
ಬೆಂಗಳೂರು(ಆ.07): ಮ್ಯಾಟ್ರಿಮೋನಿ ಯಲ್ಲಿ ಪ್ರಪೋಸ್ ಮಾಡಿದ ಆತ ಕಾಡಿ ಬೇಡಿ ಆಕೆಯನ್ನ ವರಿಸಿದ್ದ. ಮದುವೆ ನಂತರ ಮದ್ಯಪಾನ ಮಾಡಿ ಮಂಚವೇರು ಅಂತ ನಿತ್ಯವೂ ಆಕೆಗೆ ಕಿರುಕುಳ ಕೊಡುತ್ತಿದ್ದ. ಗಂಡನ ವಿಚಿತ್ರ ಕಿರುಕುಳಕ್ಕೆ ಬೇಸತ್ತ ಹೆಂಡತಿ ಮಾಡಿದ್ದೇನು ಇಲ್ಲಿದೆ ವಿವರ.
ಹೆಂಡತಿ ಕುಡಿಯಲೇಬೇಕು...!
ಗಂಡನ ವಿಚಿತ್ರ ವರ್ತನೆಯೊಂದು ಹೆಂಡತಿಯನ್ನ ದೂರ ಮಾಡಿರುವ ಘಟನೆ ಬೆಂಗಳೂರಿನ ವಿಜಯನಗರದಲ್ಲಿ ನಡೆದಿದೆ. ಲೈಂಗಿಕ ಕ್ರಿಯೆ ವೇಳೆ ಹೆಂಡತಿ ಮದ್ಯಪಾನ ಮಾಡುವುದಿಲ್ಲ ಎನ್ನುವ ವಿಚಿತ್ರ ಕಾರಣ ಹೇಳಿ ತನ್ನ ಹೆಂಡತಿಯನ್ನ ಪಾಪಿ ಪತಿಯೊಬ್ಬಹೆಂಡತಿಯನ್ನು ಹೊರಗಟ್ಟಿದ್ದಾನೆಂದು ಹೆಣ್ಣು ಮಗಳೊಬ್ಬಳು ಆರೋಪ ಮಾಡುತ್ತಿದ್ದಾಳೆ. ಕೃಷ್ಣ ಕುಮಾರ್ ಎಂಬವರು ಸದ್ಯ ಆರೋಪ ಎದುರುಸಿತ್ತಿರುವ ವ್ಯಕ್ತಿ. ಮೂಲತಃ ಬೆಂಗಳೂರಿನ ವಿಜಯನಗರದವನು. ವರ್ಷದ ಹಿಂದೆ ಮೈಸೂರು ಮೂಲದ ಅನಿತ ಎಂಬಾಕೆಯನ್ನು ಮ್ಯಾಟ್ರಿಮೊನಿ ಮೂಲಕ ಭರ್ಜರಿ ವರದಕ್ಷಿಣೆ ತೆಗೆದುಕೊಂಡು ಮದುವೆಯಾಗಿದ್ದ.
ದುಡ್ಡು, ಬಂಗಾರ , ಅಲ್ಲದೇ ಚಂದದ ಹುಡುಗಿಯನ್ನು ಮದುವೆ ಮಾಡಿಕೊಂಡು ಬಂದ ಭೂಪ, ತನ್ನ ಬುದ್ಧಿಯನ್ನು ಹನಿಮೂನ್'ನಲ್ಲೆ ತೋರಿಸಿದ್ನಂತೆ. ಹನಿಮೂನ್ ನಲ್ಲಿ ಅನಿತಾಗೆ ಒತ್ತಾಯ ಪೂರ್ವಕವಾಗಿ ಕಂಟಪೂರ್ತಿ ಕುಡಿಸಿ ,ವಿಕೃತವಾಗಿ ಲೈಂಗಿಕ ಕ್ರಿಯೆ ನಡೆಸಿದ್ದಾನೆ. ಅಲ್ಲದೇ ನಂತರವು ಲೈಂಗಿಕ ಕ್ರಿಯೆ ಮಾಡುವ ವೇಳೆ ಕುಡಿಲೇಬೇಕು ಅಂತ ಹೆಂಡತಿಗೆ ಒತ್ತಾಯ ಮಾಡುತ್ತಾನಂತೆ. ನಂತರ ಹೆಂಡತಿಯ ಬೆತ್ತಲೆ ವೀಡಿಯೋ ತೆಗೆದು ಸಾಮಜಿಕ ಜಾಲತಾಣದಲ್ಲಿ ಹರಿಬೀಡ್ತಿನಿ ಅಂತ ಬ್ಲಾಕ್ ಮೇಲ್ ಮಾಡಿದ್ದನಂತೆ. ಇದರಿಂದ ಬೇಸತ್ತ ಪತ್ನಿ ರಾಜ್ಯ ಮಹಿಳಾ ಅಯೋಗ ಸೇರಿದ್ದಂತೆ ವಿಯಜನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಆದರೆ ಇತ್ತ ಅನಿತ ಪತಿ ಕೃಷ್ಣ ಕುಮಾರ್ ಮಾತ್ರ ನಾನು ಒಳ್ಳೆಯವನು, ಅನಿತಾಳೇ ಸರಿಯಿಲ್ಲ ಅಂತ ಹೆಂಡತಿ ವಿರುದ್ಧ ಆರೋಪ ಮಾಡುತ್ತಿದ್ದಾನೆ. ರಾತ್ರಿಯಿಡೀ ಪಾರ್ಟಿಗೆ ಹೋಗುತ್ತಾಳೆ, ಮನೆಗೆ ಬರುವುದು ರಾತ್ರಿ 2, 3 ಗಂಟೆ ಆಗುತ್ತದೆ. ನನ್ನ ತಾಯಿಗೆ ಮಾನಸಿಕವಾಗಿ ಹಿಂಸೆ ಕೊಡುತ್ತಾಳೆ ಅಂತ ಹೆಂಡತಿ ವಿರುದ್ದ ಕೃಷ್ಟನಕುಮಾರ್ ಆರೋಪ ಮಾಡುತ್ತಿದ್ದಾನೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.