ಮೆಟ್ರೋ ಫೇಸ್ 1 ಉದ್ಘಾಟನೆಗೆ ಕ್ಷಣಗಣನೆ: ಇಂದು ರಾಷ್ಟ್ರಪತಿಯಿಂದ ಲೋಕಾರ್ಪಣೆ

Published : Jun 17, 2017, 10:27 AM ISTUpdated : Apr 11, 2018, 01:13 PM IST
ಮೆಟ್ರೋ ಫೇಸ್ 1 ಉದ್ಘಾಟನೆಗೆ ಕ್ಷಣಗಣನೆ: ಇಂದು ರಾಷ್ಟ್ರಪತಿಯಿಂದ ಲೋಕಾರ್ಪಣೆ

ಸಾರಾಂಶ

ಬೆಂಗಳೂರಿಗೆ ಹೊಸತೊಂದು ಹಿರಿಮೆಯ ಗರಿಯಾಗಿರುವ ಮೆಟ್ರೋ ರೈಲು ದಿನಗಳೆದಂತೆ ತನ್ನ ವಿಸ್ತಾರವನ್ನು ಹೆಚ್ಚಿಸಿಕೊಳ್ಳುತ್ತಿದೆ. ಸುಂದರವಾದ ನಿಲ್ದಾಣ, ಎಸಿ ಕೋಚ್​, ಯಾರ ಕಿರಿಕಿರಿ ಇಲ್ಲದೆ ಕಣ್ಮುಚಿ ತೆಗೆಯೋವಷ್ಟರಲ್ಲಿ ನಮ್ಮ ನಿಲ್ದಾಣ ಬಂದಿರುತ್ತೆ. ಇಂತಹ ಅದ್ಭುತ ಸೇವೆಗೆ ಇಡೀ ಬೆಂಗಳೂರಿನ ಜನ ಮರಳಾಗಿದ್ದಾರೆ. ಇಂದು ಸಂಜೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಂದ ಉದ್ಘಾಟನೆಗೊಳ್ಳಲಿರುವ ಸಂಪಿಗೆ ರಸ್ತೆ TO ಯಲಚೇನಹಳ್ಳಿ ಮಾರ್ಗ ಎಲ್ಲರ ಗಮನ ಸೆಳೆಯುತ್ತಿದೆ.

ಬೆಂಗಳೂರು(ಜೂ.17): ಬೆಂಗಳೂರಿಗೆ ಹೊಸತೊಂದು ಹಿರಿಮೆಯ ಗರಿಯಾಗಿರುವ ಮೆಟ್ರೋ ರೈಲು ದಿನಗಳೆದಂತೆ ತನ್ನ ವಿಸ್ತಾರವನ್ನು ಹೆಚ್ಚಿಸಿಕೊಳ್ಳುತ್ತಿದೆ. ಸುಂದರವಾದ ನಿಲ್ದಾಣ, ಎಸಿ ಕೋಚ್​, ಯಾರ ಕಿರಿಕಿರಿ ಇಲ್ಲದೆ ಕಣ್ಮುಚಿ ತೆಗೆಯೋವಷ್ಟರಲ್ಲಿ ನಮ್ಮ ನಿಲ್ದಾಣ ಬಂದಿರುತ್ತೆ. ಇಂತಹ ಅದ್ಭುತ ಸೇವೆಗೆ ಇಡೀ ಬೆಂಗಳೂರಿನ ಜನ ಮರಳಾಗಿದ್ದಾರೆ. ಇಂದು ಸಂಜೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಂದ ಉದ್ಘಾಟನೆಗೊಳ್ಳಲಿರುವ ಸಂಪಿಗೆ ರಸ್ತೆ TO ಯಲಚೇನಹಳ್ಳಿ ಮಾರ್ಗ ಎಲ್ಲರ ಗಮನ ಸೆಳೆಯುತ್ತಿದೆ.

ಈ ಮಾರ್ಗದ ಸೆಂಟರ್​ ಆಫ್​ ಅಟ್ರ್ಯಾಕ್ಷನ್ ಅಂದ್ರೆ ಮೆಜೆಸ್ಟಿಕ್​ ನಿಲ್ದಾಣ. ಯಾಕಂದ್ರೆ 5 ಪುಟ್​ ಬಾಲ್​ ಮೈದಾನದಷ್ಟು ವಿಸ್ತೀರ್ಣ ಹೊಂದಿದೆ. 60 ಅಡಿ ಭೂ ಅಂತರಾಳದಲ್ಲಿ ಎರಡು ನಿಲ್ದಾಣಗಳನ್ನ ಹೊಂದಿದೆ. ಐದು ಪ್ರವೇಶ ದ್ವಾರ , 26 ಎಸ್ಕಲೆಟರ್​ಗಳನ್ನ ಹೊಂದಿದೆ. ಒಟ್ನಲ್ಲಿ  ಕೆಲ ವರ್ಷಗಳ ಹಿಂದೆ ಮೆಟ್ರೋ ನಿರ್ಮಾಣಕ್ಕಾಗಿ ರಸ್ತೆ ಮಗ್ಗುಲಲ್ಲಿ ಗುಂಡಿ ತೋಡಿದ್ದರಿಂದ ಸಿಲಿಕಾನ್ ಸಿಟಿ ಜನ ಪರದಾಡಿದ್ದರು. ಅದೇ ಜನ ಇವತ್ತು ಮೆಟ್ರೋ ರೈಲು ಅನುಕೂಲ ನೋಡಿ ಖುಷಿಯಿಂದ ಮಟ್ರೋ ಮೈ ಡಾರ್ಲಿಂಗ್ ಅಂತಿದ್ದಾರೆ.

 

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಶಾಸಕ ಬೈರತಿಗೆ ಕಂಟಕವಾದ ಕುಂಭಮೇಳ ಯಾತ್ರೆ!
ಕರ್ನಾಟಕಕ್ಕೆ ಶೀತ ಅಲೆಯ ಕಂಟಕ: ರಾಯಚೂರಿನಲ್ಲಿ 9.4 ಡಿಗ್ರಿಗೆ ಕುಸಿದ ತಾಪಮಾನ! ಎಲ್ಲೆಲ್ಲಿ ಆರೆಂಜ್ ಅಲರ್ಟ್?