ತಿವಾರಿ ಸಾವು ಪ್ರಕರಣ: ಮೂವರು ಪೊಲೀಸರ ಅಮಾನತು

By Suvarna Web DeskFirst Published May 29, 2017, 9:02 PM IST
Highlights

ಈ ಮೂವರು ಪೊಲೀಸರು ಅರಕ್ಷಕ ನಿರ್ವಹಣಾ ವಾಹನದಲ್ಲಿ(ಪಿಆರ್'ವಿ) ಕೆಲಸ ನಿರ್ವಹಿಸುತ್ತಿದ್ದು, ತಿವಾರಿ ಮೃತಪಟ್ಟ ಸಂದರ್ಭದಲ್ಲಿ ಶವದ ಬಳಿ ಹೋಗಲು ತಡ ಮಾಡಿದ ಹಿನ್ನಲೆಯಲ್ಲಿ ಆಂತರಿಕ ವಿಚಾರಣೆಗೊಳಿಸಿದ ನಂತರ ಅಮಾನತುಗೊಳಿಸಲಾಗಿದೆ

ಲಖನೌ(ಮೇ.29): ಕರ್ನಾಟಕ ಕೇಡರ್ ಅಧಿಕಾರಿ ಅನುರಾಗ್ ತಿವಾರಿ ಅನುಮಾಸ್ಪದಕ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಸರ್ಕಾರ ಮೂವರು ಪೊಲೀಸರನ್ನು ಅಮಾನತುಗೊಳಿಸಿದೆ.

ಈ ಮೂವರು ಪೊಲೀಸರು ಅರಕ್ಷಕ ನಿರ್ವಹಣಾ ವಾಹನದಲ್ಲಿ(ಪಿಆರ್'ವಿ) ಕೆಲಸ ನಿರ್ವಹಿಸುತ್ತಿದ್ದು, ತಿವಾರಿ ಮೃತಪಟ್ಟ ಸಂದರ್ಭದಲ್ಲಿ ಶವದ ಬಳಿ ಹೋಗಲು ತಡ ಮಾಡಿದ ಹಿನ್ನಲೆಯಲ್ಲಿ ಆಂತರಿಕ ವಿಚಾರಣೆಗೊಳಿಸಿದ ನಂತರ ಅಮಾನತುಗೊಳಿಸಲಾಗಿದೆ ಎಂದು ಲಖನೌ'ನ ಹಿರಿಯ ಎಸ್ಪಿ ದೀಪಕ್ ಕುಮಾರ್ ತಿಳಿಸಿದ್ದಾರೆ. ತಿವಾರ ಅವರ ಸಾವಿನ ಬಗ್ಗೆ ಹಲವು ಅನುಮಾನಗಳು ಮೂಡಿರುವ ಹಿನ್ನಲೆಯಲ್ಲಿ ಉತ್ತರ ಪ್ರದೇಶ ಸರ್ಕಾರ ಪ್ರಕರಣವನ್ನು ಸಿಬಿಐ'ಗೆ ವಹಿಸಿದೆ.

click me!