ಅಮ್ಮನ ಯುಗಾಂತ್ಯ : ತಮಿಳುನಾಡಿನ ಆರಾಧ್ಯ ದೇವತೆ ಇನ್ನಿಲ್ಲ

Published : Dec 04, 2016, 03:21 PM ISTUpdated : Apr 11, 2018, 01:05 PM IST
ಅಮ್ಮನ ಯುಗಾಂತ್ಯ : ತಮಿಳುನಾಡಿನ ಆರಾಧ್ಯ ದೇವತೆ ಇನ್ನಿಲ್ಲ

ಸಾರಾಂಶ

ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಚೆನ್ನೈನ ಅಪೋಲೊ ಆಸ್ಪತ್ರೆಯಲ್ಲಿ ಡಿ.5ರಂದು ಸೋಮವಾರ ರಾತ್ರಿ 11.30 ಕ್ಕೆ ಕೊನೆಯುಸಿರೆಳದಿದ್ದಾರೆ. ಅನಾರೋಗ್ಯದ ಕಾರಣದಿಂದ ಸೆ.22 ರಂದು ಆಸ್ಪತ್ರೆಗೆ ದಾಖಲಾಗಿದ್ದ  ಜಯಲಲಿತಾ ಅವರಿಗೆ ಅಪೋಲೊ ವೈದ್ಯರಲ್ಲದೆ, ಲಂಡನ್, ಸಿಂಗಾಪುರ್'ನ ತಜ್ಞ ವೈದ್ಯರಿಂದ ಚಿಕಿತ್ಸೆ ನೀಡಲಾಗಿತ್ತು. ಸುಮಾರು 74 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು.

ಚೆನ್ನೈ(ಡಿ.6): ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಚೆನ್ನೈನ ಅಪೋಲೊ ಆಸ್ಪತ್ರೆಯಲ್ಲಿ ಡಿ.5ರಂದು ಸೋಮವಾರ ರಾತ್ರಿ 11.30 ಕ್ಕೆ ಕೊನೆಯುಸಿರೆಳದಿದ್ದಾರೆ. ಅನಾರೋಗ್ಯದ ಕಾರಣದಿಂದ ಸೆ.22 ರಂದು ಆಸ್ಪತ್ರೆಗೆ ದಾಖಲಾಗಿದ್ದ  ಜಯಲಲಿತಾ ಅವರಿಗೆ ಅಪೋಲೊ ವೈದ್ಯರಲ್ಲದೆ, ಲಂಡನ್, ಸಿಂಗಾಪುರ್'ನ ತಜ್ಞ ವೈದ್ಯರಿಂದ ಚಿಕಿತ್ಸೆ ನೀಡಲಾಗಿತ್ತು. ಸುಮಾರು 74 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು.

ಕರ್ನಾಟಕದ ಮಂಡ್ಯ ಜಿಲ್ಲೆಯ ಮೇಲುಕೋಟೆಯಲ್ಲಿ 1948 ಫೆಬ್ರವರಿ 24 ರಂದು ಜನಿಸಿದ್ದ ಇವರು ಬೆಂಗಳೂರಿನಲ್ಲಿ ತಮ್ಮ ವಿದ್ಯಾಭ್ಯಾಸ ಮುಗಿಸಿದ್ದರು. ನಂತರ ತಮಿಳುನಾಡುಗೆ ವಲಸೆ ಹೋಗಿ ಅಲ್ಲಿ ಸಿನಿಮಾ ರಂಗದಲ್ಲಿ ನಾಯಕಿಯಾಗಿ ಖ್ಯಾತಿಗಳಿಸಿದ್ದರು. ನಂತರ ಅಂದಿನ ಮುಖ್ಯಮಂತ್ರಿಯಾಗಿದ್ದ ಎಂ.ಜಿ. ರಾಮಚಂದ್ರನ್ ಅವರ ಪ್ರಭಾವದಿಂದ ಎಐಎಡಿಎಂಕೆ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು.

ಎಂಜಿಆರ್ ಅವರ ಮರಣ ನಂತರ ಎಐಎಡಿಎಂಕೆ ಪಕ್ಷದ ಸಾರಥ್ಯ ವಹಿಸಿ 1991ರಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿ ನೇಮಕಗೊಂಡಿದ್ದರು. ನಂತರ 2001,2011,2015 ರಲ್ಲಿ ಪಕ್ಷದ ಅಧಿನಾಯಕಿಯಾಗಿ ಒಟ್ಟು 4 ಬಾರಿ ಮುಖ್ಯಮಂತ್ರಿಯಾಗಿ ಆಳ್ವಿಕೆ ನಡೆಸಿದ್ದರು. ಕಳೆದ ವರ್ಷ 2015ರಲ್ಲಿ ಅಧಿಕಾರಕ್ಕೆ ಬಂದಾಗ ಅಮ್ಮ ಹೆಸರಿನಲ್ಲಿ ರಾಜ್ಯದಾದ್ಯಂತ ಹಲವು ಯೋಜನೆಗಳನ್ನು ಜಾರಿಗೊಳಿಸಿ ಖ್ಯಾತಿಯ ಉತ್ತುಂಗಕ್ಕೇರಿದ್ದರು.

ಇಂದು ತಮಿಳು ನಾಡು ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ : ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ನಿಧನದ ಹಿನ್ನಲೆಯಲ್ಲಿ ತಮಿಳು ನಾಡು ಶಾಲಾ ಕಾಲೇಜುಗಳಿಗೆ ಇಂದು ರಜೆ ಘೋಷಿಸಲಾಗಿದೆ

ಹಲವರ ಸಂತಾಪ : ರಾಷ್ಟ್ರ ಹಾಗೂ ರಾಜ್ಯದ ಹಲವು ಗಣ್ಯಯ ನಾಯಕರು ಕಂಬನಿ ಮಿಡಿದಿದ್ದಾರೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಾಯಚೂರು ಲೋಕಾ ದಾಳಿ, ಎಇಇ ವಿಜಯಲಕ್ಷ್ಮಿ ಮನೆಯಲ್ಲಿ ಸಿಕ್ತು ಲೆಕ್ಕವಿಲ್ಲದಷ್ಟು ಆಸ್ತಿ, ಚಿನ್ನ! ಬೆಳಗ್ಗಿನಿಂದ ಇನ್ನೂ ಮುಗಿಯದ ಶೋಧ!
ಬೆಚ್ಚಿಬಿದ್ದ ಬೆಂಗಳೂರು, ಡಿವೋರ್ಸ್ ಕೇಳಿದ ಪತ್ನಿಯನ್ನು ನಡುರಸ್ತೆಯಲ್ಲಿ ಗುಂಡಿಟ್ಟು ಕೊಂದ ಪತಿ!