ಅಂತರಾಷ್ಟ್ರೀಯ ಮಟ್ಟದಲ್ಲಿ ಸಬ್ ಕ ಸಾಥ್ ಸಬ್ ಕ ವಿಶ್ವಾಸ್: ಪ್ರಧಾನಿ ಮೋದಿ

By Suvarna Web DeskFirst Published Jun 4, 2017, 5:35 PM IST
Highlights

ಎಲ್ಲರನ್ನು ಅಭಿವೃದ್ದಿಯತ್ತ ಕೊಂಡೊಯ್ಯುವುದರ ಮೂಲಕ ದೇಶದಲ್ಲಿ ಮಾತ್ರವಲ್ಲದೇ ಅಂತರಾಷ್ಟ್ರೀಯ ಮಟ್ಟದಲ್ಲಿ ಸಬ್ ಕ ಸಾಥ್ ಸಬ್ ಕ ವಿಶ್ವಾಸ್ ಎನ್ನುವ ತತ್ವವನ್ನು ಭಾರತ ನಂಬುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಪೀಟರ್ಸ್’ಬರ್ಗ್ (ಜೂ.04): ಎಲ್ಲರನ್ನು ಅಭಿವೃದ್ದಿಯತ್ತ ಕೊಂಡೊಯ್ಯುವುದರ ಮೂಲಕ ದೇಶದಲ್ಲಿ ಮಾತ್ರವಲ್ಲದೇ ಅಂತರಾಷ್ಟ್ರೀಯ ಮಟ್ಟದಲ್ಲಿ ಸಬ್ ಕ ಸಾಥ್ ಸಬ್ ಕ ವಿಶ್ವಾಸ್ ಎನ್ನುವ ತತ್ವವನ್ನು ಭಾರತ ನಂಬುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಸಬ್ ಕಾ ಸಾಥ್ ಸಬ್ ಕ ವಿಶ್ವಾಸ್ ಎನ್ನುವುದರಲ್ಲಿ ನಾವು ನಂಬಿಕೆಯಿಟ್ಟಿದ್ದೇವೆ. ಇದು ಕೇವಲ ದೇಶದೊಳಗೆ ಮಾತ್ರವಲ್ಲ ಬದಲಿಗೆ ಅಂತರಾಷ್ಟ್ರೀಯ ಮಟ್ಟದಲ್ಲೂ ಕೂಡಾ ನಾವಿದನ್ನು ನಂಬುತ್ತೇವೆ. ಪ್ರತಿಯೊಬ್ಬರನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ನಾವು ಬಯಸುತ್ತೇವೆ. ನಾವು ಜಗತ್ತಿನ ಬಗ್ಗೆ ಮಾತನಾಡುವಾಗ ಕಳೆದ 20-30 ವರ್ಷಗಳಲ್ಲಿ ಆದ ಬದಲಾವಣೆಯ ಬಗ್ಗೆ ಗಮನ ಹರಿಸಬೇಕು. ಇಂದು ಪ್ರತಿಯೊಂದು ದೇಶ ಇನ್ನೊಂದು ದೇಶದೊಂದಿಗೆ  ಆಂತರಿಕ ಸಂಪರ್ಕ ಹೊಂದಿದೆ. ಹಾಗಾಗಿ ಒಂದಲ್ಲಾ ಒಂದು ರೀತಿ ಪ್ರತಿಯೊಂದು ದೇಶವು ಇನ್ನೊಂದು ದೇಶವನ್ನು ಅವಲಂಬಿಸಿದೆ ಎಂದು ಪೀಟರ್ಸ್ ಬರ್ಗ್ ಇಂಟರ್’ನ್ಯಾಷನಲ್ ಎಕನಾಮಿಕ್ ಫೋರಮ್ ನಲ್ಲಿ ಹೇಳಿದ್ದಾರೆ.

ಭಾರತ-ರಷ್ಯಾ ನಡುವಿನ ಭಾಂಧವ್ಯ ನಂಬಿಕೆ, ವಿಶ್ವಾಸದ ಮೇಲೆ ನಿಂತಿದೆ.  

click me!