ಪಾಕ್ ಗಡಿಯಲ್ಲಿ ಭಾರತೀಯ ಯುದ್ಧ ವಿಮಾನಗಳ ಹಾರಾಟ, ಯಾವುದರ ಸೂಚನೆ

By Web Desk  |  First Published Feb 16, 2019, 7:10 PM IST

ಯೋಧರ ಬಲಿದಾನಕ್ಕೆ ಪ್ರತೀಕಾರದ ಕೂಗು ಕೇಳಿ ಬರುತ್ತಿರುವಾಗಲೇ ಭಾರತೀಯ ವಾಯುಸೇನೆ ಗಡಿಯಲ್ಲಿ ಶಕ್ತಿ ಪ್ರದರ್ಶನ ನಡೆಸಿದೆ.


ಫೋಕ್ರಾನ್[ಫೆ.16] ಯೋಧರನ್ನು ಉಗ್ರರು ಬಲಿ ಪಡೆದಿದ್ದಾರೆ. ಇಡೀ ದೇಶದಲ್ಲಿ ಪಾಕಿಸ್ತಾನ ಮತ್ತು ಉಗ್ರಗಾಮಿಗಳ  ವಿರುದ್ಧ ಆಕ್ರೋಶ ಹೊರಬರುತ್ತಲೇ ಇದೆ. ಇದೇ ವೇಳೆ ಭಾರತೀಯ ವಾಯುಸೇನೆ ದಿಟ್ಟ ಕ್ರಮಕ್ಕೆ ಮುಂದಾಗಿದೆ. ಪೋಕ್ರಾನ್ ವಾಯುನೆಲೆಯಲ್ಲಿ ಭಾರತದ ವಾಯುಸೇನೆ ಶಕ್ತಿ ಪ್ರದರ್ಶನ ಆರಂಭ ಮಾಡಿದೆ.

ಸೇನಾ ಶಕ್ತಿಗೆ  ಸಂಪೂರ್ಣ ಸ್ವಾತಂತ್ರ್ಯ ನೀಡುತ್ತೇನೆ ಎಂದು ಪ್ರಧಾನಿ ತಿಳಿಸಿದ್ದರು. ಇದೀಗ ಪಾಕ್ ಗಡಿಭಾಗದಲ್ಲಿ ಸೇನೆ ತನ್ನ ಶಕ್ತಿ ಪ್ರದರ್ಶನ ಆರಂಭಿಸಿದೆ.ತೇಜಸ್, ಅಡ್ವಾನ್ಸಡ್ ಲೈಟ್ ಹೆಲಿಕಾಪ್ಟರ್, ಆಕಾಶ್ ವಿಮಾನಗಳು ಹಾರಾಟ ನಡೆಸಿವೆ.

Latest Videos

undefined

ಉಗ್ರರ ಆಟ ಇನ್ನು ಮುಂದೆ ನಡೆಯಲ್ಲ

ಜೆಟ್ ವಿಮಾಣಗಳು, ಮಿಗ್-29,  ಮಿಗ್-27, ಎಎನ್-32 ಸೇರಿದಂತೆ ವಿವಿಧ  ವಿಮಾನಗಳು ಪ್ರದರ್ಶನ ನೀಡುತ್ತಿವೆ. ಸೇನಾ ಮುಖ್ಯಸ್ಥ ಬಿಪಿನ್ ರಾವತ್, ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಸಹ ಹಾಜರಿದ್ದಾರೆ.

click me!