ಮದ್ಯ ಮುಕ್ತ ರಾಷ್ಟ್ರಕ್ಕೆ ಕೇಂದ್ರ ಕಾನೂನು ಜಾರಿ ಮಾಡಲಿ

Published : Nov 23, 2017, 12:47 PM ISTUpdated : Apr 11, 2018, 01:08 PM IST
ಮದ್ಯ ಮುಕ್ತ ರಾಷ್ಟ್ರಕ್ಕೆ ಕೇಂದ್ರ ಕಾನೂನು ಜಾರಿ ಮಾಡಲಿ

ಸಾರಾಂಶ

ವಿದೇಶದಿಂದ ಕೇಂದ್ರ ಸರ್ಕಾರ ಆಮದು ಮಾಡಿಕೊಳ್ಳುತ್ತಿರುವ ಮದ್ಯವನ್ನು ಸಂಪೂರ್ಣ ನಿಷೇಧಿಸುವುರ ಜತೆಗೆ ಆಮದು ನಿರ್ಬಂಧ ಕಾನೂನು ಜಾರಿಗೆ ತಂದು ದೇಶವನ್ನು ಮದ್ಯಪಾನ ಮುಕ್ತ ಮಾಡುವುದಾದರೆ ನಮ್ಮ ಸರ್ಕಾರ ಸಂಪೂರ್ಣ ಸಹಮತ ಇದೆ ಎಂದರು.

ಬೆಳಗಾವಿ (ನ23): ಕೇಂದ್ರ ಸರ್ಕಾರ ವಿದೇಶದಿಂದ ಆಮದು ಮಾಡಿಕೊಳ್ಳುತ್ತಿರುವ ಮದ್ಯಕ್ಕೆ ನಿರ್ಬಂಧ ಹೇರಿದಲ್ಲಿ ನಮ್ಮ ರಾಜ್ಯದಲ್ಲಿಯೂ ಮದ್ಯಪಾನ ಮತ್ತು ಮದ್ಯ ಮಾರಾಟಕ್ಕೆ ನಿಷೇಧಿಸಲು ನಾನು ಸಿದ್ದ ಎಂದು ಹೇಳುವ ಮೂಲಕ ಸಿಎಂ ಸಿದ್ದರಾಮಯ್ಯ ಅವರು ಬಿಜೆಪಿಯವರ ಟೀಕೆಗೆ ಉತ್ತರಿಸಿದರು.

ನಗರದ ಕೆಎಲ್‌ಇ ಡಾ.ಜೀರಗೆ ಸಭಾಭವನದಲ್ಲಿ ಬುಧವಾರ ರಾಜ್ಯ ಪೊಲೀಸ್, ಜಿಲ್ಲಾ ಪೊಲೀಸ್, ನಗರ ಕಮಿಷ್ನರೇಟ್ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಸುಧಾರಿತ ಗಸ್ತು ವ್ಯವಸ್ಥೆ, ಬೀಟ್ ಸದಸ್ಯ ಸಮಾವೇಶ ಹಾಗೂ ಕನ್ನಡದಲ್ಲಿ ಕವಾಯತು ಕೈಪಿಡಿ ಮತ್ತು ಡಿವಿಡಿ ಬಿಡುಗಡೆ ಸಮಾರಂಭವನ್ನು ಉದ್ಘಾಟನೆ ಹಾಗೂ ಪೊಲೀಸ್ ವಿವಿಧೋದ್ದೇಶಗಳ ಭವನದ ಶಂಕು ಸ್ಥಾಪನೆ ನೆರವೆರಿಸಿ ಅವರು ಮಾತನಾಡಿದರು.

ವಿದೇಶದಿಂದ ಕೇಂದ್ರ ಸರ್ಕಾರ ಆಮದು ಮಾಡಿಕೊಳ್ಳುತ್ತಿರುವ ಮದ್ಯವನ್ನು ಸಂಪೂರ್ಣ ನಿಷೇಧಿಸುವುರ ಜತೆಗೆ ಆಮದು ನಿರ್ಬಂಧ ಕಾನೂನು ಜಾರಿಗೆ ತಂದು ದೇಶವನ್ನು ಮದ್ಯಪಾನ ಮುಕ್ತ ಮಾಡುವುದಾದರೆ ನಮ್ಮ ಸರ್ಕಾರ ಸಂಪೂರ್ಣ ಸಹಮತ ಇದೆ ಎಂದರು. ಕೇವಲ ಕಾನೂನು ಮೂಲಕ ಮದ್ಯ ನಿಷೇಧ ಮಾಡಿದರೆ ಸಾಲದು ಸಾರ್ವಜನಿಕರು ದುಶ್ವಟಗಳ ಬಗ್ಗೆ ಜಾಗೃತರಾಗಿ ಸ್ವ ಇಚ್ಚೆಯಿಂದ ಸೇವನೆ ಮಾಡುವುದನ್ನು ಬಿಟ್ಟರೆ ತಾನಾಗಿಯೇ ಮದ್ಯ ಮಾರಾಟ ನಿಲ್ಲುತ್ತದೆ ಎಂದರು.

ನಾಡಿನ, ತಾಯಿಯ ಭಾಷೆ ಕನ್ನಡ ಕರ್ನಾಟಕದಲ್ಲಿ ಕನ್ನಡವೇ ಸೌರ್ವಭೌಮ ಭಾಷೆಯಾಗಿದೆ. ಮನೆಯಲ್ಲಿ ಯಾವ ಭಾಷೆಯಾದರೂ ಮಾತನಾಡಿ ಕನ್ನಡವೇ ಆಡಳಿತ ಭಾಷೆ, ಕನ್ನಡಕ್ಕೆ ಪ್ರಾಧಾನ್ಯತೆ ನೀಡಬೇಕು. ಕನ್ನಡ ಶಾಲೆ, ಮಾತೃ ಭಾಷೆಯಲ್ಲಿ ಕಲಿತರೆ ಅಭಿವ್ಯಕ್ತಿ ಹೆಚ್ಚು ಪರಿಣಾಮಕಾರಿಯಾಗಲೂ ಸಾಧ್ಯ. ಇದು ಬೇರೆ ಭಾಷೆಯಲ್ಲಿ ಮಾಡಲ್ಲಿಕ್ಕೆ ಸಾಧ್ಯವಿಲ್ಲ . ರಾಜ್ಯದಲ್ಲಿ ಕನ್ನಡದಲ್ಲಿ ಕವಾಯತು ನಡೆಸಲು ಚಿಂತನೆ ನಡೆದಿದೆ ಎಂದರು. ಗ್ರಾಮದಲ್ಲಿ ಮದ್ಯ ಮಾರಾಟ ನಿಷೇಧಕ್ಕೆ ಮುಂದಾಗಿ ಬೀಟ್ ಸದಸ್ಯರಾಗಿರುವ ಮಹಿಳೆಯರು ಗ್ರಾಮಗಳಲ್ಲಿ ಮದ್ಯ ಮಾರಾಟವನ್ನು ನಿಷೇಧಿಸಲು ನೀವೇ ಕ್ರಮಕೈಗೊಳ್ಳಬೇಕು. ಗ್ರಾಮಗಳಲ್ಲಿ ಅಪರಾಧ ತಡೆಯುವ ನಿಟ್ಟಿನಲ್ಲಿ ಪೊಲೀಸರು ಜಾಗೃತಿ ಮೂಡಿಸಿ ಸಲಹೆಗಳನ್ನು ಪರಸ್ಪರ ಹಂಚಿಕೊಳ್ಳಬೇಕು. ಸರ್ಕಾರದ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನಗೊಳ್ಳಬೇಕಾದರೆ ಸಾರ್ವಜನಿಕರ ಸಹಕಾರ ಅವಶ್ಯಕ ಎಂದರು.

ಕನ್ನಡದಲ್ಲೇ ಕಚೇರಿ ಕಡತಗಳ ಸಿದ್ಧತೆ ಗೃಹ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ಪೊಲೀಸ್ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಕನ್ನಡಲ್ಲಿಯೇ ಕಡತಗಳನ್ನು ಸಿದ್ಧಪಡಿಸಲಾಗುತ್ತಿದೆ. ಪೊಲೀಸರೊಂದಿಗೆ ಸಾರ್ವಜನಿಕರು ಸಹಕಾರ ನೀಡಬೇಕು. ಅಧಿವೇಶನ ಹಾಗೂ ಇತರ ಕಾರ್ಯಕ್ರಮಗಳ ಬಂದೂಬಸ್ತ್ ಕರ್ತವ್ಯಕ್ಕಾಗಿ ರಾಜ್ಯದ ವಿವಿಧ ಕಡೆಗಳಿಂದ ಆಗಮಿಸುವ ಪೊಲೀಸರಿಗೆ ವಾಸ್ತವ್ಯ ಕಲ್ಪಿಸುವ ನಿಟ್ಟಿನಲ್ಲಿ 3 ಕೋಟಿ ವೆಚ್ಚದಲ್ಲಿ ಬಹುಮಡಿ ಕಟ್ಟಡ  ನಿರ್ಮಿಸಲಾಗುತ್ತಿದ್ದು, ಮತ್ತೆ ಹೆಚ್ಚಿನ ವಸತಿಗಾಗಿ 3 ಭವನಗಳನ್ನು ನಿರ್ಮಿಸಲು ಕ್ರಮಕೈಗೊಳ್ಳಲಾಗವುದು ಎಂದರು.

ಹಿಂದಿನ ಸರ್ಕಾರ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿ ಮಾಡಿಕೊಳ್ಳದಿರುವುದರಿಂದ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಕಾಡುತ್ತಿದೆ. ಈಗಾಗಲೇ ರಾಜ್ಯ ಸರ್ಕಾರ 24 ಸಾವಿರ ಪೇದೆ, 1500 ಪಿಎಸ್‌ಐ, ನೇಮಕ ಮಾಡಿಕೊಳ್ಳಲಾಗಿದೆ. ಜತೆಗೆ ಪೊಲೀಸರಿಗಾಗಿ 2200 ಕೋಟಿ ವೆಚ್ಚದಲ್ಲಿ 11 ಸಾವಿರ ವಸತಿ ಗೃಹಗಳನ್ನು ನಿರ್ಮಿಸಲು ಕ್ರಮಕೈಗೊಂಡಿದ್ದು 2018 ರೊಳಗೆ ಮುಕ್ತಾಯವಾಗಲಿದೆ ಎಂದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ.ಆರ್. ರವಿಕಾಂತೇಗೌಡ ಪ್ರಾಸ್ತಾವಿಕವಾಗಿ ಮಾತನಾಡಿ, ರಾಜ್ಯದಲ್ಲಿ 12.50 ಲಕ್ಷ ಬೀಟ್‌ಸದಸ್ಯರಿದ್ದರೆ, 62 ಸಾವಿರ ಸದಸ್ಯರನ್ನು ಬೆಳಗಾವಿ ಜಿಲ್ಲೆ ಹೊಂದಿದೆ. ಸದಸ್ಯರ ಸಹಕಾರದಿಂದ ಸಮಾಜಘಾತುಕ ಘಟನೆಗಳನ್ನು ತಡೆಯಲಾಗುತ್ತಿದೆ. ಸದಸ್ಯರ ಮೂಲಕ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ನೆಲೆಸಲು ಸಾಧ್ಯವಾಗುತ್ತಿದೆ ಎಂದು ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ನೀರಿನಲ್ಲಿ ಕಾಳು ಹಾಕಿ ಕಲಬೆರಿಕೆ ಪತ್ತೆ ಮಾಡಿ
India News Live: ಬಾಂಗ್ಲಾದಲ್ಲಿ ಮತ್ತೊಬ್ಬ ಹಿಂದೂ ಬರ್ಬರ ಹ*ತ್ಯೆ