ಪ್ರತಿಷ್ಠೆಯ ಕಣವಾಗಿದೆ ಗುಜರಾತ್ ಕಣ; ಕುತೂಹಲ ಕೆರಳಿಸಿದೆ ನಾಳೆಯ ಫಲಿತಾಂಶ

By Suvarna Web DeskFirst Published Dec 17, 2017, 3:55 PM IST
Highlights

ಗುಜರಾತ್ ವಿಧಾನಸಭೆ ಚುನಾವಣೆ ಫಲಿತಾಂಶಕ್ಕಾಗಿ ಇಡೀ ದೇಶವೇ ಕಾತುರದಿಂದ ಕಾಯುತ್ತಿದೆ. ಗುಜರಾತ್​​ ಚುನಾವಣೆ ಈ ಬಾರಿ ಮೊದಲಿನಂತಿಲ್ಲ. ಯಾಕಂದರೆ  ಗುಜರಾತ್​ನಲ್ಲಿ  ವಿರೋಧ ಅಲೆಯಲ್ಲಿಯೂ ಅಧಿಕಾರ ಉಳಿಸಿಕೊಳ್ಳುವುದು ಪ್ರಧಾನಿ ನರೇಂದ್ರ ಮೋದಿಗೆ ಪ್ರತಿಷ್ಠೆ  ಕಣವಾಗಿದೆ.

ಬೆಂಗಳೂರು (ಡಿ.17): ಗುಜರಾತ್ ವಿಧಾನಸಭೆ ಚುನಾವಣೆ ಫಲಿತಾಂಶಕ್ಕಾಗಿ ಇಡೀ ದೇಶವೇ ಕಾತುರದಿಂದ ಕಾಯುತ್ತಿದೆ. ಗುಜರಾತ್​​ ಚುನಾವಣೆ ಈ ಬಾರಿ ಮೊದಲಿನಂತಿಲ್ಲ. ಯಾಕಂದರೆ  ಗುಜರಾತ್​ನಲ್ಲಿ  ವಿರೋಧ ಅಲೆಯಲ್ಲಿಯೂ ಅಧಿಕಾರ ಉಳಿಸಿಕೊಳ್ಳುವುದು ಪ್ರಧಾನಿ ನರೇಂದ್ರ ಮೋದಿಗೆ ಪ್ರತಿಷ್ಠೆ ಕಣವಾಗಿದೆ.

ಕಾಂಗ್ರೆಸ್​ ಮುಕ್ತ ಭಾರತ ಘೋಷದೊಂದಿಗೆ ಗೆಲುವಿನ ನಾಗಲೋಟಕ್ಕೆ ಮುಂದಾಗಿರುವ ಬಿಜೆಪಿಗೆ ಗುಜರಾತ್​ ವಿಧಾನಸಭೆ ಗೆಲುವು ಅನಿವಾರ್ಯ, ಅಗತ್ಯ ಮತ್ತು ಪ್ರತಿಷ್ಠೆ ಕೂಡಾ.. ಪ್ರಧಾನಿ ನರೇಂದ್ರ ಮೋದಿಗೆ ಗುಜರಾತ್​ ತವರು ರಾಜ್ಯವಾದ್ದರಿಂದ ಬಿಜೆಪಿ ಗೆಲ್ಲಿಸುವುದು ಭಾರಿ ಪ್ರತಿಷ್ಠೆಯಾಗಿದೆ. ಒಂದು ವೇಳೆ ಬಿಜೆಪಿ ಸೋತರೆ ದೇಶಾದ್ಯಂತ ಬಿಜೆಪಿಗೆ ಹಿನ್ನಡೆಯಾಗುವ ಸಾಧ್ಯತೆ ಹೆಚ್ಚು.

ಬಿಜೆಪಿ ಕಳೆದ 22 ವರ್ಷಗಳಿಂದ ಗುಜರಾತ್ ಗದ್ದುಗೆ ಹಿಡಿದಿದೆ. ಹೀಗಾಗಿ ಬಿಜೆಪಿಗೆ ಅಧಿಕಾರ ಉಳಿಸಿಕೊಳ್ಳುವುದು ಅನಿವಾರ್ಯ. ಜೊತೆಗೆ ಮೋದಿ ಸೋತರೆ ವಿರೋಧ ಪಕ್ಷಗಳ ಟೀಕೆಗೆ ಆಹಾರವಾಗಲಿದೆ. ಜತೆಗೆ ವ್ಯಾಪಾರಿಗಳ ರಾಜ್ಯ ಗುಜರಾತ್​ನಲ್ಲಿ ಬಿಜೆಪಿಗೆ ಹಿನ್ನಡೆಯಾದ್ರೆ.. ಜಿಎಸ್​ಟಿ, ನೋಟ್​ಬ್ಯಾನ್​ ವಿರುದ್ಧ ದೇಶಾದ್ಯಂತ ಮತ್ತೆ ಆಕ್ರೋಶ ಹೆಚ್ಚುವ ಸಾಧ್ಯತೆ ಇದೆ..

ದೇಶದಲ್ಲಿ ಪ್ರಧಾನಿ ಮೋದಿ ಅಲೆ ಇನ್ನೂ ಹಾಗೆಯೇ ಇದೆ ಎಂದು ಸಾಬೀತು ಪಡಿಸಲು ಗುಜರಾತ್​ ಗೆಲುವು ತುಂಬಾ ಮುಖ್ಯ.. ಗುಜರಾತ್​ನಲ್ಲಿ ಸೋತರೆ ದೇಶಾದ್ಯಂತ ಬಿಜೆಪಿ ಸೋಲುವು ಭೀತಿ ಎದುರಾಗಲಿದೆ..

ಮುಂದಿನ ಬಾರಿ ಕರ್ನಾಟಕದಲ್ಲಿ ನಮ್ಮದೇ ಸರ್ಕಾರ ಎನ್ನುತ್ತಿರುವ ಬಿಜೆಪಿಗೆ ಗುಜರಾತ್​ ಗೆಲುವು ಅನಿವಾರ್ಯ.. ಇಲ್ಲವಾದ್ರೆ ಕರ್ನಾಟಕ ವಿಧಾನಸಭೆ ಚುನಾವಣೆ ಮೇಲೆಯೂ ವ್ಯತಿರಿಕ್ತ ಪರಿಣಾಮ ಉಂಟಾಗಲಿದೆ.

ಒಟ್ಟಿನಲ್ಲಿ  ಗುಜರಾತ್​ ಚುನಾವಣೆ ಇಡೀ ದೇಶದ ರಾಜಕೀಯಕ್ಕೆ ಹೊಸ ತಿರುವು ನೀಡಲಿದೆ. ಜೊತೆಗೆ ಪ್ರಧಾನಿ ನರೇಂದ್ರ ಮೋದಿಯ ಪ್ರತಿಷ್ಠೆ ಅಡಗಿದೆ. ಹೀಗಾಗಿ ಗುಜರಾತ್​ ಫಲಿತಾಂಶ ಏನಾಗುತ್ತೆ ಅನ್ನೋದೇ ಈಗ ಭಾರೀ ಕುತೂಹಲ.

click me!