ಅಮ್ಮಾ ಕ್ಯಾಂಟೀನ್ ರೀತಿ ಅನ್ನಪೂರ್ಣ ಭೋಜನಾಲಯ

By Suvarna Web DeskFirst Published May 4, 2017, 5:39 PM IST
Highlights

ರಾಜ್ಯದಲ್ಲಿಪ್ರತಿಯೊಬ್ಬರಿಗೂಅಗತ್ಯಆಹಾರಒದಗಿಸುವಉದ್ದೇಶದಿಂದಯೋಜನೆಜಾರಿಗೊಳಿಸಲಾಗುತ್ತಿಎಂದುಸಿಎಂಕಚೇರಿಗುರುವಾರಟ್ವಿಟರ್ನಲ್ಲಿಮಾಹಿತಿನೀಡಿದೆ.

ಲಖನೌ(ಮೇ.23): ಬಡವರಿಗೆ ಕಡಿಮೆ ದರದಲ್ಲಿ ಆಹಾರ ಒದಗಿಸುವ ಉದ್ದೇಶದಿಂದ ತಮಿಳುನಾಡಿನಲ್ಲಿ ಅಮ್ಮಾ ಕ್ಯಾಂಟೀನ್ ಮಾದರಿಯಲ್ಲಿ ಉತ್ತರ ಪ್ರದೇಶದಾದ್ಯಂತ ‘ಅನ್ನಪೂರ್ಣ ಭೋಜನಾಲಯ’ಗಳನ್ನು ತೆರೆಯಲು ಸಿಎಂ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ ನಿರ್ಧರಿಸಿದೆ. ರಾಜ್ಯದಲ್ಲಿ ಪ್ರತಿಯೊಬ್ಬರಿಗೂ ಅಗತ್ಯ ಆಹಾರ ಒದಗಿಸುವ ಉದ್ದೇಶದಿಂದ ಈ ಯೋಜನೆ ಜಾರಿಗೊಳಿಸಲಾಗುತ್ತಿ ಎಂದು ಸಿಎಂ ಕಚೇರಿ ಗುರುವಾರ ಟ್ವಿಟರ್‌ನಲ್ಲಿ ಮಾಹಿತಿ ನೀಡಿದೆ. ಹೊಟ್ಟೆ ಹಸಿದವರಿಗೆ ಅನ್ನಪೂರ್ಣ ಭೋಜನಾಲಯಗಳು ಅನಿಯಮಿತ ಆಹಾರ ನೀಡಲಿವೆ. ಭೋಜನಾಲಯಗಳಲ್ಲಿ ಗಂಜಿ, ಚಹಾ, ಅನ್ನ ಸಾಂಬರ್‌ಗೆ 3 ರುಪಾಯಿ ಇರಲಿದ್ದು, ರೋಟಿ, ದಾಲ್ ಮತ್ತು ಅನ್ನದ ಊಟಕ್ಕೆ 5 ರುಪಾಯಿ ದರ ವಿಧಿಸಲು ನಿರ್ಧರಿಸಲಾಗಿದೆ.

click me!