
ಬೆಂಗಳೂರು(ಜೂ.17): ಪುಂಡ ಮಗನಿಗೆ ಮಠದ ಪೀಠಾಧ್ಯಕ್ಷ ಪಟ್ಟ ಕಟ್ಟಲು ಹುಣಸೇಮಾರಹಳ್ಳಿ ಪರ್ವತರಾಜ ಶಿವಾಚಾರ್ಯ ಸ್ವಾಮಿಗಳು ಮುಂದಾಗಿದ್ದಾರೆ. 500 ವರ್ಷ ಗಳ ಇತಿಹಾಸ ಹೊಂದಿರುವ ಬೆಂಗಳೂರಿನ ಹುಣಸೇಮಾರಹಳ್ಳಿ ಸಂಸ್ಥಾನ ಮಠದಲ್ಲಿಗ ಭಾರಿ ಅವ್ಯವಹಾರಗಳು ನಡೆದಿರುವ ಸಂಶಯ ವ್ಯಕ್ತವಾಗುತ್ತಿದೆ.
500 ವರ್ಷಗಳ ಇತಿಹಾಸವಿರುವ ಬೆಂಗಳೂರಿನ ಹುಣಸಮಾರನಹಳ್ಳಿ ಸಂಸ್ಥಾನ ಮಠದ ಪೀಠಾಧ್ಯಕ್ಷರ ವಿರುದ್ಧ ಭಕ್ತರು ಆಕ್ರೋಶ ವ್ಯಕ್ತವಾಗಿದೆ. ಕಾರಣ ಸಂಸ್ಥಾನ ಮಠದ ಪೀಠಾದ್ಯಕ್ಷ ಪರ್ವತರಾಜ ಶಿವಾಚಾರ್ಯ ಸ್ವಾಮಿಗಳು, ತಮ್ಮ ಪುಂಡಮಗ ದಯಾನಂದ ಅಲಿಯಾಸ್ ಪಟ್ಟದ ಗುರುನಂಜೇಶ್ವರ ಶಿವಾಚಾರ್ಯ ಸ್ವಾಮಿಗೆ ಮಠದ ಪೀಠಾಧ್ಯಕ್ಷ ಪಟ್ಟ ಕಟ್ಟುತ್ತಿರುವ ವಿಚಾರಕ್ಕೆ.
ಹುಣಸೆಮಾರನಹಳ್ಳಿ ಮಠಕ್ಕೆ 500 ವರ್ಷಗಳ ಇತಿಹಾಸವಿದೆ, ಈ ಮಠಕ್ಕೆ ಮೈಸೂರು ಮಹಾರಾಜ ಜಯಚಾಮರಾಜ ಒಡೆಯರ್ 1500 ಎಕರೆ ಭೂಮಿಯನ್ನ ಧಾನವಾಗಿ ನೀಡಿದ್ರು. ಆದರೆ, 1500 ಎಕೆರೆ ಭೂಮಿಯಲ್ಲಿ ಈಗ ಉಳಿದಿರುವುದು ಕೇವಲ 70 ಎಕರೆ ಭೂಮಿಯಂತೆ.. ಇನ್ನುಳಿದ ಭೂಮಿ ಏನಾಯಿತ್ತು ಎಂಬುವುದರ ವಿವರ ಇಲ್ಲಿದೆ.
ಮಠದ ಭೂಮಿ ಏನಾಯ್ತು?
ಮಠಕ್ಕೆ ಮೈಸೂರು ಮಹಾರಾಜರು ನೀಡಿದ ಭೂಮಿ 1500 ಎಕರೆ. ಅದರಲ್ಲಿ 800 ಎಕರೆ ಭೂಮಿಯನ್ನ ಏರ್ಫೋರ್ಸ್ ವಶಪಡಿಸಿಕೊಂಡಿದೆ. ಉಳಿದ 700 ಎಕರೆ ಭೂಮಿಯಲ್ಲಿ 500 ಎಕರೆ ಭೂಮಿ ಕೇಂದ್ರ ಸರ್ಕಾರದ ಉಳುವವನೇ ಹೊಲದೊಡೆಯ ಯೋಜನೆಯಲ್ಲಿ ರೈತರ ಪಾಲಾಗಿದೆ. ಉಳಿದ 200 ಎಕರೆ ಭೂಮಿಯನ್ನ ಮಠದ ಮುಂದಿನ ಪೀಠಾಧಿಪತಿ ಪುಂಡ ಶಿವಾನಂದ ಅಲಿಯಾಸ್ ಗುರುನಂಜೇಶ್ವರ ಶಿವಾಚಾರ್ಯ ಸ್ವಾಮಿ, ತಂದೆ ಪರ್ವತರಾಜ ಶಿವಾಚಾರ್ಯ ಸ್ವಾಮಿಜಿಗಳ ಹೆಸರಿನಲ್ಲಿ ಮಾರಿಕೊಂಡಿದ್ದಾನಂತೆ.
ಗುಳುಂ ಸ್ವಾಮೀಜಿ..!
ಸರ್ವೆ ನಂಬರ್ 41,42 ರಲ್ಲಿ 10 ಎಕರೆ ಭೂಮಿಯನ್ನ ಪರ್ವತರಾಜ ಶಿವಾಚಾರ್ಯರು ಕೃಷ್ಣಪ್ಪ ಎಂಬುವವರ ಮಾರಿದ್ದಾರೆ. ಸರ್ವೆ ನಂಬರ್ 51,52,53,55,58,59,60 ರಲ್ಲಿ 13 ಎಕರೆ 32 ಗುಂಟೆ ಭೂಮಿಯನ್ನ ಶ್ವೇತಾ ಮಂಜುನಾಥ್ ಎಂಬುವವರಿಗೆ 13 ಕೋಟಿ ರೂಪಾಯಿ ಮಾರಾಟಮಾಡಲಾಗಿದೆ. ಇನ್ನು ಸರ್ವೆ ನಂಬರ್ 184 ರಲ್ಲಿ ಇರುವ 20 ಎಕರೆ ಭುಮಿಯನ್ನ ನಿವೃತ್ತ ಡಿಸಿ ನಂಜುಡಪ್ಪ ಎಂಬುವವರಿಗೆ ಮಾರಾಟ ಮಾಡಿದ್ದಾರೆ. ಇತ್ತ ಲಿಂಗಧೀರಣಗೊಳಹಳ್ಳಿ ಯಲ್ಲಿರುವ 7 ಎಕರೆ ಭುಮಿಯನ್ನ ಪ್ರತಿ ಎಕರೆಗೆ 80 ಲಕ್ಷದಂತ್ತೆ ಸ್ಥಳೀಯರಿಗೆ ಮಾರಾಟಮಾಡಲಾಗಿದೆ. ಸಧ್ಯ ದೇವನಹಳ್ಳಿ ಮುಖ್ಯ ರಸ್ತೆ ಪಕ್ಕದಲ್ಲಿರುವ ಸರ್ವೆ 8 ರಲ್ಲಿ 28 ಸಾವಿರ ಅಡಿ ಜಾಗವನ್ನ ಬಾಲಕೃಷ್ಣ ಎಂಬುವವರಿಗೆ ಪೆಟ್ರೋಲ್ ಬಂಕ್ ನಡೆಸಲು ಬೋಗ್ಯಕ್ಕೆ ನೀಡಲಾಗಿದೆ.
ಇದೀಗ, ಮಠಕ್ಕೆ ಹೊಸ ಪೀಠಾಧ್ಯಕ್ಷರಾಗಿ ಎಸ್ಎಸ್ಎಲ್ಸಿ ಡಿಬಾರ್ ಆಗಿರುವ ದಯಾನಂದ ಅಲಿಯಾಸ್ ಪಟ್ಟದ ಗುರುನಂಜೇಶ್ವರ ಶಿವಾಚಾರ್ಯರನ್ನ ನಾಳೆ ಮಠದ ಪೀಠಾಧ್ಯಕ್ಷರ ಪಟ್ಟಕ್ಕೆ ಏರಿಸಲು ಸಕಲ ಸಿದ್ಧತೆ ನಡೆದಿದೆ. ಈತನಿಗೆ ಸರಿಯಾಗೆ ಪೂಜೆ, ಸಂಸ್ಕೃತ, ವೇದ ಹೀಗೆ ಒಬ್ಬ ಪೀಠಾಧಿಪತಿಗೆ ಇರಬೇಕಾದ ಒಂದೇ ಒಂದು ಗುಣ ಇಲ್ಲ, ಇಂತಹವರಿಗೆ ಮಠದ ಚುಕ್ಕಾಣಿ ನೀಡಿದ್ರೆ ಮಠ ನಾಶವಾಗಿ ಹೋಗುತ್ತೆ ಎಂಬುವುದು ಭಕ್ತರ ಆತಂಕ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.