ಡಿಐಜಿ ರೂಪಾ ಆರೋಪಕ್ಕೆ ಟ್ವಿಸ್ಟ್; ಉಲ್ಟಾ ಹೊಡಿತಾ ಆರ್'ಟಿಐ ಮಾಹಿತಿ?

By Suvarna Web DeskFirst Published Dec 17, 2017, 4:50 PM IST
Highlights

ಎಐಎಡಿಎಂಕೆ ನಾಯಕಿ ಶಶಿಕಲಾ ನಟರಾಜನ್​ಗೆ ಜೈಲಲ್ಲಿ ರಾಜಾತಿಥ್ಯ ಕೊಡಲಾಗಿದೆ ಎಂಬ ಡಿಐಜಿ ರೂಪಾ ಆರೋಪಕ್ಕೆ ತಿರುವು ಸಿಕ್ಕಿದೆ.  

ಬೆಂಗಳೂರು (ಡಿ.17): ಎಐಎಡಿಎಂಕೆ ನಾಯಕಿ ಶಶಿಕಲಾ ನಟರಾಜನ್​ಗೆ ಜೈಲಲ್ಲಿ ರಾಜಾತಿಥ್ಯ ಕೊಡಲಾಗಿದೆ ಎಂಬ ಡಿಐಜಿ ರೂಪಾ ಆರೋಪಕ್ಕೆ ತಿರುವು ಸಿಕ್ಕಿದೆ.  

ಪರಪ್ಪನ ಅಗ್ರಹಾರ ಜೈಲಿನಲ್ಲಿ ಶಶಿಕಲಾ ಮಹಾರಾಣಿಯಂತೆ ಇದ್ದಾಳೆ ಎಂದಿದ್ದರು ರೂಪಾ.  ಆದರೆ ಡಿಐಜಿ ರೂಪಾ ಆರೋಪಕ್ಕೆ ಆರ್​ಟಿಐನಲ್ಲಿ ಸೂಕ್ತ ಪುರಾವೆ ಸಿಕ್ಕಿಲ್ಲ.  ಶಶಿಕಲಾಗೆ ರಾಜಾತಿಥ್ಯ ನೀಡಿದ್ದ ಬಗ್ಗೆ ರೂಪಾ ಆರ್​ಟಿಐ ಸಲ್ಲಿಸಿದ್ದರು. ಇದರಲ್ಲಿ ಸಿಕ್ಕ ಮಾಹಿತಿಗೂ, ರೂಪಾ ಕೊಟ್ಟ ವರದಿ ತದ್ವಿರುದ್ದವಾಗಿದೆ.  ಸಾಮಾನ್ಯ ಕೈದಿಗಳಿಗೆ ಕೊಡುವಷ್ಟೇ ಸೌಲಭ್ಯವನ್ನು ಶಶಿಕಲಾಗೂ ಕೊಡಲಾಗಿದೆ.  ಜೈಲಿನಲ್ಲಿ ಒಂದು ಸ್ಟೀಲ್ ತಟ್ಟೆ, ಒಂದು ಸ್ಟೀಲ್ ಲೋಟ ಕೊಡಲಾಗಿದೆ.  ಚೊಂಬು, ಒಂದು ಬೆಡ್ ಕಾರ್ಪೆಟ್​, 2 ಬೆಡ್​ ಶೀಟ್​, 2 ಕಂಬಳಿ,  2 ಜತೆ ಬಿಳಿ ಸೀರೆ, ಲಂಗ, ರವಿಕೆಯನ್ನು ಮಾತ್ರ ನೀಡಲಾಗಿತ್ತು.  ಜೈಲಿನಲ್ಲಿ ಶಶಿಕಲಾ ಬೇರೆ ಯಾವ ವಸ್ತುವನ್ನು ಖರೀದಿಸಿಲ್ಲ ಎಂದು ಆರ್​ಟಿಐ ಮಾಹಿತಿಯಲ್ಲಿ  ಜೈಲು ಅಧಿಕಾರಿಗಳು ಕೊಟ್ಟ ವಿವರಣೆ ಕೊಟ್ಟಿದ್ದಾರೆ.

ಇವತ್ತು ಬಿಡುಗಡೆಯಾಗಿರೋ ಆರ್'ಟಿಐ ಬಗ್ಗೆ ನನಗೆ ಮಾಹಿತಿ ಇಲ್ಲ. ಈ ಮಾಹಿತಿಯನ್ನು ಕೇಂದ್ರ ಕಾರಾಗೃಹ ದಿಂದ ಪಡೆದಿರುತ್ತಾರೆ. ಆದರೆ ನಾನು ಕಣ್ಣಾರೆ ಕಂಡಂತೆ ನಾನು ವರದಿ ಸಲ್ಲಿಸಿದ್ದೇನೆ. ನಾನೂ ಈಗಾಗಲೇ ಎಸಿಬಿ ಮತ್ತು ವಿನಯ್ ಕುಮಾರ್ ವರದಿಯಲ್ಲೇನಿದೆ ಎಂದು ತಿಳಿಯಲು ಆರ್'ಟಿಐನಲ್ಲಿ ಅರ್ಜಿ ಹಾಕಿದ್ದೇನೆ ಎಂದು ಡಿಐಜಿ ರೂಪಾ ಸುವರ್ಣ ನ್ಯೂಸ್'ಗೆ ಹೇಳಿದ್ದಾರೆ. 

ಸತ್ಯನಾರಯಣ್ ರಾವ್ ನನ್ನ ವಿರುದ್ದ ಮಾನನಷ್ಟ ಮೊಕದ್ದಮೆ ಹಾಕಿದ್ದಾರೆ. ಅದನ್ನು ನಾನು ಎದುರಿಸುತ್ತೇನೆ. ಫೆ. 16 ಕ್ಕೆ ಅದರ ವಿಚಾರಣೆ ಇದೆ ಅದನ್ನು ಎದುರಿಸುತ್ತೇನೆ ಎಂದಿದ್ದಾರೆ.

click me!