
ಸಿಯೋಲ್(ಡಿ.09): ಭ್ರಷ್ಟಾಚಾರ ಹಗರಣದಲ್ಲಿ ಸಿಲುಕಿರುವ ದಕ್ಷಿಣ ಕೊರಿಯಾ ಅಧ್ಯಕ್ಷೆ ಪಾರ್ಕ್ ಗ್ಯುನ್-ಹ್ಯೆ ಅವರ ವಿರುದ್ಧ ದಕ್ಷಿಣ ಕೊರಿಯಾ ಸಂಸದರು ವಾಗ್ದಂಡನೆ ನಿರ್ಣಯ ಅಂಗೀಕರಿಸಿದ್ದಾರೆ.
ಇದರಿಂದ 'ಚುನಾವಣೆಯ ರಾಣಿ' ಎಂದೇ ಗುರುತಿಸಿಕೊಂಡಿರುವ ಪಾರ್ಕ್ ಅವರು ಸಂಪೂರ್ಣ ಅಧಿಕಾರವನ್ನು ಕಳೆದುಕೊಳ್ಳಲಿದ್ದಾರೆ. ನ್ಯಾಷನಲ್ ಅಸೆಂಬ್ಲಿ ಬ್ಯಾಲೆಟ್ ಪಾರ್ಕ್ ಅವರ ಅಧಿಕಾರವನ್ನು ಪ್ರಧಾನಮಂತ್ರಿಗೆ ಹಸ್ತಾಂತರಿಸಿದೆ.
ಸಂಸದರ ನಿರ್ಣಯವನ್ನು ಅಂಗೀಕರಿಸುವುದೇ ಅಥವಾ ಶಾಶ್ವತವಾಗಿ ಅಧ್ಯಕ್ಷೆಯನ್ನು ವಜಾಗೊಳಿಸುವುದೇ ಎಂಬ ಮುಂದಿನ ನಿರ್ಧಾರವನ್ನು ಸಾಂವಿಧಾನಿಕ ಕೋರ್ಟ್ ಪ್ರಕಟಿಸಲಿದೆ.
300ರಲ್ಲಿ 234 ಸಂಸದರು ನಿರ್ಣಯಕ್ಕೆ ಸಮ್ಮತಿಸಿದ್ದಾರೆ. ಹಗರಣಕ್ಕೆ ಸಂಬಂಧಿಸಿದಂತೆ ಪಾರ್ಕ್ ವಿರುದ್ಧ ಈ ಹಿಂದೆ ಸಾಕಷ್ಟು ಪ್ರತಿಭಟನೆಗಳು ನಡೆದಿದ್ದವು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.