
ಡೆಹರಾಡೂನ್: 27 ವರ್ಷದ ರಾಜಶೇಖರ್ ಭಾರತದ ಸೇನೆಯ ಲೆಫ್ಟಿನೆಂಟ್ ಹುದ್ದೆಗೆ ಕಳೆದ ಶನಿವಾರ ನೇಮಕವಾಗಿದ್ದಾರೆ. ಡೆಹರಾಡೂನ್ ನಲ್ಲಿ ಅವರಿಗೆ ಲೆಫ್ಟಿನೆಂಟ್ ಗೌರವ ದೊರೆತಿದೆ. ಇದರಲ್ಲಿ ಆಶ್ಚರ್ಯ ಪಡುವಂಥದ್ದೂ ಏನೂ ಇಲ್ಲ ಅಂದುಕೊಳ್ಳಬೇಡಿ. ಆದರೆ ಇದಕ್ಕೂ ಮುನ್ನ ರಾಜಶೇಖರ್ ನಡೆಸಿದ ಹೋರಾಟದ ಕತೆಯನ್ನು ಕೇಳಿದರೆ ನಿಮಗೆ ಸೈನಿಕನ ಹೋರಾಟದ ಬದುಕು ಅರ್ಥವಾಗುತ್ತದೆ.
ಕೆಲವೇ ದಿನಗಳ ಹಿಂದೆ ಡೆಹರಾಡೂನ್ ನ ವೈದ್ಯರು ಬಹು ಅಂಗಾಂಗಳ ವೈಫಲ್ಯದಿಂದ ಬಳಲುತ್ತಿದ್ದ ತಮಿಳುನಾಡು ಮೂಲದ ರಾಜಶೇಖರ್ ಬದುಕುವುದು ಅಸಾದ್ಸಾಯ ಎಂಬ ತೀರ್ಧ್ಯಮಾನಕ್ಕೆ ಬಂದಿದ್ದರು/. ಇದೆಲ್ಲದರ ನಡುವೆಯೂ ಸೈನಿಕ ರಾಜಶೇಖರ್ ಸಾವನ್ನು ಹೇಗೆ ಗೆದ್ದು ಬಂದರು ಎಂಬ ರೋಚಕ ಕತೆ ಇಲ್ಲಿದೆ..
ಕಾರ್ಗಿಲ್ ಹುತಾತ್ಮ ತಂದೆಯ ಬೆಟಾಲಿಯನ್‌ಗೆ ಪುತ್ರನೂ ಸೇರ್ಪಡೆ
ನಾನು ಲೆಫ್ಟಿನೆಂಟ್ ಆಗಿ ಅಧಿಕಾರ ವಹಿಸಿಕೊಳ್ಳುವ ಮೊದಲು ತರಬೇತಿಯಲ್ಲಿ ಪಾಲ್ಗೊಂಡಿದ್ದೆ. ಪಾಹ್ಲಾ ಖದಮ್ ತರಬೇತಿಯಲ್ಲಿ ಸೈನ್ಯದ ಕೆಡೆಟ್ ಗಳು ಭಾರ ಹೊತ್ತು 10 ಕಿಮೀ ಓಡಬೇಕಾಗುತ್ತದೆ. ಓಡುತ್ತಿದ್ದ ನಾನು ಇದ್ದಕ್ಕಿದ್ದಂತೆ ನೆಲಕ್ಕೆ ಕುಸಿಯುತ್ತೇನೆ. ನಂತರ ಆಸ್ಪತ್ರೆಯ ಐಸಿಯುದಲ್ಲಿ 40 ದಿನ ಇದ್ದ ನನನ್ನು ಉಳಿಸಿಕೊಳ್ಳಲು ಸಾಧ್ಯವೆ ಇಲ್ಲ. ನಿಮ್ಮ ಕಿಡ್ನಿ ಶೇ. 70 ರಷ್ಟು ಶಕ್ತಿ ಕಳೆದುಕೊಂಡಿದೆ ಎಂದು ವೈದ್ಯರು ವರದಿ ನೀಡುತ್ತಾರೆ.
ಆದರೆ ನಂತರ ನಿಧಾನಕ್ಕೆ ನಾನು ಚೇತರಿಸಿಕೊಳ್ಳುತ್ತೇನೆ. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ನಂತರ ಪ್ರತಿದಿನ ಜಿಮ್ ನಲ್ಲಿ 4 ಗಂಟೆ ಕಳೆಯುತ್ತೇನೆ. ನನಗೆ ಜೀವ ಉಳಿಸಿಕೊಳ್ಳುವುದು ಮಾತ್ರ ಅಂದಿನ ಗುರಿಯಾಗಿರಲಿಲ್ಲ. ಮತ್ತೆ ದೇಶದ ಸೇನೆ ಸೇರಬೇಕು, ತರಬೇತಿಯನ್ನು ಪೂರೈಸಲೇಬೇಕು ಎಂದು ನಿರ್ಧಾರ ಮಾಡಿಕೊಂಡಿರುತ್ತೇನೆ ಎಂದು ತಮ್ಮ ಹೋರಾಟದ ದಿನಗಳನ್ನು ರಾಜಶೆಖರ್ ಮೆಲುಕು ಹಾಕುತ್ತಾರೆ.
ವಿಶ್ವದ ಅತಿ ಎತ್ತರದ ಯುದ್ಧಭೂಮಿ ಸಿಯಾಚಿನ್ ನಲ್ಲಿ ದೇಶ ಸೇವೆ ಮಾಡುವ ಅವಕಾಶ ಇಂದು ರಾಜಶೇಖರ್ ಗೆ ಲಭ್ಯವಾಗಿದೆ. 10 ನೆ ತರಗತಿಯಲ್ಲಿದ್ದಾಗಲೇ ತಂದೆಯನ್ನು ಕಳೆದುಕೊಂಡ ರಾಜಶೇಖರ್ ಹೋರಾಟದಲ್ಲೆ ಬದುಕು ಕಟ್ಟಿಕೊಂಡಿದ್ದು ಬೆಸ್ಟ್ ಮೋಟಿವೆಟರ್ ಪ್ರಶಸ್ತಿಯನ್ನು ಸಹ ಪಡೆದುಕೊಂಡು ಸಕಲರಿಗೆ ಸ್ಫೂರ್ತಿಯ ಸೆಲೆಯಾಗಿ ನಿಂತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.