ಇಂದು ಚಂದ್ರಗ್ರಹಣ: ಗ್ರಹಣ ವೀಕ್ಷಣೆ ನೆಹರೂ ತಾರಾಲಯದಲ್ಲಿ ವ್ಯವಸ್ಥೆ

By Suvarna Web DeskFirst Published Aug 7, 2017, 8:12 AM IST
Highlights

ಇಂದು ಚಂದ್ರಗ್ರಹಣ ಈ ಬಾರಿಯ ಚಂದ್ರಗ್ರಹಣ ಭಾರತದಲ್ಲಿಯೂ ಗೋಚರಿಸಲಿದೆ. ಇದನ್ನು ವೀಕ್ಷಿಸಲು ಜನತೆ ಕೌತುಕರಾಗಿದ್ದಾರೆ. ಆದ್ರೆ ಜೋತಿಷ್ಯದ ಪ್ರಕಾರ ಗ್ರಹಣ ವೀಕ್ಷಣೆ ಒಳ್ಳೆಯದಲ್ಲ ಎನ್ನುತ್ತೆ. ಹಾಗಾದರೆ ಗ್ರಹಣದ ವಿಶೇಷತೆ ಏನು? ಇಲ್ಲಿದೆ ವಿವರ

ಬೆಂಗಳೂರು(ಆ.07): ಇಂದು ಚಂದ್ರಗ್ರಹಣ ಈ ಬಾರಿಯ ಚಂದ್ರಗ್ರಹಣ ಭಾರತದಲ್ಲಿಯೂ ಗೋಚರಿಸಲಿದೆ. ಇದನ್ನು ವೀಕ್ಷಿಸಲು ಜನತೆ ಕೌತುಕರಾಗಿದ್ದಾರೆ. ಆದ್ರೆ ಜೋತಿಷ್ಯದ ಪ್ರಕಾರ ಗ್ರಹಣ ವೀಕ್ಷಣೆ ಒಳ್ಳೆಯದಲ್ಲ ಎನ್ನುತ್ತೆ. ಹಾಗಾದರೆ ಗ್ರಹಣದ ವಿಶೇಷತೆ ಏನು? ಇಲ್ಲಿದೆ ವಿವರ

ಹೇವಿಳಂಬಿ ಸಂವತ್ಸರದ ಶ್ರಾವಣ ಮಾಸದ ಶುಕ್ಲ ಪಕ್ಷ ಹುಣ್ಣೆಮೆಯಾದ ಇಂದು ಚಂದ್ರಗ್ರಹಣ ಸಂಭವಿಸಲಿದೆ..  ರಾತ್ರಿ 9.20ಕ್ಕೆ ಆರಂಭವಾಗಲಿರುವ ಚಂದ್ರಗ್ರಹಣ ಮುಂಜಾನೆವರೆಗೆ ಮುಂದುವರಿಯಲಿದೆ.

ಈ ಬಾರಿ ಭಾರತದಲ್ಲೂ ಚಂದ್ರಗ್ರಹಣ ಗೋಚರವಾಗುತ್ತಿದೆ. ರಾತ್ರಿ 10.52ರ ಬಳಿಕ ಗ್ರಹಣ ನೋಡುವದಕ್ಕೆ ಸಾಧ್ಯವಿದ್ದು, ಮಧ್ಯರಾತ್ರಿ 12.48ರವರೆಗೂ ಗ್ರಹಣವನ್ನು ನೋಡಬಹುದು. ಆದರೆ ಇದು ಪೂರ್ಣ ಗ್ರಹಣವಲ್ಲ. ಚಂದ್ರನ ಕೆಳಗಿನ ಸ್ವಲ್ಪ ಭಾಗದಲ್ಲಿ ಮಾತ್ರ ಭೂಮಿಯ ಕರಿನೆರಳು ಬಿದ್ದಿರುತ್ತೆ ಹೀಗಾಗಿ  ಪಾರ್ಶ್ವ ಗ್ರಹಣ ಎಂದು ಕರೆಯಲಾಗಿದೆ.

ಈಗಾಗಲೇ ನೆಹರೂ ತಾರಾಲಯದಲ್ಲಿ ಟೆಲಿಸ್ಕೋಪ್ ಮೂಲಕ ಚಂದ್ರನ ವೀಕ್ಷಣೆಗೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಬರಿಗಣ್ಣಿಂದ ಚಂದ್ರನನ್ನು ನೋಡಿದ್ರೆ ಯಾವುದೇ ಸಮಸ್ಯೆ ಉಂಟಾಗೋದಿಲ್ಲ ಅಂತಾರೆ ನೆಹರೂ ತಾರಾಲಯದ ಅಧಿಕಾರಿಗಳು..

ವಿಜ್ಞಾನ ಒಂದು ಹೇಳಿದ್ರೆ ಜೋತಿಷ್ಯ ಮತ್ತೊಂದು ಹೇಳುತ್ತೆ. ಗ್ರಹಣದ ವೇಳೆ ಕೆಲವೊಂದು ಆಚರಣೆ ನಿಯಮಗಳನ್ನು ಪಾಲಿಸಬೇಕೆಂದು ಹೇಳುತ್ತೆ ಜೋತಿಷ್ಯ. ಗ್ರಹಣ ನೋಡುವುದರಿಂದ ಕೆಡುಕು ಉಂಟಾಗುತ್ತದೆ ಎಂಬುದು ಜನರಲ್ಲಿನ ನಂಬಿಕೆ. ಗ್ರಹಣಕ್ಕಿಂತ ಮುಂಚೆ ಅಥವಾ ಗ್ರಹಣದ ವೇಳೆ ಮಾಡಿಟ್ಟ ಆಹಾರವನ್ನು ಸೇವಿಸುವುದಿಲ್ಲ. ಒಂದು ವೇಳೆ ಮಾಡಿದರೂ ಅದರಲ್ಲಿ ಒಂದು ದರ್ಬೆಯನ್ನು ಇಟ್ಟರೆ ಯಾವುದೇ ತೊಂದರೆ ಇಲ್ಲ ಎಂದು ಜೋತಿಷ್ಯ ಹೇಳುತ್ತೆ. ಗ್ರಹಣದ ವೇಳೆ ನದಿ ಸ್ನಾನ, ಸಮುದ್ರ ಸ್ನಾನ ಒಳ್ಳೆಯದು. ಹಾಗೂ ದೇವರಸ್ಮರಣೆ ಮಾಡಿದರೆ ಒಳ್ಳೆಯದಂತೆ.

ಒಟ್ಟಾರೆ ಇವತ್ತಿನ ಚಂದ್ರಗ್ರಹಣ ಭಾರತ ಮಾತ್ರವಲ್ಲದೆ, ಯುರೋಪ್, ಏಷ್ಯಾ, ದಕ್ಷಿಣ ಆಫ್ರಿಕಾಗಳಲ್ಲಿ ಕಾಣಿಸಲಿದೆ. ಗ್ರಹಣ ಪ್ರತೀ ವ್ಯಕ್ತಿಯ ಮೇಲೆ ಕೆಟ್ಟ ಪರಿಣಾಮ ಬೀರುವುದಿಲ್ಲ. ಗ್ರಹಣದಿಂದ ಯಾರೂ ಭಯಪಡುವುದು ಬೇಡ. ಗಾಳಿಸುದ್ದಿಗಳಿಗೆ ಕಿವಿಗೊಡದೆ, ಗ್ರಹಣವನ್ನು ಎಲ್ಲರೂ ವೀಕ್ಷಿಸಬಹುದು.

click me!