ಮ್ಯಾಚ್ ಫಿಕ್ಸಿಂಗ್ ಮೂಲಕ ಪಾಕಿಸ್ತಾನ ಫೈನಲ್'ಗೇರಿತೇ? ಮಾಜಿ ಪಾಕ್ ಆಟಗಾರನ ಆರೋಪ

By Suvarna Web DeskFirst Published Jun 16, 2017, 12:45 PM IST
Highlights

ಅಮೀರ್ ಸೊಹೇಲ್ ಈಗ ಯೂಟರ್ನ್ ತೆಗೆದುಕೊಂಡಿದ್ದಾರೆ. ತಮ್ಮ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಪಾಕ್ ಮಾಜಿ ಕ್ರಿಕೆಟಿಗ ಸ್ಪಷ್ಟಪಡಿಸಿದ್ದಾರೆ. "ಪಾಕಿಸ್ತಾನ ಮತ್ತು ಇಂಗ್ಲೆಂಡ್ ನಡುವಿನ ಸೆಮಿಫೈನಲ್ ಪಂದ್ಯಕ್ಕಿಂತ ಮುಂಚೆ ತಾನು ಆ ವಿಡಿಯೋದಲ್ಲಿ ಮಾತನಾಡಿದ್ದೆ. ತಾನು ಹೇಳಿದ ಸಂದರ್ಭವೇ ಬೇರೆಯಾಗಿತ್ತು. ಅದು ಈಗ ಪ್ರಸ್ತುತವಲ್ಲ," ಎಂದು ಅಮೀರ್ ಸೊಹೇಲ್ ಸ್ಪಷ್ಟನೆ ನೀಡಿದ್ದಾರೆ.

ನವದೆಹಲಿ(ಜೂನ್ 16): ಚಾಂಪಿಯನ್ಸ್ ಟ್ರೋಫಿ ಟೂರ್ನಿ ಫೈನಲ್'ಗೇರುವ ಮೂಲಕ ಪಾಕಿಸ್ತಾನವು ಎಲ್ಲರಿಗೂ ಶಾಕ್ ಕೊಟ್ಟಿದೆ. ಈಗ ಅದಕ್ಕಿಂತಲೂ ಶಾಕ್ ಕೊಡುವಂಥ ಸುದ್ದಿ ಬಂದಿದೆ. ಪಾಕಿಸ್ತಾನವು ಸ್ವಂತ ಸಾಧನೆ ಮೂಲಕ ಫೈನಲ್ ತಲುಪಿದೆ ಎಂದು ಮಾಜಿ ಪಾಕ್ ಆಟಗಾರ ಆಮಿರ್ ಸೊಹೇಲ್ ಆರೋಪಿಸಿರುವ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟವಾಗಿದೆ. ಪಾಕಿಸ್ತಾನದ "ಸಮಾ" ಸುದ್ದಿ ವಾಹಿನಿಯಲ್ಲಿ ಮಾತನಾಡುತ್ತಿದ್ದ ಅಮೀರ್ ಸೊಹೇಲ್, ಪಾಕಿಸ್ತಾನ ಕ್ರಿಕೆಟ್ ತಂಡ ಸ್ವಂತ ಬಲದಲ್ಲಿ ಫೈನಲ್ ತಲುಪಿಲ್ಲ. ಬಾಹ್ಯ ಶಕ್ತಿಗಳು ಆ ತಂಡಕ್ಕೆ ಸಹಾಯ ಮಾಡಿವೆ ಎಂದು ಪರೋಕ್ಷವಾಗಿ ಮ್ಯಾಚ್'ಫಿಕ್ಸಿಂಗ್ ಆರೋಪ ಮಾಡಿದ್ದಾರೆ.

"ನೀವೇನೂ ಘನ ಸಾಧನೆ ಮಾಡಿಲ್ಲವೆಂದು ಸರ್ಫರಾಜ್'ಗೆ ತಿಳಿಸಿಕೊಡಬೇಕಾಗುತ್ತದೆ. ಆಟ ಗೆಲ್ಲಲು ಯಾರೋ ಸಹಾಯ ಮಾಡಿದ್ದಾರೆ. ನೀವು ಖುಷಿಪಡಲು ಕಾರಣವೇ ಇಲ್ಲ. ತೆರೆ ಹಿಂದೆ ಏನು ನಡೆಯುತ್ತದೆ ಎಂಬುದು ನಮಗೆಲ್ಲಾ ಗೊತ್ತಿದೆ. ಈ ಬಗ್ಗೆ ವಿವರವಾಗಿ ತಿಳಿಸಲು ಇಷ್ಟಪಡುವುದಿಲ್ಲ. ನನ್ನನ್ನು ಕೇಳಿದರೆ, ಅಭಿಮಾನಿಗಳ ಪ್ರಾರ್ಥನೆ ಮತ್ತು ದೈವ ಕೃಪೆಯಿಂದ ಅವರು ಪಂದ್ಯಗಳನ್ನ ಗೆದ್ದಿದ್ದಾರೆ. ಬಾಹ್ಯ ಕಾರಣಗಳು ಅವರನ್ನು ಫೈನಲ್'ಗೆ ತಂದಿವೆಯೇ ಹೊರತು ಮೈದಾನದಲ್ಲಿಯ ಅವರ ಸಾಧನೆಗಳಿಂದಲ್ಲ. ಆಟಗಾರರು ಈಗ ವಾಸ್ತವ ಸ್ಥಿತಿ ಅರಿತುಕೊಂಡು ಒಳ್ಳೆಯ ಕ್ರಿಕೆಟ್ ಆಡುವತ್ತ ಗಮನ ಹರಿಸಲಿ," ಎಂದು ಅಮೀರ್ ಸೊಹೇಲ್ ಹೇಳಿದ್ದು ಟಿವಿ ಮಾಧ್ಯಮಗಳಲ್ಲಿ ಬಿತ್ತರವಾಗಿದೆ.

ಆದರೆ, ಅಮೀರ್ ಸೊಹೇಲ್ ಈಗ ಯೂಟರ್ನ್ ತೆಗೆದುಕೊಂಡಿದ್ದಾರೆ. ತಮ್ಮ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಪಾಕ್ ಮಾಜಿ ಕ್ರಿಕೆಟಿಗ ಸ್ಪಷ್ಟಪಡಿಸಿದ್ದಾರೆ. "ಪಾಕಿಸ್ತಾನ ಮತ್ತು ಇಂಗ್ಲೆಂಡ್ ನಡುವಿನ ಸೆಮಿಫೈನಲ್ ಪಂದ್ಯಕ್ಕಿಂತ ಮುಂಚೆ ತಾನು ಆ ವಿಡಿಯೋದಲ್ಲಿ ಮಾತನಾಡಿದ್ದೆ. ತಾನು ಹೇಳಿದ ಸಂದರ್ಭವೇ ಬೇರೆಯಾಗಿತ್ತು. ಅದು ಈಗ ಪ್ರಸ್ತುತವಲ್ಲ," ಎಂದು ಅಮೀರ್ ಸೊಹೇಲ್ ಸ್ಪಷ್ಟನೆ ನೀಡಿದ್ದಾರೆ.

ಪಾಕ್ ಗೆಲುವಿನ ಹಾದಿ:
ಪ್ರಸ್ತುತ ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಕಿಸ್ತಾನವು ಭಾರತದ ವಿರುದ್ಧ ಹೀನಾಯ ಸೋಲಿನೊಂದಿಗೆ ಟೂರ್ನಿಯಲ್ಲಿ ಕೆಟ್ಟ ಆರಂಭ ಪಡೆದಿತ್ತು. ಅದಾದ ಬಳಿಕ, ದಕ್ಷಿಣ ಆಫ್ರಿಕಾ ವಿರುದ್ಧ ಮಳೆ ಮತ್ತು ಡಕ್ವರ್ತ್ ಲೂಯಿಸ್ ನಿಯಮದ ಸಹಾಯದಿಂದ ರೋಚಕ ಗೆಲುವು ಪಡೆದಿತ್ತು. ಮೂರನೇ ಹಾಗೂ ಕೊನೆಯ ಲೀಗ್ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಸುಲಭ ಗೆಲುವು ದಾಖಲಿಸಿ ಸೆಮಿಫೈನಲ್ ತಲುಪಿತ್ತು.

ಸೆಮಿಫೈನಲ್'ನಲ್ಲಿ ಇಂಗ್ಲೆಂಡ್ ವಿರುದ್ಧ ಅನಿರೀಕ್ಷಿತವಾಗಿ ಸುಲಭ ಗೆಲುವು ಪಡೆದು ಫೈನಲ್'ಗೂ ತಲುಪಿದೆ. ಜೂನ್ 18ರಂದು ಭಾರತ ಮತ್ತು ಪಾಕಿಸ್ತಾನ ನಡುವೆ ಚಾಂಪಿಯನ್ಸ್ ಟ್ರೋಫಿ ಫೈನಲ್ ಹಣಾಹಣಿ ನಡೆಯಲಿದೆ. ಆದರೆ, ಆಮೀರ್ ಸೊಹೇಲ್ ಆರೋಪ ಸತ್ಯವೇ ಆಗಿದ್ದರೆ, ಪಾಕಿಸ್ತಾನದ ಯಾವ ಮ್ಯಾಚ್'ಗಳು ಫಿಕ್ಸ್ ಆಗಿದ್ದವು ಎಂಬುದು ಗೊತ್ತಾಗಬೇಕಿದೆ.

click me!