ಶೀಘ್ರದಲ್ಲೇ ಪೆಟ್ರೋಲ್, ಡೀಸೆಲ್ ಗಾಡಿಗಳಿಗೆ ಬ್ರೇಕ್?

By Web DeskFirst Published Nov 13, 2018, 3:27 PM IST
Highlights

ಇಪಿಸಿಎ ಸಮಿತಿ ಅಧ್ಯಕ್ಷ ಭೂರೆ ಲಾಲ್ ತಮ್ಮ ಪತ್ರದಲ್ಲಿ ’ದೆಹಲಿಯ ಹವಾಮಾನದಲ್ಲಿ ಸುಧಾರಣೆಯಾಗುತ್ತಿಲ್ಲ. ಹೀಗಾಗಿ ರಾಷ್ಟ್ರೀಯ ರಾಜಧಾನಿಯಲ್ಲಿ ಕೇವಲ ಸಿಎನ್‌ಜಿ ವಾಹನಗಳಿಗಷ್ಟೇ ಪರವಾನಿಗೆ ನೀಡಬೇಕೆಂದು’ ಸ್ಪಷ್ಟಪಡಿಸಿದ್ದಾರೆ. ಅಲ್ಲದೇ ಇಪಿಸಿಎ ಈ ಕುರಿತಾಗಿ ಮಂಗಳವಾರದಂದು ವಿಭಿನ್ನ ವಿಭಾಗಗಳೊಂದಿಗೆ ಮಾತುಕತೆ ನಡೆಸಲಿದೆ.

ನವದೆಹಲಿ[ನ.13]: ರಾಷ್ಟ್ರೀಯ ರಾಜಧಾನಿ ದೆಹಲಿಯಲ್ಲಿ ವಾಯು ಮಾಲಿನ್ಯ ಕಡಿಮೆಯಾಗದಿದ್ದಲ್ಲಿ ಎಲ್ಲಾ ಪೆಟ್ರೋಲ್- ಡೀಸೆಲ್ ವಾಹನಗಳ ಬ್ಯಾನ್ ಮಾಡುವ ಸಾಧ್ಯತೆಗಳಿವೆ. ವಾಯು ಮಾಲಿನ್ಯ ತಡೆಯಲು ಸುಪ್ರೀಂ ಕೋರ್ಟ್ ರಚಿಸಿರುವ ಇಪಿಸಿಎ ಸಮಿತಿಯ ಅಧ್ಯಕ್ಷ ಭೂರೆ ಲಾಲ್ ಈ ಕುರಿತಾಗಿ ಪತ್ರವೊಂದನ್ನು ಬರೆದು ವಾಯು ಮಾಲಿನ್ಯ ತಡೆಯಲು ಇದನ್ನು ಹೊರತುಪಡಿಸಿ ಬೇರೆ ದಾರಿ ಇಲ್ಲ. ಹೀಗಾಗಿಯೇ ಇಂತಹ ಕಠಿಣ ಹೆಜ್ಜೆ ಇಡಬೆಕಾಗುತ್ತದೆ. ಮಾಲಿನ್ಯ ತಡೆಯಲು ಸುಪ್ರಿಂ ಕೋರ್ಟ್ ರಚಿಸಿರುವ ಈ ಸಮಿತಿಯು ಕೇವಲ ಸಿಎನ್‌ಜಿ ವಾಹನಗಳನ್ನಷ್ಟೇ ಚಲಾಯಿಸುವುದು ಸೂಕ್ತ ಎಂಬ ಸಲಹೆ ನೀಡಿದ್ದಾರೆ.

ಇಪಿಸಿಎ ಸಮಿತಿ ಅಧ್ಯಕ್ಷ ಭೂರೆ ಲಾಲ್ ತಮ್ಮ ಪತ್ರದಲ್ಲಿ ’ದೆಹಲಿಯ ಹವಾಮಾನದಲ್ಲಿ ಸುಧಾರಣೆಯಾಗುತ್ತಿಲ್ಲ. ಹೀಗಾಗಿ ರಾಷ್ಟ್ರೀಯ ರಾಜಧಾನಿಯಲ್ಲಿ ಕೇವಲ ಸಿಎನ್‌ಜಿ ವಾಹನಗಳಿಗಷ್ಟೇ ಪರವಾನಿಗೆ ನೀಡಬೇಕೆಂದು’ ಸ್ಪಷ್ಟಪಡಿಸಿದ್ದಾರೆ. ಅಲ್ಲದೇ ಇಪಿಸಿಎ ಈ ಕುರಿತಾಗಿ ಮಂಗಳವಾರದಂದು ವಿಭಿನ್ನ ವಿಭಾಗಗಳೊಂದಿಗೆ ಮಾತುಕತೆ ನಡೆಸಲಿದೆ.

'ವಾಹನಗಳ ಮೇಲೆ ನಿಯಂತ್ರಣ ಹೇರಲು ಈವರೆಗೂ ದೆಹಲಿಯಲ್ಲಿ ವಾಹನಗಳಿಗೆ ಸ್ಟಿಕರ್ ಲಗತ್ತಿಸುವ ಕೆಲಸ ಆರಂಭವಾಗಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ವಾಹನಗಳನ್ನು ಗುರುತಿಸುವುದು ಕಷ್ಟ. ಇದೇ ಕಾರಣದಿಂದ ಎಲ್ಲಾ ವಾಹನಗಳಲ್ಲಿ ಕೆಲ ಸಮಯದವರೆಗೆ ಬ್ಯಾನ್ ಮಾಡಬೇಕಾಗುತ್ತದೆ' ಎಂದು ಇಪಿಸಿಎ ಸಮಿತಿ ಅಧ್ಯಕ್ಷ ಭೂರೆ ಲಾಲ್ ತಿಳಿಸಿದ್ದಾರೆ.

click me!