ಪಾಕ್‌ನೊಂದಿಗೆ ಟಾಕ್‌ ಅಂತಿದ್ದ ಸಿಧು: ಕಪಿಲ್ ಶೋದಿಂದಲೇ ಕಿಕ್ ಔಟ್!

Published : Feb 16, 2019, 06:17 PM IST
ಪಾಕ್‌ನೊಂದಿಗೆ ಟಾಕ್‌ ಅಂತಿದ್ದ ಸಿಧು: ಕಪಿಲ್ ಶೋದಿಂದಲೇ ಕಿಕ್ ಔಟ್!

ಸಾರಾಂಶ

ಪಾಕ್‌ಗೆ ಯಾಕೆ ಬೈಬೇಕು ಎಂದಿದ್ದ ಸಿಧುಗೆ 'ದಿ ಕಪಿಲ್​ ಶರ್ಮಾ' ಶೋದಿಂದ ಗೇಟ್ ಪಾಸ್! ಪುಲ್ವಾಮಾ ದಾಳಿ ಬಗ್ಗೆ ನೀಡಿದ್ದ ಹೇಳಿಕೆಗೆ ಖಂಡನೆ ವ್ಯಕ್ತವಾದ ಹಿನ್ನಲೆಯಲ್ಲಿ 'ದಿ ಕಪಿಲ್​ ಶರ್ಮಾ' ಶೋದಿಂದ ಕಿಕ್​ಔಟ್.

ನವದೆಹಲಿ, [ಫೆ.16]: ಮಾಜಿ ಕ್ರಿಕೆಟಿಗ, ಪಂಜಾಬ್​ ಸಚಿವ ನವಜೋತ್​ ಸಿಂಗ್​​ ಸಿಧು ಪುಲ್ವಾಮಾ ದಾಳಿ ಬಗ್ಗೆ ನೀಡಿದ್ದ ಹೇಳಿಕೆಗೆ ಖಂಡನೆ ವ್ಯಕ್ತವಾದ ಬೆನ್ನಲ್ಲೇ 'ದಿ ಕಪಿಲ್​ ಶರ್ಮಾ' ಶೋದಿಂದ ಕಿಕ್​ಔಟ್​ ಆಗಿದ್ದಾರೆ. 

ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ 40 ಯೋಧರನ್ನು ಬಲಿ ತೆಗೆದುಕೊಂಡ ಉಗ್ರರ ದಾಳಿ ಬಗ್ಗೆ ಪ್ರತಿಕ್ರಿಯಿಸಿದ್ದ ಸಿಧು, ಪಾಕಿಸ್ತಾನದೊಂದಿಗೆ ಈ ಬಗ್ಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಬೇಕು. ಯಾರೋ ಒಂದಷ್ಟು ಜನ ಮಾಡಿದ ತಪ್ಪಿಗೆ ಇಡೀ ದೇಶವನ್ನ ದೂಷಿಸಲು ಆಗುತ್ತಾ ಎಂದು ಪ್ರಶ್ನಿಸಿದ್ದರು. ಹಿಂಸೆ ಖಂಡನಾರ್ಹ, ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಹೇಳಿದ್ದರು.

ಪಾಕ್‌ಗೆ ಯಾಕೆ ಬೈಬೇಕು ಎಂದ ಸಿದ್ದುಗೆ ಬೈಬಾರದ್ದು ಬೈದ್ರು!

ಉಗ್ರರ ಪೈಶಾಚಿತ ಕೃತ್ಯದಿಂದ 40 ಯೋಧರು ಪ್ರಾಣ ಕಳೆದುಕೊಂಡಿದ್ದರೂ ಕೂತು ಮಾತನಾಡುವಂತೆ ಹೇಳ್ತಿದ್ದೀರಾ ಎಂದು ಸಿಧು ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಖಂಡನೆ ವ್ಯಕ್ತವಾಗಿತ್ತು.

ಕಪಿಲ್​ ಶರ್ಮಾ ಶೋ ಕಾರ್ಯಕ್ರಮವನ್ನ ಬಹಿಷ್ಕಾರ​ ಮಾಡಬೇಕು ಎಂಬ ಕೂಗು ಕೇಳಿಬಂದಿತ್ತು. ಹೀಗಾಗಿ ಎಚ್ಚೆತ್ತುಕೊಂಡಿರುವ ಚಾನೆಲ್, 'ದಿ ಕಪಿಲ್​ ಶರ್ಮಾ' ಶೋ  ಕಾರ್ಯಕ್ರಮದಿಂದ ಹೊರನಡೆಯುವಂತೆ ಹೇಳಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಆಸ್ಪತ್ರೆಯಿಂದ ಮನುಷ್ಯನ ಕಾಲನ್ನು ಹೊತ್ತೊಯ್ದ ಬೀದಿ ನಾಯಿ: ವೀಡಿಯೋ ವೈರಲ್ ಆಗ್ತಿದಂಗೆ ತನಿಖೆಗೆ ಆದೇಶ
OPS Joins DMK: AIADMK ಉಳಿವಿಗಾಗಿ 'ಧರ್ಮಯುದ್ಧ' ಸಾರಿದ್ದ ಒಪಿಎಸ್, ಈಗ ಬದ್ಧವೈರಿ DMK ಪಾಳೆಯಕ್ಕೆ!