ಎಟಿಎಂ ಹ್ಯಾಕ್ ಮಾಡಬಹುದು ಎಂದಾದಲ್ಲಿ ಇವಿಎಂಗಳೇನು ಲೆಕ್ಕ: ಹಾರ್ದಿಕ್

By Suvarna Web DeskFirst Published Dec 17, 2017, 5:15 PM IST
Highlights

ಗುಜರಾತ್ ಚುನಾವಣಾ ಹಣಾಹಣಿ ಮುಕ್ತಾಯವಾಗಿದೆ. ಇನ್ನೇನು ಫಲಿತಾಂಶ ಬರಲು ಕೆಲ ಗಂಟೆಗಳು ಬಾಕಿ ಉಳಿದಿದೆ. ಇದೇ ವೇಳೆ ಪಟೇಲ್ ಮೀಸಲಾತಿ ಹೋರಾಟಗಾರ ಹಾರ್ದಿಕ್ ಪಟೇಲ್ ಇವಿಎಂ ಬಗ್ಗೆ ಚಕಾರವೆತ್ತಿದ್ದಾರೆ.

ಅಹಮದಾಬಾದ್ (ಡಿ.17): ಗುಜರಾತ್ ಚುನಾವಣಾ ಹಣಾಹಣಿ ಮುಕ್ತಾಯವಾಗಿದೆ. ಇನ್ನೇನು ಫಲಿತಾಂಶ ಬರಲು ಕೆಲ ಗಂಟೆಗಳು ಬಾಕಿ ಉಳಿದಿದೆ. ಇದೇ ವೇಳೆ ಪಟೇಲ್ ಮೀಸಲಾತಿ ಹೋರಾಟಗಾರ ಹಾರ್ದಿಕ್ ಪಟೇಲ್ ಇವಿಎಂ ಬಗ್ಗೆ ಚಕಾರವೆತ್ತಿದ್ದಾರೆ.

ಈ ಬಗ್ಗೆ ಟ್ವಿಟ್ ಮಾಡಿರುವ ಹಾರ್ದಿಕ್ ಪಟೇಲ್ ನನ್ನ ಮಾತು ನಿಮಗೆಲ್ಲಾ ನಗುವನ್ನು ತರಿಸಬಹುದು. ಆದರೆ ದೇವರೇ ಮಾಡಿರುವ ನಮ್ಮ ದೇಹದಲ್ಲಿಯೇ ಸಮಸ್ಯೆಗಳು ಕಂಡು ಬರುತ್ತದೆ ಎಂದಾದಲ್ಲಿ ಮನುಷ್ಯ ಮಾಡಿರುವ ಇವಿಎಂಗಳನ್ನು ತಿರುಚಲು ಸಾಧ್ಯವಿಲ್ಲವೇ ಎಂದು ಹೇಳಿದ್ದಾರೆ. ಎಟಿಎಂಗಳನ್ನೇ ಹ್ಯಾಕ್ ಮಾಡಬಹುದು ಎಂದಾದಲ್ಲಿ ಇವಿಎಂಗಳನ್ನು ಹ್ಯಾಕ್ ಮಾಡಲು ಸಾಧ್ಯವಿಲ್ಲವೇ ಎಂದಿದ್ದಾರೆ.  

ಆದರೆ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಹಮದಾಬಾದ್ ಕಲೆಕ್ಟರ್ ಆವಂತಿಕಾ ಸಿಂಗ್  ಇದೊಂದು ಆಧಾರ ರಹಿತವಾದ ಆರೋಪವಾಗಿದೆ ಎಂದು ಹೇಳಿದ್ದಾರೆ. ಇದಕ್ಕೆ ಯಾವುದೇ ರೀತಿಯಾದ ಸ್ಪಷ್ಟೀಕರಣವನ್ನು ನೀಡುವ ಅಗತ್ಯವಿಲ್ಲ ಎಂದಿದ್ದಾರೆ.

click me!