ಕೆಂಪು ಕೋಟೆಯಲ್ಲಿ ಮೋದಿ ಧ್ವಜಾರೋಹಣ, ರಾಜ್ಯದಲ್ಲಿ SDPI ಬ್ಯಾನ್ ಆಂದೋಲನ: ಆ.15ರ ಟಾಪ್ 10 ಸುದ್ದಿ!

By Suvarna NewsFirst Published Aug 15, 2020, 4:55 PM IST
Highlights

ದೇಶದೆಲ್ಲೆಡೆ ಸ್ವಾತಂತ್ರ್ಯ ದಿನಾಚರಣೆ  ಸಂಭ್ರಮ ಮನೆಮಾಡಿದೆ.  ಕೆಂಪುಕೋಟೆಯಲ್ಲಿ ಪ್ರಧಾನಿ ಮೋದಿ 74ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಧ್ವಜಾರೋಹಣ ಮಾಡಿದ್ದಾರೆ.  ಲಡಾಖ್ ಗಡಿಯಲ್ಲಿ ಭಾರತೀಯ ಯೋಧರು ತಿರಂಗ ಹಾರಿಸಿದ್ದಾರೆ. ಕೊರೋನಾ ಟೆಸ್ಟ್ ನೆಗೆಟಿವ್ ಬಂದ ಬೆನ್ನಲ್ಲೇ ಸಿಎಸ್‌ಕೆ ನಾಯಕ ಚೆನ್ನೈಗೆ ಆಗಮಿಸಿದ್ದಾರೆ. ಸುಶಾಂತ್ ಸಿಂಗ್ ಖಾತೆಯಿಂದ 15 ಕೋಟಿ ರೂಪಾಯಿ ಹೊರಹೋಗಿರುವುದನ್ನು ಐಡಿ ಸ್ಪಷ್ಟಪಡಿಸಿದೆ. ರಾಜ್ಯದಲ್ಲಿ SDPI ಬ್ಯಾನ್ ಆಂದೋಲನ, ಐಪಿಎಲ್ ವೇಳೆ 10 ಸೆಕೆಂಡ್ ಜಾಹೀರಾತಿಗೆ 10 ಲಕ್ಷ ಸೇರಿದಂತೆ ಆಗಸ್ಟ್ 15ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.
 

14 ಸಾವಿರ ಅಡಿ ಎತ್ತರದ ಲಡಾಖ್ ಗಡಿಯಲ್ಲಿ ಮೊಳಗಿದ ಜೈ ಹಿಂದ್ ಘೋಷಣೆ!...

ಕೊರೋನಾತಂಕ ನಡುವೆಯೂ ದೇಶಾದ್ಯಂತ 74ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಗಿದೆ. ಪ್ರಧಾನಿ ಮೋದಿ ದೆಹಲಿಯ ಕೆಂಪು ಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿ ದೇಶವನ್ನುದ್ದೇಶಿಸಿ ಭಾಷಣ ಮಾಡಿದ್ದಾರೆ, ಈ ವೇಳೆ ಕಾಲು ಕರೆದು ಜಗಳಕ್ಕೆ ನಿಂತ ಚೀನಾಗೂ ಗುದ್ದು ನೀಡಿದ್ದಾರೆ. ಇನ್ನು ಲಡಾಖ್‌ ಗಡಿ ರಕ್ಷಣೆಯಲ್ಲಿ ತೊಡಗಿರುವ ಐಟಿಬಿಪಿ ಯೋಧರು 16 ಸಾವಿರ ಅಡಿ ಎತ್ತರದಲ್ಲಿ ತ್ರಿವರ್ಣ ಧ್ವಜ ಹಾರಿಸುವ ಮೂಲಕ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿದ್ದಾರೆ.

74ನೇ ಸ್ವಾತಂತ್ರ್ಯೋತ್ಸವ: ಕೆಂಪುಕೋಟೆಯಲ್ಲಿ ತ್ರಿವರ್ಣ ಧ್ವಜ ವೈಭವ!...

 ಕೊರೋನಾತಂಕ ನಡುವೆಯೇ 74ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಅತ್ಯಂತ ಸರಳವಾಗಿ ಆಚರಿಸಲಾಗುತ್ತಿದೆ. ಈಗಾಗಲೇ ಪ್ರಧಾನ ಮಂತ್ರಿ ನರೇಂದ್ರ ಮೋದಿ ರಾಷ್ಟ್ರ ರಾಜಧಾನಿ ದೆಹಲಿಯ ಕೆಂಪು ಕೋಟೆಯಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿದ್ದಾರೆ.

7 ಬಾರಿ ಕೆಂಪುಕೋಟೆಯಲ್ಲಿ ತ್ರಿವರ್ಣ ಧ್ವಜ ಹಾರಿಸಿದ ಮೊದಲ ಕಾಂಗ್ರೆಸ್ಸೇತರ ಪಿಎಂ ನರೇಂದ್ರ ಮೋದಿ!

ಪ್ರಧಾನ ಮಂತ್ರಿ ನರೇಂದ್ರ ಮೋದಿ ಶನಿವಾರ ಬೆಳಗ್ಗೆ 7.30ಕ್ಕೆ ದೆಹಲಿಯ ಕೆಂಪುಕೋಟೆಯಲ್ಲಿ ತ್ರಿವರ್ಣ ಧ್ವಜ ಹಾರಿಸುವ ಮೂಲಕ 74ನೇ ಸ್ವಾತಂತ್ರ್ಯೋತ್ಸವ ಆಚರಿಸಿದ್ದಾರೆ. ಈ ಬಾರಿ ಧ್ವಜಾರೋಹಣ ಮಾಡುವ ಮೂಲಕ ಪಿಎಂ ಮೋದಿ ಹೊಸ ದಾಖಲೆಯೊಂದನ್ನು ಬರೆದಿದ್ದಾರೆ. 

ಕೊರೋನಾ ನೆಗೆಟಿವ್‌ ಬೆನ್ನಲ್ಲೇ ಚೆನ್ನೈಗೆ ಬಂದಿಳಿದ ಎಂ ಎಸ್ ಧೋನಿ...

ಕೊರೋನಾ ಟೆಸ್ಟ್ ನೆಗೆಟಿವ್ ಬಂದ ಬೆನ್ನಲ್ಲೇ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ರಾಂಚಿಯಿಂದ ಹೊರಟು ಅಭ್ಯಾಸ ಶಿಬಿರದಲ್ಲಿ ಪಾಲ್ಗೊಳ್ಳಲು ಚೆನ್ನೈಗೆ ಬಂದಿಳಿದಿದ್ದಾರೆ.

ಶುರುವಾಗಿದೆ ಎಸ್‌ಡಿಪಿಐ ಬ್ಯಾನ್ ಆಂದೋಲನ; ಸರ್ಕಾರ ಮೀನ ಮೇಷ ಎಣಿಸುತ್ತಿರುವುದ್ಯಾಕೆ?...

ಕೆಜಿ ಹಳ್ಳಿ ಗಲಭೆ ಹಿಂದೆ ಎಸ್‌ಡಿಪಿಐ ಕೈವಾಡ ಇರುವುದು ಬಹಳ ಸ್ಷಪ್ಟವಾಗಿದೆ. ಅರೆಸ್ಟ್ ಆದ ಅರೋಪಿಗಳಲ್ಲಿ ಶೇ. 90 ರಷ್ಟು ಅವರೇ ಇರೋದು. ಈ ಸಂಘಟನೆಯ ಮೇಲೆ ಸಾಲು ಸಾಲು ಹತ್ಯೆಗಳ ಸಾಕ್ಷಿಗಳೂ ಇವೆ. ಇಂತಹ ಗಲಭೆಗಳು ಎದ್ದಾಗ ಎಸ್‌ಡಿಪಿಐ ಬ್ಯಾನ್ ಮಾಡಿ ಎಂಬ ಕೂಗು ಶುರುವಾಗುತ್ತದೆ. 

ಸುಶಾಂತ್‌ ಖಾತೆಯಿಂದ 15 ಕೋಟಿ ವರ್ಗ ಸತ್ಯ: ರಿಯಾ ಖಾತೆಗೆ ಹೋಗಿಲ್ಲ!...

ಜೂನ್‌ನಲ್ಲಿ ಸಾವಿಗೀಡಾದ ಬಾಲಿವುಡ್‌ ನಟ ಸುಶಾಂತ್‌ ಸಿಂಗ್‌ ರಜಪೂತ್‌ ಬ್ಯಾಂಕ್‌ ಖಾತೆಯಿಂದ ಅವರ ಪ್ರೇಯಸಿ ರಿಯಾ ಚಕ್ರವರ್ತಿ ಖಾತೆಗೆ ಯಾವುದೇ ದೊಡ್ಡ ಮೊತ್ತದ ಹಣ ವರ್ಗಾವಣೆ ಆಗಿಲ್ಲ ಎಂಬ ಮಾಹಿತಿ ಜಾರಿ ನಿರ್ದೇಶನಾಲಯ (ಇ.ಡಿ.)ದ ಪ್ರಾಥಮಿಕ ತನಿಖೆ ವೇಳೆ ಕಂಡುಬಂದಿದೆ. ಆದರೆ ಸುಶಾಂತ್‌ ಖಾತೆಯಿಂದ 15 ಕೋಟಿ ರು. ಹೊರ ಹೋಗಿರುವುದು ನಿಜ ಎಂದು ಇಡಿ ಮೂಲಗಳು ತಿಳಿಸಿವೆ.

ಚಂದ್ರನ ಮೇಲೆ ಇಟ್ಟಿಗೆ ತಯಾರಿ: ಬೆಂಗಳೂರು ವಿಜ್ಞಾನಿಗಳ ಸಂಶೋಧನೆ!...

ಚಂದ್ರ ಸೇರಿದಂತೆ ಇತರೆ ಗ್ರಹಗಳಲ್ಲಿ ಮಾನವರ ವಾಸಕ್ಕೆ ಪೂರಕ ವಾತಾವರಣ ಇದೆಯೇ ಎಂಬುದನ್ನು ಶೋಧಿಸಲು ವಿಶ್ವಾದ್ಯಂತ ವಿಜ್ಞಾನಿಗಳು ಸಂಶೋಧನೆಯಲ್ಲಿ ತೊಡಗಿರುವಾಗಲೇ, ಚಂದ್ರನ ಮೇಲೆ ‘ಇಟ್ಟಿಗೆ’ ತಯಾರಿಸಲು ಭಾರತೀಯ ವಿಜ್ಞಾನಿಗಳು ಹೊಸ ಮಾರ್ಗ ಶೋಧಿಸಿದ್ದಾರೆ.

ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದಲ್ಲಿ ಹೊಚ್ಚ ಹೊಸ ಮಹೀಂದ್ರ ಥಾರ್ ಅನಾವರಣ!...

ದೇಶದಲ್ಲೆಡೆ 74ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಇದೇ ಸಂತಸದಲ್ಲಿ ಬಹುನಿರೀಕ್ಷಿತ ಹಾಗೂ ಹಲವು ಬದಲಾವಣೆಗಳನ್ನು ಕಂಡಿರುವ ಹೊಚ್ಚ ಹೊಸ ಮಹೀಂದ್ರ ಥಾರ್ ಅನಾವರಣಗೊಂಡಿದೆ. 

ಪಬ್‌ಜಿ ದಾಸ ಊಟ-ತಿಂಡಿ ಬಿಟ್ಟ.. ಕೊನೆಗೆ ಪ್ರಾಣವನ್ನೂ ಬಿಟ್ಟ!...

ಪಬ್ ಜಿ ಹುಚ್ಚಾಟ ಯುವಕನ ಪ್ರಾಣವನ್ನೇ ಬಲಿ ಪಡೆದಿದೆ.  ಪಬ್ ಜಿಗೆ ದಾಸನಾಗಿದ್ದ  16  ವರ್ಷದ ಯುವಕ ಊಟ-ತಿಂಡಿ ಬಿಟ್ಟು ಜೀವ ಕಳೆದುಕೊಂಡಿದ್ದಾನೆ. 

ಐಪಿಎಲ್ 2020‌ ಕೇವಲ 10 ಸೆಕೆಂಡ್‌ ಜಾಹೀರಾತಿಗೆ 10 ಲಕ್ಷ ರುಪಾಯಿ..!...

13ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ದಿನಗಣನೆ ಆರಂಭವಾಗಿದೆ. ಹೀಗಿರುವಾಗಲೇ ಪ್ರಸಾರದ ಹಕ್ಕು ಹೊಂದಿರುವ ಸ್ಟಾರ್ ಸ್ಪೋರ್ಟ್ ಚಾನೆಲ್ 10 ಸೆಕೆಂಡ್‌ಗಳ ಜಾಹಿರಾತಿಗೆ 10 ಲಕ್ಷ ರುಪಾಯಿಗಳ ದರ ವಿಧಿಸಿದೆ. 

click me!