
ನವದೆಹಲಿ(ಮೇ.29): ಭಾರತ ತಂಡದ ಮುಖ್ಯ ಕೋಚ್ ಅನಿಲ್ ಕುಂಬ್ಳೆ ವಿರುದ್ಧ ಟೀಂ ಇಂಡಿಯಾ ಆಟಗಾರರು ಸೊಕ್ಕಿನ ವರ್ತನೆ ತೋರುತ್ತಿದ್ದಾರೆಂದು ಆರೋಪಿಸಿ ಬಿಸಿಸಿಐನ ಆಡಳಿತಾಧಿಕಾರಿಗಳ ಸಮಿತಿಗೆ ದೂರು ನೀಡಿದ್ದಾರೆ.
ಕುಂಬ್ಳೆ ಅವರು ಡ್ರಸ್ಸಿಂಗ್ ರೂಮಿನಲ್ಲಿ ಸ್ವತಂತ್ರವಾಗಿರಲು ಬಿಡುವುದಿಲ್ಲ. ಅಲ್ಲದೆ ಆಟಗಾರರು ಆತ್ಮೀಯರಾಗಿರುವುದು ಹಾಗೂ ಆತ್ಮವಿಶ್ವಾಸದಿಂದಿರುವುದನ್ನು ಅವರು ಇಷ್ಟಪಡುವುದಿಲ್ಲ' ಎಂದು ಇಂಡಿಯಾ ಟುಡೆ ವರದಿ ಮಾಡಿದೆ.
ಅನಿಲ್ ಕುಂಬ್ಳೆ ಅವರ ಮುಖ್ಯ ಕೋಚ್ ಅವಧಿ ಚಾಂಪಿಯನ್ಸ್ ಟ್ರೋಪಿಯ ನಂತರ ಮುಗಿಯಲಿದ್ದು, ಬಿಸಿಸಿಐ ಈಗಾಗಲೇ ಹೊಸ ಕೋಚ್ ನೇಮಕಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಿದೆ. ಕುಂಬ್ಳೆ ಕೋಚ್ ಆಗಿದ್ದ ಸಂದರ್ಭದಲ್ಲಿ ಆಡಿರುವ 13 ಟೆಸ್ಟ್'ಗಳಲ್ಲಿ 10ರಲ್ಲಿ ಗೆದ್ದಿದ್ದು 2 ಡ್ರಾಗೊಂಡು ಕೇವಲ ಒಂದು ಪಂದ್ಯದಲ್ಲಿ ಮಾತ್ರ ಸೋತಿದೆ. ಸೀಮಿತ ಓವರ ಪಂದ್ಯಗಳಲ್ಲೂ ಹಲವು ಪಂದ್ಯಗಳನ್ನು ಜಯಿಸಿದೆ. ಒಂದೆರಡು ತಿಂಗಳಲ್ಲಿ ಸಚಿನ್, ಗಂಗೂಲಿ ಹಾಗೂ ಲಕ್ಷ್ಮಣ್ ಒಳಗೊಂಡಿರುವ ಸಮಿತಿ ಮುಖ್ಯ ಕೋಚ್'ಗಳ ಅಭ್ಯರ್ಥಿ'ಗಳನ್ನು ಸಂದರ್ಶಿಸಲಿದ್ದಾರೆ. ಭಾರತ ತಂಡ ಚಾಂಪಿಯನ್ಸ್ ಟ್ರೋಪಿಯಲ್ಲಿ ಪಾಲ್ಗೊಳ್ಳುವ ಸಲುವಾಗಿ ಇಂಗ್ಲೆಂಡ್'ಗೆ ತೆರಳಿದ್ದು ಜೂನ್ 4 ರಂದು ಪಾಕಿಸ್ತಾನದ ವಿರುದ್ಧ ಮೊದಲ ಪಂದ್ಯವನ್ನು ಆಡಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.