ತಾಯಿಯ ಕಷ್ಟ ನೋಡಲಾಗದ ಈ ಮಕ್ಕಳು ಮಾಡಿದ್ದೇನು ಗೊತ್ತಾ? ನೋಡಿದ್ರೆ ನೀವು ಸಲಾಂ ಎನ್ನುತ್ತೀರಿ!

By Suvarna Web DeskFirst Published Jun 4, 2017, 4:17 PM IST
Highlights

ನಿರ್ದೇಶಕ ರಾಜಮೌಳಿಯ ಭಾರೀ ಸುದ್ದಿ ಮಾಡಿದ್ದ ಸಿನಿಮಾ ಬಾಹುಬಲಿಯಲ್ಲಿ, ತನ್ನ ತಾಯಿ ಶಿವಲಿಂಗಕ್ಕಾಗಿ ದೂರದಿಂದ ನೀರು ಹೊತ್ತು ತರುವುದನ್ನು ಕಂಡ ಮಗ ಶಿವಲಿಂಗವನ್ನೇ ಜಲಪಾತದ ಕೆಳಗೆ ಇರಿಸುತ್ತಾನೆ. ತಾಯಿ ಮಗನ ಮಮತೆಯಿಂದ ಕೂಡಿದ ಈ ದೃಶ್ಯ ಪ್ರೇಕ್ಷಕರ ಮನಗೆದ್ದಿತ್ತು. ಇದೀಗ ಛತ್ತೀಸ್'ಗಡ್'ನ ಇಬ್ಬರು ಬಾಲಕಿಯರೂ ತಮ್ಮ ತಾಯಿಯ ಕಷ್ಟ ನೋಡಲಾರದೆ ನೀರಿಗಾಗಿ ಬಾವಿಯನ್ನೇ ಅಗೆದಿದ್ದಾರೆ. ತಾಯಿ ಎರಡು ಕಿಲೋ ಮೀಟರ್ ದೂರದಿಂದ ನೀರು ಹೊತ್ತುಕೊಂಡು ಬರುವುದನ್ನು ನೋಡಿದ ಮಕ್ಕಳಿಬ್ಬರೂ ಮನೆಯ ಹತ್ತಿರವೇ ಬಾವಿಯನ್ನು ಅಗೆದಿದ್ದು, ಇವರ ಅದೃಷ್ಟದಿಂದ ಕೇವಲ 20 ಅಡಿ ಆಳದಲ್ಲೇ ನೀರು ಸಿಕ್ಕಿರುವುದು ನಿಜಕ್ಕೂ ಅಚ್ಚರಿ ಮೂಡಿಸಿದೆ.

ರಾಯ್ಪುರ(ಜೂ.04): ನಿರ್ದೇಶಕ ರಾಜಮೌಳಿಯ ಭಾರೀ ಸುದ್ದಿ ಮಾಡಿದ್ದ ಸಿನಿಮಾ ಬಾಹುಬಲಿಯಲ್ಲಿ, ತನ್ನ ತಾಯಿ ಶಿವಲಿಂಗಕ್ಕಾಗಿ ದೂರದಿಂದ ನೀರು ಹೊತ್ತು ತರುವುದನ್ನು ಕಂಡ ಮಗ ಶಿವಲಿಂಗವನ್ನೇ ಜಲಪಾತದ ಕೆಳಗೆ ಇರಿಸುತ್ತಾನೆ. ತಾಯಿ ಮಗನ ಮಮತೆಯಿಂದ ಕೂಡಿದ ಈ ದೃಶ್ಯ ಪ್ರೇಕ್ಷಕರ ಮನಗೆದ್ದಿತ್ತು. ಇದೀಗ ಛತ್ತೀಸ್'ಗಡ್'ನ ಇಬ್ಬರು ಬಾಲಕಿಯರೂ ತಮ್ಮ ತಾಯಿಯ ಕಷ್ಟ ನೋಡಲಾರದೆ ನೀರಿಗಾಗಿ ಬಾವಿಯನ್ನೇ ಅಗೆದಿದ್ದಾರೆ. ತಾಯಿ ಎರಡು ಕಿಲೋ ಮೀಟರ್ ದೂರದಿಂದ ನೀರು ಹೊತ್ತುಕೊಂಡು ಬರುವುದನ್ನು ನೋಡಿದ ಮಕ್ಕಳಿಬ್ಬರೂ ಮನೆಯ ಹತ್ತಿರವೇ ಬಾವಿಯನ್ನು ಅಗೆದಿದ್ದು, ಇವರ ಅದೃಷ್ಟದಿಂದ ಕೇವಲ 20 ಅಡಿ ಆಳದಲ್ಲೇ ನೀರು ಸಿಕ್ಕಿರುವುದು ನಿಜಕ್ಕೂ ಅಚ್ಚರಿ ಮೂಡಿಸಿದೆ.

ಈ ಮಕ್ಕಳಿಗೆ ತಾಯಿಯ ಮೇಲಿರುವ ಪ್ರೀತಿ ಹಾಗೂ ವಿಶ್ವಾಸ ಕಂಡ ಪ್ರತಿಯೊಬ್ಬರೂ ಈಗ ತಲೆಬಾಗಿದ್ದಾರೆ. ಛತ್ತೀಸ್'ಗಡ್'ನ ಸಂಸದೀಯ ಸಚಿವೆ ಚಂಪಾದೇವಿ ಕೂಡಾ ಈ ಮಕ್ಕಳ ವಿಶ್ವಾಸವನ್ನು ಹೊಗಳಿ ಕೊಂಡಾಡಿದ್ದಾರೆ. ಅಲ್ಲದೇ ತಾನು ನೀಡಬಹುದಾಧ ಎಲ್ಲಾ ರೀತಿಯ ಸಹಾಯವನ್ನು ಮಾಡುವುದಾಗಿ ತಿಳಿಸಿದ್ದಾರೆ.

ಕಸಿಯಾಪುರ ಎಂಬಲ್ಲಿ ಒಟ್ಟು 15 ಕುಟುಂಬಗಳು ವಾಸವಿವೆ.. ಇಲ್ಲಿ ಅವರಿಗಾಗಿ 3 ಹ್ಯಾಂಡ್ ಪಂಪ್'ಗಳ ವ್ಯವಸ್ಥೆಯನ್ನೂ ಮಾಡಲಾಗಿದೆಯಂತೆ. ಆದರೆ ಇವುಗಳಲ್ಲಿ ಎರಡು ಪಂಪ್'ಗಳು ಕೆಟ್ಟಿದ್ದು, ಉಳಿದೊಂದರಲ್ಲಿ ಕಲುಷಿತ ನೀರು ಬರುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಅಲ್ಲಿನ ಜನರು ನೀರಿಗಘಾಇ ಎರಡು ಕಿಲೋ ಮೀಟರ್ ದೂರ ನಡೆಯಬೇಕಾಗುತ್ತದೆ.

ತನ್ನ ಮನೆಗೆ ನೀರು ತರಲೆಂದು ಶಾಂತಿ ಹಾಗೂ ವಿಜ್ಞಾಂತಿ ಎಂಬವರ ತಾಯಿಯೂ 2 ಕಿಲೋ ಮೀಟರ್ ದೂರ ನೀರಿಗಾಗಿ ಹೋಗುತ್ತಿದ್ದರು. ತನ್ನ ತಾಯಿಯ ಈ ಕಷ್ಟ ಕಂಡ ಮಕ್ಕಳಿಬ್ಬರೂ ಮನೆ ಪಕ್ಕದಲ್ಲೇ ಬಾವಿಯೊಂದನ್ನು ತೋಡಲು ನಿರ್ಧರಿಸಿದ್ದು, ಎಲ್ಲಾ ಸಮಸ್ಯೆಗಳನ್ನೂ ತಮ್ಮ ಧೃಡ ವಿಶ್ವಾಸದಿಂದಲೇ ಪರಿಹರಿಸಿದ್ದಾರೆ.

ಇನ್ನು ಮಕ್ಕಳು ತಾವು ಮನೆಯ ಬಳಿ ಬಾವಿ ತೋಡುತ್ತೇವೆಂದು ಮನೆಯವರ ಬಳಿ ತಿಳಿಸಿದಾಗ eಲ್ಲರೂ ಅವರನ್ನು ನೋಡಿ ನಕ್ಕಿದ್ದರಂತೆ. ಆದರೆ ಹಠ ಬಿಡದೇ ಬಾವಿ ತೋಡಲು ಮುಂದಾದ ಮಕ್ಕಳ ವಿಶ್ವಾಸ ಕಂಡ ಮನೆಯವರು ಅವರಿಗೆ ತಮ್ಮ ಕೈಯ್ಯಲ್ಲಾಗುವ ಸಹಾಯ ಮಾಡಿದ್ದಾರೆ.

ಕೃಪೆ: NDTv

click me!