ಬ್ಯಾಂಕ್‌’ನಲ್ಲಿ 1ಲಕ್ಷ 80 ಸಾವಿರ ಮೌಲ್ಯದ ನಕಲಿ ನೋಟು ಪತ್ತೆ

Published : Dec 04, 2016, 03:38 PM ISTUpdated : Apr 11, 2018, 12:47 PM IST
ಬ್ಯಾಂಕ್‌’ನಲ್ಲಿ 1ಲಕ್ಷ 80 ಸಾವಿರ ಮೌಲ್ಯದ ನಕಲಿ ನೋಟು ಪತ್ತೆ

ಸಾರಾಂಶ

ಒಟ್ಟು 2.80 ಲಕ್ಷ ರೂ. ಹಳೆಯ 500, 1000 ರೂ. ಮುಖಬೆಲೆಯ ನೋಟುಗಳಲ್ಲಿ 1000 ರೂ ಮುಖಬೆಲೆಯ 163 ನೋಟುಗಳು ಮತ್ತು 500 ರೂ. ಮುಖಬೆಲೆಯ 34  ನೋಟುಗಳು ನಕಲಿ ನೋಟುಗಳಿರುವುದು ಕಂಡುಬಂದಿದೆ.

ಚಿಕ್ಕಬಳ್ಳಾಪುರ (ಡಿ.04): ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ನಗರದ ಕರ್ಣಾಟಕ ಬ್ಯಾಂಕ್ ನಲ್ಲಿ ಖೋಟಾ ನೋಟು ಪತ್ತೆಯಾಗಿದೆ.

ಕಳೆದ  ಶುಕ್ರವಾರ ಕರ್ನಾಟಕ ಬ್ಯಾಂಕ್’ಗೆ, ರವಿಂದ್ರನಾಥ್ ಎಂಬ ಹೆಸರಿನಲ್ಲಿ 2.80 ಲಕ್ಷ ರೂ. ಹಣವನ್ನು ಡೆಪಾಸಿಟ್ ಮಾಡಲು ಅನಿಲ್ ಕುಮಾರ್ ಎಂಬಾತನು ಬಂದಿದ್ದನು.

ಹಣ ಡೆಪಾಸಿಟ್ ಮಾಡಿಕೊಳ್ಳುವಾಗ ಬ್ಯಾಂಕ್ ಸಿಬ್ಬಂದಿಗೆ ಶಾಕ್ ಆಯ್ತು. ತಂದಿದ್ದ ಹಣದಲ್ಲಿ 1.80 ಲಕ್ಷ ರೂ. ಹಣ ನಕಲಿ ನೋಟುಗಳಿಂದ ಕೂಡಿತ್ತು. 

ಒಟ್ಟು 2.80 ಲಕ್ಷ ರೂ. ಹಳೆಯ 500, 1000 ರೂ. ಮುಖಬೆಲೆಯ ನೋಟುಗಳಲ್ಲಿ 1000 ರೂ ಮುಖಬೆಲೆಯ 163 ನೋಟುಗಳು ಮತ್ತು 500 ರೂ. ಮುಖಬೆಲೆಯ 34  ನೋಟುಗಳು ನಕಲಿ ನೋಟುಗಳಿರುವುದು ಕಂಡುಬಂದಿದೆ.

ಆದರೆ ಬ್ಯಾಂಕ್ ಅಧಿಕಾರಿಗಳು ಅಂದೇ ಪೊಲೀಸರಿಗೆ ದೂರು ನೀಡದೇ, ನಿನ್ನೆ ಸಂಜೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದು ಅನೇಕ ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

(ಸಾಂದರ್ಭಿಕ ಚಿತ್ರ)

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅಪ್ಪ ಇಲ್ಲದ ಕಂದನಿಗೆ ತಾಯಿ ಆಸೆಯಂತೆ ಹೆಸರಿಟ್ಟ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ
Sports Visa Scam: ಭಾರತದ ಕುಸ್ತಿಪಟುಗಳೆಂದು ಸುಳ್ಳು ಹೇಳಿ ಹಂಗೇರಿ ವೀಸಾಗೆ 11 ಅರ್ಜಿ!