‘ಪಾಕಿಸ್ತಾನದಲ್ಲಿ ಸಿಗುವ ಪ್ರೀತಿಗಿಂತ ಹೆಚ್ಚಾಗಿ ಭಾರತದಲ್ಲಿ ದ್ವೇಷಿಸಲ್ಪಡುತ್ತೇನೆ’

By Suvarna Web DeskFirst Published Feb 13, 2018, 8:49 PM IST
Highlights
  • ಮೊನ್ನೆ ‘ಪಾಕಿಸ್ತಾನ ನನಗೆ ಭಾರತದಂತೆಯೆ ಪ್ರಿಯವಾದ ದೇಶ’
  • ಪಾಕಿಸ್ತಾನದಲ್ಲಿ ನನಗೆ ಸಿಗುವ ಪ್ರೀತಿಗಿಂತ ಹೆಚ್ಚಾಗಿ ನಾನು ಭಾರತದಲ್ಲಿ ದ್ವೇಷಿಸಲ್ಪಡುತ್ತೇನೆ’

ಕರಾಚಿ: ಮೊನ್ನೆ ‘ಪಾಕಿಸ್ತಾನ ನನಗೆ ಭಾರತದಂತೆಯೆ ಪ್ರಿಯವಾದ ದೇಶ’ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಉಚ್ಚಾಟಿತ ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ‘ಪಾಕಿಸ್ತಾನದಲ್ಲಿ ನನಗೆ ಸಿಗುವ ಪ್ರೀತಿಗಿಂತ ಹೆಚ್ಚಾಗಿ ನಾನು ಭಾರತದಲ್ಲಿ ದ್ವೇಷಿಸಲ್ಪಡುತ್ತೇನೆ’ ಎಂದು ಹೇಳಿದ್ದಾರೆ.

ಸಾಹಿತ್ಯ ಹಬ್ಬದಲ್ಲಿ ಭಾಗವಹಿಸಲು ಪಾಕಿಸ್ತಾನ ಪ್ರವಾಸದಲ್ಲಿರುವ ಅಯ್ಯರ್, ನಾನು ಶಾಂತಿಯನ್ನು ಪ್ರತಿಪಾದಿಸುವುದರಿಂದ  ಪಾಕಿಸ್ತಾನದ ಜನರು ನನ್ನನು ಇಷ್ಟಪಡುತ್ತಾರೆ, ಎಂದಿದ್ದಾರೆ

ನನಗೆ ಗುರುತು-ಪರಿಚಯವಿಲ್ಲದ ಜನರೂ ಕೂಡಾ ಇಲ್ಲಿ ತಬ್ಬಿಕೊಳ್ಳುತ್ತಾರೆ. ಪಾಕಿಸ್ತಾನದಲ್ಲಿ ನನಗೆ ಸಿಗುವ ಪ್ರೀತಿಗಿಂತ ಹೆಚ್ಚಾಗಿ ನಾನು ಭಾರತದಲ್ಲಿ ದ್ವೇಷಿಸಲ್ಪಡುತ್ತೇನೆ, ಎಂದು ಅಯ್ಯರ್ ಹೇಳಿದ್ದಾರೆ.

ನಿರಂತರ ಮಾತುಕತೆಯ ಮೂಲಕ ಎರಡೂ ದೇಶಗಳು ಸಂಬಂಧವನ್ನು ಸುಧಾರಿಸಿಕೊಳ್ಳಬಹುದು. ಸೌಹಾರ್ದಯುತ ಮಾತುಕತೆಯೊಂದೆ ಭಾರತ - ಪಾಕಿಸ್ತಾನ ಸ್ನೇಹವೃದ್ಧಿಗೆ ಪರಿಹಾರ. ಭಾರತದಂತೆಯೇ ಪಾಕಿಸ್ತಾನವನ್ನು ಇಷ್ಟಪಡುತ್ತೇನೆ. ಭಾರತ ಕೂಡ ತನ್ನ ನೆರೆಯವರನ್ನು ತನ್ನಂತೆಯೇ ಪ್ರೀತಿಸಬೇಕು, ಎಂದು ಅಯ್ಯರ್ ಮೊನ್ನೆ ಹೇಳಿದ್ದರು.

ಕಳೆದ ಗುಜರಾತ್ ಚುನಾವಣೆ ಸಂದರ್ಭದಲ್ಲಿ ಪ್ರಧಾನಿ ಮೋದಿಗೆ ಅಯ್ಯರ್ ‘ನೀಚ’ ಎಂದು ಕರೆದಿದ್ದು, ಭಾರೀ ಚರ್ಚೆಗೆ ಕಾರಣವಾಗಿತ್ತು. ಆ ಬಳಿಕ ಅಯ್ಯ್ರರ್’ರನ್ನು ಕಾಂಗ್ರೆಸ್ ಪಕ್ಷದಿಂದ ಉಚ್ಛಾಟಿಸಿದೆ.

click me!