸಿದ್ದರು. ಇವರ ಸಾಧನೆ, ಸಾಹಸಗಳನ್ನು ಪರಾಮರ್ಶಿಸಿ ಅಂತಿಮ ವಾಗಿ 28 ಮಂದಿಯ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಸಿದ್ಧಪಡಿಸಲಾಯಿತು. ಈ 28 ಮಂದಿಯ ಸಾಧನೆ- ಸಾಹಸಗಳ ವಿವರಗಳನ್ನು ತೀರ್ಪುಗಾರರ ಮುಂದೆ ಇಡಲಾ ಯಿತು. ಸಾಧಕರ ಸಾಧನೆಗಳ ವಿವರಗಳನ್ನು ಕೂಲಂಕಷ ವಾಗಿ ಪರಿಶೀಲಿಸಿದ ತೀರ್ಪುಗಾರರು ತೂಗು ಅಳೆದು 10 ಪ್ರಶಸ್ತಿಗೆ 14 ಮಂದಿಯನ್ನು ಆರಿಸಿದರು. ಏಳು ವ್ಯಕ್ತಿಗತ ಪ್ರಶಸ್ತಿ ಸೇರಿ 14 ಮಂದಿಯನ್ನು ಆಯ್ಕೆ ಮಾಡಲಾಗಿದೆ.

ಬೆಂಗಳೂರು: ಜೀವನ್ಮರಣ ನಡುವೆ ಹೋರಾಟ ನಡೆಸುತ್ತಿದ್ದವರಿಗೆ ಜೀವದ ಹಂಗುತೊರೆದು ನೆರವಿನ ಹಸ್ತ ಚಾಚಿ ಸಾಹಸ ಮೆರೆದ ವ್ಯಕ್ತಿಗಳನ್ನು ಗುರುತಿಸಿ ಗೌರವಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿರುವ ‘ಕನ್ನಡಪ್ರಭ' ಮತ್ತು ‘ಸುವರ್ಣನ್ಯೂಸ್‌' ವಾಹಿನಿಯು ಇದೇ ಮೊದಲ ಬಾರಿಗೆ ಪ್ರದಾನ ಮಾಡುವ ಶೌರ್ಯ ಪ್ರಶಸ್ತಿಗೆ ಅರ್ಹ ಸಾಧಕರನ್ನು ಆಯ್ಕೆ ಮಾಡಿದೆ.

ಶೌರ್ಯ ಪ್ರಶಸ್ತಿಗೆ ಅರ್ಹರನ್ನು ಗುರುತಿಸಲು ತೀರ್ಪುಗಾರರಾಗಿ ಭಾಗವಹಿಸಿದ ನಟ ದೇವರಾಜ್‌ ಮತ್ತು ಸೇನಾಧಿಕಾರಿ ಕ್ಯಾ.ನವೀನ್‌ ನಾಗಪ್ಪ ನೇತೃತ್ವದಲ್ಲಿ 10 ಪ್ರಶಸ್ತಿಗೆ 14 ಮಂದಿಯನ್ನು ಅಂತಿಮವಾಗಿ ಆಯ್ಕೆ ಮಾಡ ಲಾಯಿತು. ಗುರುವಾರ ಸುಮಾರು ಎರಡು ಗಂಟೆಗಳಿಗೂ ಅಧಿಕ ಕಾಲ ಆಯ್ಕೆ ಪ್ರಕ್ರಿಯೆ ನಡೆಯಿತು. ಜೂ.23ರಂದು ಪುರಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಶೌರ್ಯ ಪ್ರಶಸ್ತಿ ಪ್ರದಾನ ಮಾಡಲಾಗುವುದು. ತೀರ್ಪುಗಾರರಿಗೆ ‘ಕನ್ನಡಪ್ರಭ' ಪುರವಣಿ ಸಂಪಾದಕ ಗಿರೀಶ್‌ ರಾವ್‌ (ಜೋಗಿ), ಸಹಾಯಕ ಸಂಪಾದಕ ರವಿಶಂಕರ್‌ ಭಟ್‌ ಹಾಗೂ ಸುವರ್ಣನ್ಯೂಸ್‌ ವಾಹಿನಿಯ ಸುದ್ದಿ ವಿಭಾಗದ ಮುಖ್ಯಸ್ಥ ಅಜಿತ್‌ ಹನಮಕ್ಕನವರ್‌ ಅವರು ನೆರವಾದರು. 

ಪ್ರಶಸ್ತಿಗಾಗಿ ಒಟ್ಟು 78 ಮಂದಿ ಅರ್ಜಿ ಸಲ್ಲಿಸಿದ್ದರು. ಇವರ ಸಾಧನೆ, ಸಾಹಸಗಳನ್ನು ಪರಾಮರ್ಶಿಸಿ ಅಂತಿಮ ವಾಗಿ 28 ಮಂದಿಯ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಸಿದ್ಧಪಡಿಸಲಾಯಿತು. ಈ 28 ಮಂದಿಯ ಸಾಧನೆ- ಸಾಹಸಗಳ ವಿವರಗಳನ್ನು ತೀರ್ಪುಗಾರರ ಮುಂದೆ ಇಡಲಾ ಯಿತು. ಸಾಧಕರ ಸಾಧನೆಗಳ ವಿವರಗಳನ್ನು ಕೂಲಂಕಷವಾಗಿ ಪರಿಶೀಲಿಸಿದ ತೀರ್ಪುಗಾರರು ತೂಗು ಅಳೆದು 10 ಪ್ರಶಸ್ತಿಗೆ 14 ಮಂದಿಯನ್ನು ಆರಿಸಿದರು. ಏಳು ವ್ಯಕ್ತಿಗತ ಪ್ರಶಸ್ತಿ ಸೇರಿ 14 ಮಂದಿಯನ್ನು ಆಯ್ಕೆ ಮಾಡಲಾಗಿದೆ.

ನಟ ದೇವರಾಜ್‌, ಕ್ಯಾ.ನವೀನ್‌ ತೀರ್ಪುಗಾರರು: ಆಯ್ಕೆ ಪ್ರಕ್ರಿಯೆ ನಡೆದ ಬಳಿಕ ಮಾತನಾಡಿದ ನಟ ದೇವರಾಜ್‌, ಕನ್ನಡಪ್ರಭ-ಸುವರ್ಣನ್ಯೂಸ್‌ ವಾಹಿನಿ ಪ್ರದಾನ ಮಾಡಲು ಮುಂದಾಗಿರುವ ಶೌರ್ಯ ಪ್ರಶಸ್ತಿಯು ಅತ್ಯುತ್ತಮ ಕೆಲಸವಾಗಿದೆ. ಜೀವದ ಹಂಗು ತೊರೆದು ಜೀವನ್ಮರಣದಲ್ಲಿ ಹೋರಾಟ ನಡೆಸುತ್ತಿರುವವರ ರಕ್ಷಣೆ ಮಾಡುವ ಮೂಲಕ ಶೌರ್ಯ ಮೆರೆದವರ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ಹೇಳಿದರು. ಮತ್ತೋರ್ವ ತೀರ್ಪುಗಾರ ಕ್ಯಾ.ನವೀನ್‌ ನಾಗಪ್ಪ ಮಾತನಾಡಿ, ರಾಜ್ಯದಲ್ಲಿ ಇಂತಹ ಗುರುತಿಸುವ ಕೆಲಸವಾಗಬೇಕು. ರಸ್ತೆ ಅಪಘಾತ, ಅಗ್ನಿ ಅವಘಡ ಸೇರಿದಂತೆ ಇತರೆ ಅವಘಡದಲ್ಲಿ ಸಿಲುಕಿ ಪ್ರಾಣ ಉಳಿಸಿಕೊಳ್ಳಲು ಹೋರಾಟ ನಡೆಸುತ್ತಿರುತ್ತಾರೆ. ತಕ್ಷಣ ಅವರ ರಕ್ಷಣೆ ಧಾವಿಸುವುದು ಸುಲಭದ ಮಾತಲ್ಲ. ತಮ್ಮ ಜೀವದ ಹಂಗು ತೊರೆದು ರಕ್ಷಣೆಗೆ ಮುಂದಾಗುವ ಪ್ರತಿಯೊಬ್ಬರ ಸಾಧಕರ ಸಾಧನೆಯು ಸಮಾಜಕ್ಕೆ ಮಾದರಿ ಎಂದರು.

epaper.kannadaprabha.in

click me!