ಮೇಟಿ ಪ್ರಕರಣ: ಸಂತ್ರಸ್ತೆಯನ್ನು ಗೃಹಬಂಧನದಲ್ಲಿರಿಸಲಾಗಿತ್ತೇ? ವಿಜಯಲಕ್ಷ್ಮೀ ಬಿಚ್ಚಿಟ್ಟರು ಸ್ಫೋಟಕ ಸತ್ಯ

By Suvarna Web DeskFirst Published Aug 18, 2017, 5:06 PM IST
Highlights

ವಿಜಯಲಕ್ಷ್ಮೀಯನ್ನು 8 ತಿಂಗಳು ಗೃಹ ಬಂಧನದಲ್ಲಿಟ್ಟಿದ್ದು, ಸಿಐಡಿಯಿಂದ ಪಾರದರ್ಶಕ ತನಿಖೆ ನಡೆಯದೇ ಇದ್ದದ್ದು, ವಿಜಯಲಕ್ಷ್ಮೀ ಮನೆಯಿಂದ ಅನುಮಾನಾಸ್ಪದವಾಗಿ ವಸ್ತುಗಳನ್ನು ತೆಗೆದುಕೊಂಡು ಹೋಗಿದ್ದು... ಇವೆಲ್ಲವನ್ನೂ ಗಮನಿಸಿದರೆ ಬಹಳ ವ್ಯವಸ್ಥಿತವಾಗಿ ಪ್ರಕರಣದ ಸಾಕ್ಷ್ಯಗಳನ್ನು ನಾಶ ಮಾಡಿರುವುದು ಮೇಲ್ನೋಟಕ್ಕೆ ಗೊತ್ತಾಗುವಂತಿದೆ.

ಬೆಂಗಳೂರು(ಆ. 18): ಮೇಟಿ ಹಗರಣದ ವಿಚಾರ ಮತ್ತೆ ಸದ್ದು ಮಾಡಿದೆ. ಸಚಿವ ಎಚ್.ವೈ.ಮೇಟಿಗೆ ಸಿಐಡಿ ಕ್ಲೀನ್ ಚಿಟ್ ನೀಡಿದ ಬೆನ್ನಲ್ಲೇ ಈತ ಸಂತ್ರಸ್ತೆ ವಿಜಯಲಕ್ಷ್ಮೀ ಮೇಲೆದ್ದು ಬಂದಿದ್ದಾರೆ. ವಿಡಿಯೋದಲ್ಲಿ ಮೇಟಿ ಜೊತೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿರುವ ಮಹಿಳೆ ತಾನೇ ಎಂದು ವಿಜಯಲಕ್ಷ್ಮೀ ಸ್ಪಷ್ಟಪಡಿಸಿದ್ದಾರೆ. ಸುವರ್ಣನ್ಯೂಸ್ ಸ್ಟುಡಿಯೋದ ಚರ್ಚೆಯಲ್ಲಿ ಶುಕ್ರವಾರ ಪಾಲ್ಗೊಂಡಿದ್ದ ವಿಜಯಲಕ್ಷ್ಮೀ, ಸಚಿವರು ತನ್ನನ್ನು 8 ತಿಂಗಳ ಕಾಲ ಕೋಣೆಯಲ್ಲಿ ಕೂಡಿಹಾಕಿದ್ದರೆಂದೂ, ಸಿಐಡಿಯಿಂದ ಸರಿಯಾದ ವಿಚಾರಣೆ ನಡೆಯಲಿಲ್ಲವೆಂದೂ ಆರೋಪಿಸಿದ್ದಾರೆ.

ಸಂತ್ರಸ್ತೆಯ ಬ್ಲೌಸ್ ತೆಗೆದುಕೊಂಡು ಹೋದೋರು ಯಾರು?
ಒಂದೆಡೆ ವಿಜಯಲಕ್ಷ್ಮೀಯವರನ್ನು ಗೃಹಬಂಧನದಲ್ಲಿರಿಸಿರುತ್ತಾರೆ; ಮತ್ತೊಂದೆಡೆ ಅವರ ಮನೆಯಿಂದ ಬ್ಲೌಸ್, ಅಂಡರ್'ವೇರ್ ಮೊದಲಾದ ಬಟ್ಟೆಗಳನ್ನು ಹೋಗಲಾಗುತ್ತದೆ. ತನಿಖೆ ನಡೆಸುತ್ತಿರುವ ಸಿಐಡಿಯವರು ಈ ಕೆಲಸ ಮಾಡಿದ್ದರೆ ಅದು ತನಿಖೆಯ ಭಾಗವಾಗಿರುತ್ತಿತ್ತು. ಆದರೆ, ಮೇಟಿ ಕಡೆಯ ಬೆಂಬಲಿಗರು ವಿಜಯಲಕ್ಷ್ಮೀ ಮನೆಗೆ ನುಗ್ಗಿ ತಲಾಶ್ ಮಾಡಿ ಅವರ ಬಟ್ಟೆಗಳನ್ನ, ಡೈರಿಯನ್ನ ತೆಗೆದುಕೊಂಡು ಹೋದರೆನ್ನಲಾಗಿದೆ. ಅಂದರೆ, ಪ್ರಕರಣದಲ್ಲಿ ಸಾಕ್ಷ್ಯಗಳನ್ನ ನಾಶ ಮಾಡುವು ಉದ್ದೇಶದಿಂದ ಈ ಕೆಲಸ ಮಾಡಿರುವ ಅನುಮಾನವಿದೆ. ಅಲ್ಲದೇ, ಅಜಿತ್ ಎಂಬ ವ್ಯಕ್ತಿಯು ವಿಜಯಲಕ್ಷ್ಮೀ ಅವರ ಬ್ಯಾಂಕ್ ಅಕೌಂಟ್'ನಲ್ಲಿದ್ದ 60 ಸಾವಿರ ರೂ ಹಣವನ್ನು ಡ್ರಾ ಮಾಡಿಕೊಂಡು ಹೋಗಿದ್ದೂ ಅನುಮಾನಕ್ಕೆ ಎಡೆ ಮಾಡಿಕೊಡುತ್ತದೆ. ವಿಜಯಲಕ್ಷ್ಮೀ ಅವರು ಹೊರಗೆ ಬಂದರೆ ಹಣದ ಕೊರತೆಯಿಂದ ಅಲ್ಲಿ ಇಲ್ಲಿ ಅಡ್ಡಾಡಲು ಸಾಧ್ಯವಾಗದಂತೆ ಮಾಡುವುದು ಇದರ ಹಿಂದಿನ ಸಂಚು ಇರಬಹುದು.

ಇನ್ನು, ಸಿಐಡಿ ತನಿಖೆ ಬಗ್ಗೆ ಪ್ರತಿಕ್ರಿಯಿಸಿರುವ ವಿಜಯಲಕ್ಷ್ಮೀ, "ತನ್ನನ್ನು ಗೃಹಬಂಧನದಲ್ಲಿಟ್ಟಿದ್ದಾಗ ಸಿಐಡಿಯವರು ಬಂದು ತನ್ನನ್ನು ಕರೆದುಕೊಂಡು ಹೋಗಿ ವಿಚಾರಣೆ ಮಾಡಿದರು. ಬೇಡದ ವಿಚಾರಗಳ ಬಗ್ಗೆ ಸಿಐಡಿಯವರು ವಿಚಾರಣೆ ಮಾಡಿದರೇ ಹೊರತು ಕೇಳಬೇಕಾದ ವಿಚಾರವನ್ನೇ ಕೇಳಲಿಲ್ಲ," ಎಂದು ಹೇಳಿದ್ದಾರೆ.

ವಿಜಯಲಕ್ಷ್ಮೀಯನ್ನು 8 ತಿಂಗಳು ಗೃಹ ಬಂಧನದಲ್ಲಿಟ್ಟಿದ್ದು, ಸಿಐಡಿಯಿಂದ ಪಾರದರ್ಶಕ ತನಿಖೆ ನಡೆಯದೇ ಇದ್ದದ್ದು, ವಿಜಯಲಕ್ಷ್ಮೀ ಮನೆಯಿಂದ ಅನುಮಾನಾಸ್ಪದವಾಗಿ ವಸ್ತುಗಳನ್ನು ತೆಗೆದುಕೊಂಡು ಹೋಗಿದ್ದು... ಇವೆಲ್ಲವನ್ನೂ ಗಮನಿಸಿದರೆ ಬಹಳ ವ್ಯವಸ್ಥಿತವಾಗಿ ಪ್ರಕರಣದ ಸಾಕ್ಷ್ಯಗಳನ್ನು ನಾಶ ಮಾಡಿರುವುದು ಮೇಲ್ನೋಟಕ್ಕೆ ಗೊತ್ತಾಗುವಂತಿದೆ.

ಇದೇ ವೇಳೆ, ತನ್ನನ್ನು ಹುಚ್ಚಿ ಎಂದು ಹಣೆಪಟ್ಟಿ ಕಟ್ಟುತ್ತಿರುವವರ ವಿರುದ್ಧ ವಿಜಯಲಕ್ಷ್ಮೀ ಸಿಡಿದೆದಿದ್ದಾರೆ. "ಬೆದರಿಕೆಗಳಿಗೆ ಬಗ್ಗಲು ನಾನೀಗ ಬಾಗಲಕೋಟೆಯಲ್ಲಿಲ್ಲ, ಬೆಂಗಳೂರಲ್ಲಿದ್ದೇನೆ. ಯಾರೂ ಕೂಡ ಏನೂ ಮಾಡೋಕ್ಕಾಗಲ್ಲ. ನನಗೆ ತಲೆಕೆಟ್ಟಿದೆ ಎಂದವರ ಮೇಲೆಲ್ಲಾ ಕೇಸ್ ಹಾಕ್ತೀನಿ. ನಾನು ಹುಚ್ಚಿಯಲ್ಲ, ಶಾಣ್ಯಾ ಇದ್ದೀನಿ. ವಿಜಯಲಕ್ಷ್ಮೀ ಮೆಂಟಲಿ ಪರ್ಫೆಕ್ಟ್," ಎಂದು ವಿಜಯಲಕ್ಷ್ಮೀ ಸುವರ್ಣನ್ಯೂಸ್'ಗೆ ಹೇಳಿದ್ದಾರೆ.

ಮೇಟಿ ಬೆಂಬಲಿಗರಿಂದ ತನಗೆ ಚೆಕ್ ಕೊಡಲಾಯಿತು, ಚೆಕ್ ಬೌನ್ಸ್ ಆಯಿತು ಎಂಬ ಆರೋಪಗಳನ್ನು ವಿಜಯಲಕ್ಷ್ಮೀ ಸಾರಸಗಟಾಗಿ ತಳ್ಳಿಹಾಕಿದ್ದಾರೆ. ತನಗೆ ಯಾರೂ ಚೆಕ್ ಕೊಟ್ಟಿಲ್ಲ, ಚೆಕ್ ಬೌನ್ಸ್ ವಿಷಯವೇ ತನಗೆ ಗೊತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

click me!