ಉಡುಪಿಯಲ್ಲಿ ತೈಲ ಸಂಗ್ರಹ: ಅಬುದಾಭಿ ಕಂಪನಿ ಜತೆ ಒಪ್ಪಂದ

By Web DeskFirst Published Nov 13, 2018, 4:30 PM IST
Highlights

ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಬಳಕೆಗೆ ತೈಲ ಸಂಗ್ರಹಕ್ಕೆ ಭಾರತ ಯುಎಇ ಜೊತೆ ಈ ವರ್ಷ ಮಾಡಿಕೊಂಡ ಎರಡನೇ ಒಪ್ಪಂದ ಇದಾಗಿದೆ ಎಂದು ತೈಲ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ. 

ನವದೆಹಲಿ(ನ.13): ಕರ್ನಾಟಕದ ಉಡುಪಿ ಜಿಲ್ಲೆಯ ಪಾದೂರಿನ ಭೂಗತ ತೈಲ ಸಂಗ್ರಹಾಗಾರದಲ್ಲಿ ತೈಲ ಸಂಗ್ರಹಣೆಗೆ, ಅಬುಧಾಬಿ ನ್ಯಾಷನಲ್ ಆಯಿಲ್ ಕಾರ್ಪರೇಷನ್ ಜೊತೆ ಭಾರತ ಸರ್ಕಾರ ಸೋಮವಾರ ಒಪ್ಪಂದ ಮಾಡಿಕೊಂಡಿದೆ.

ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಬಳಕೆಗೆ ತೈಲ ಸಂಗ್ರಹಕ್ಕೆ ಭಾರತ ಯುಎಇ ಜೊತೆ ಈ ವರ್ಷ ಮಾಡಿಕೊಂಡ ಎರಡನೇ ಒಪ್ಪಂದ ಇದಾಗಿದೆ ಎಂದು ತೈಲ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ. 

ಮಂಗಳೂರು, ಪಾದೂರು ಮತ್ತು ವಿಶಾಖಪಟ್ಟಣಂಗಳಲ್ಲಿ ಕಲ್ಲಿನ ಗುಹೆಯ ಒಳಗೆ 53.3 ಲಕ್ಷ ಟನ್ ಸಾಮರ್ಥ್ಯದ ಇಂಧನ ಸಂಗ್ರಹಣಾಗಾರವನ್ನು ಭಾರತ ನಿರ್ಮಿಸಿದೆ.

[* ಸಾಂದರ್ಭಿಕ ಚಿತ್ರ ಬಳಸಲಾಗಿದೆ]

click me!