ಐದು ವರ್ಷದ ಬಾಲಕಿಯ ಕೊ*ಲೆ ಪ್ರಕರಣ, ಮರಣೋತ್ತರ ಪರೀಕ್ಷೆಯಲ್ಲಿ ಅತ್ಯಾ*ಚಾರ ಸಾಬೀತು!

Published : Apr 14, 2025, 01:39 PM ISTUpdated : Apr 14, 2025, 03:08 PM IST
ಐದು ವರ್ಷದ ಬಾಲಕಿಯ ಕೊ*ಲೆ ಪ್ರಕರಣ, ಮರಣೋತ್ತರ ಪರೀಕ್ಷೆಯಲ್ಲಿ ಅತ್ಯಾ*ಚಾರ ಸಾಬೀತು!

ಸಾರಾಂಶ

ಹುಬ್ಬಳ್ಳಿಯಲ್ಲಿ ಐದು ವರ್ಷದ ಬಾಲಕಿಯ ಕೊಲೆ ಪ್ರಕರಣವು ನಡೆದಿದೆ. ಮರಣೋತ್ತರ ಪರೀಕ್ಷೆಯಲ್ಲಿ ಅತ್ಯಾಚಾರ ನಡೆದಿರುವುದು ದೃಢಪಟ್ಟಿದೆ. ಆರೋಪಿ ರಿತೇಶ್ ಬಾಲಕಿಯನ್ನು ಅಪಹರಿಸಿ, ಅತ್ಯಾಚಾರವೆಸಗಿ ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ. ಸಾರ್ವಜನಿಕರ ಆಕ್ರೋಶ ಹೆಚ್ಚಾದ ಕಾರಣ ಪೊಲೀಸರು ಆರೋಪಿಯನ್ನು ಎನ್‌ಕೌಂಟರ್ ಮಾಡಿದ್ದಾರೆ. ಈ ಪ್ರಕರಣದಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಹುಬ್ಬಳ್ಳಿ (ಏ.14): ಐದು ವರ್ಷದ ಬಾಲಕಿ ಕೊಲೆ ಪ್ರಕರಣದಲ್ಲಿ ಇಂದಿನ ದೃಶ್ಯಗಳ ಮನಃಕಲುಕುವಂತಿದೆ. ಇದರ ನಡುವೆ ಮರಣೋತ್ತರ ಪರೀಕ್ಷೆಯಲ್ಲಿ ಬಾಲಕಿಯ ಮೇಲೆ ಅತ್ಯಾಚಾರ ಆಗಿರುವುದು ದೃಢಪಟ್ಟಿದೆ. ಬಾಲಕಿ ಮೇಲೆ ಅತ್ಯಾಚಾರ ನಡೆಸಿ ಬಳಿಕ ಆಕೆಯನ್ನು ಕೊಲೆಗೈದಿದ್ದ ಎನ್ನಲಾಗಿದೆ. ಅತ್ಯಾಚಾರ ನಡೆಸಿದ ನಂತರ ಬಾಲಕಿ ಧರಿಸಿಕೊಂಡಿದ್ದ ಲೆಗ್ಗಿನ್ಸ್ ನ್ನು ತನ್ನ ಒಳಚಡ್ಡಿಯಲ್ಲಿ ಕಿರಾತಕ ಇರಿಸಿಕೊಂಡಿದ್ದ ಎನ್ನಲಾಗಿದೆ.

ಇಡೀ ಪ್ರಕರಣದಲ್ಲಿ ಆತ ವಿಕೃತ ಕಾಮಿಯಂತೆ ವರ್ತಿಸಿದ್ದ ಎಂದು ಕಿಮ್ಸ್ ವೈದ್ಯರು ಮಾಹಿತಿ ನೀಡಿದ್ದಾರೆ. ಆದರೆ, ಮರಣೋತ್ತರ ಪರೀಕ್ಷಾ ವರದಿ ಅಧಿಕೃತವಾಗಿ ಇನ್ನಷ್ಟೇ ಹೊರಬರಬೇಕಿದೆ. ಬಾಲಕಿಯ ಮೇಲೆ ಅತ್ಯಾಚಾರ ನಡೆದಿದೆ ಎಂದು  ಪೋಷಕರು ಮತ್ತು ಸಾರ್ವಜನಿಕರು ಆರೋಪ ಮಾಡಿದ್ದರು. ಆರೋಪಿ ವಿರುದ್ಧ ಪೋಕ್ಸೋ, ಅಪಹರಣ ಮತ್ತು ಕೊಲೆ ಸೆಕ್ಷನ್ ಗಳಡಿ ಪ್ರಕರಣವನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. ಇನ್ನು ಪ್ರಕರಣದ ಆರೋಪಿ ರಿತೇಶ್‌ನನ್ನು ಈಗಾಗಲೇ ಪೊಲೀಸರು ಎನ್‌ಕೌಂಟರ್‌ ಮಾಡಿದ್ದಾರೆ.

ಅಗಿರುವ ಘಟನೆ ಏನು: ಶರಣಪ್ಪ-ಲತಾ ಪುರಿ ದಂಪತಿ ಕಳೆದ ಹಲವು ವರ್ಷಗಳಿಂದ ಹುಬ್ಬಳ್ಳಿಯಲ್ಲಿ ವಾಸವಾಗಿದ್ದಾರೆ. ಶರಣಪ್ಪ ಪೇಂಟಿಂಗ್‌ ಕೆಲಸ ಮಾಡುತ್ತಿದ್ದರೆ, ಲತಾ ಮನೆಗೆಲಸ ಮಾಡುತ್ತಿದ್ದರು. ಎಂದಿನಂತೆ ಲತಾ ಭಾನುವಾರ ಬೆಳಗ್ಗೆ ವಿಜಯನಗರ ಬಡಾವಣೆಯಲ್ಲಿರುವ ಮನೆಯೊಂದಕ್ಕೆ ಕೆಲಸಕ್ಕೆ ಹೋದ ವೇಳೆ ಮಗಳನ್ನೂ ಕರೆದುಕೊಂಡು ಹೋಗಿದ್ದರು. ತಾಯಿ ಮನೆಯ ಒಳಗಡೆ ಕೆಲಸ ಮಾಡುತ್ತಿದ್ದಾಗ ಆಧ್ಯಾ ಸಾಯಿ ಮನೆಯ ಮುಂದಿನ ಆವರಣದಲ್ಲಿ ಆಟವಾಡಿಕೊಂಡಿದ್ದಳು.

ಈ ವೇಳೆ ಮಗುವಿನ ಚಲನವಲನ ಗಮನಿಸಿದ ರಿತೇಶ್‌ ಕುಮಾರ ಎಂಬಾತ, ಬಾಲಕಿಗೆ ಚಾಕೋಲೆಟ್‌ ಕೊಡಿಸುವುದಾಗಿ ಹೇಳಿ ಆಮಿಷ ತೋರಿಸಿ ಅಪಹರಿಸಿ, ಸಮೀಪದಲ್ಲೇ ನಿರ್ಮಾಣ ಹಂತದಲ್ಲಿದ್ದ ಕಟ್ಟಡದ ಶೌಚಾಲಯಕ್ಕೆ ಕರೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಬಾಲಕಿ ಕಿರುಚಾಡಿದಾಗ ಕತ್ತು ಹಿಸುಕಿ ಕೊಲೆ ಮಾಡಿ ಅಲ್ಲಿಂದ ಪರಾರಿಯಾಗಿದ್ದ.

ಬಳಿಕ ಮನೆ ಕೆಲಸ ಮುಗಿಸಿಕೊಂಡು ಬಂದ ತಾಯಿಗೆ ಮಗಳು ಕಾಣಿಸದೇ ಇದ್ದಾಗ ಗಾಬರಿಯಿಂದ ಹುಡುಕಾಟ ನಡೆಸಿದಳು. ಆಗ ಶೌಚಾಲಯದಲ್ಲಿ ಮಗು ಶವವಾಗಿ ಬಿದ್ದಿರುವುದು ಕಂಡಿತು. ತಾಯಿಯ ರೋದನ ಕೇಳಿ, ಸ್ಥಳಕ್ಕೆ ಆಗಮಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದರು.

ಭುಗಿಲೆದ್ದ ಆಕ್ರೋಶ: ಮಗುವಿನ ಹತ್ಯೆಯ ಸುದ್ದಿ ನಗರದಲ್ಲಿ ಕಾಡ್ಗಿಚ್ಚಿನಂತೆ ಹಬ್ಬಿ, ಸ್ಥಳೀಯರು ಅಶೋಕನಗರ ಠಾಣೆಯ ಎದುರು ಜಮಾವಣೆಗೊಂಡು ಪ್ರತಿಭಟನೆ ಶುರು ಮಾಡಿದರು. ಆರೋಪಿಯನ್ನು ಬಂಧಿಸಿ ಎನ್‌ಕೌಂಟರ್ ಮಾಡಬೇಕು, ಇಲ್ಲವೇ ಆರೋಪಿಯನ್ನು ನಮಗೆ ನೀಡಿ, ನಾವೇ ಶಿಕ್ಷೆ ಕೊಡುತ್ತೇವೆ ಎಂದು ಆಗ್ರಹಿಸಿ 5 ಗಂಟೆಗೂ ಹೆಚ್ಚುಕಾಲ ಪ್ರತಿಭಟನೆ ನಡೆಸಿದರು.

ಸಾರ್ವಜನಿಕರ ತೀವ್ರ ಪ್ರತಿಭಟನೆಯಿಂದ ಒತ್ತಡಕ್ಕೊಳಗಾದ ಪೊಲೀಸ್‌ ಆಯುಕ್ತರು, ಆರೋಪಿ ಪತ್ತೆಗೆ 5 ತಂಡಗಳನ್ನು ರಚಿಸಿ ಶೋಧಕಾರ್ಯ ಶುರು ಮಾಡಿದರು. ಸಿಸಿ ಕ್ಯಾಮರಾಗಳನ್ನು ಪರಿಶೀಲಿಸಿ, ರಕ್ಷಿತ ಕುಮಾರ ಕ್ರಾಂತಿ ವಾಸವಾಗಿದ್ದ ಇಲ್ಲಿನ ತಾರಿಹಾಳ ಬ್ರಿಡ್ಜ್‌ ಬಳಿಯ ಮನೆಯ ಮೇಲೆ ದಾಳಿ ನಡೆಸಿದರು. ಆತನನ್ನು ಬಂಧಿಸಲು ಮುಂದಾಗುತ್ತಿದ್ದಂತೆ ಆತ ಪೊಲೀಸರ ಮೇಲೆಯೇ ಹಲ್ಲೆ ನಡೆಸಿದ. ಪೊಲೀಸ್‌ ವಾಹನಕ್ಕೆ ಕಲ್ಲೆಸೆದು ತಪ್ಪಿಸಿಕೊಳ್ಳಲು ಯತ್ನಿಸಿದ.

ಹುಬ್ಬಳ್ಳಿಯಲ್ಲಿ ಮಗುವಿನ ಅತ್ಯಾ*ಚಾರ ಕೊಲೆ: ಆರೋಪಿ ಎನ್‌ಕೌಂಟಗೆ ಬಲಿ!

ಈ ವೇಳೆ, ಅಶೋಕನಗರ ಠಾಣೆಯ ಮಹಿಳಾ ಪಿಎಸ್‌ಐ ಅನ್ನಪೂರ್ಣಾ 2 ಬಾರಿ ಗಾಳಿಯಲ್ಲಿ ಗುಂಡು ಹಾರಿಸಿ ಸರೆಂಡರ್‌ ಆಗುವಂತೆ ಎಚ್ಚರಿಸಿದರು. ಆದರೂ ಆತ ತನ್ನ ಕೃತ್ಯ ಮುಂದುವರಿಸಿದಾಗ ಅನಿವಾರ್ಯವಾಗಿ ಆತನ ಕಾಲಿಗೆ ಗುಂಡು ಹೊಡೆದಿದ್ದಾರೆ. ಅದನ್ನು ಲೆಕ್ಕಿಸದೇ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಮತ್ತೊಂದು ಗುಂಡು ಹೊಡೆದಾಗ ಅದು ಆರೋಪಿಯ ಬೆನ್ನಿಗೆ ಬಿದ್ದಿದ್ದು ತೀವ್ರವಾಗಿ ಗಾಯಗೊಂಡಿದ್ದಾನೆ. ತಕ್ಷಣ ಆತನನ್ನು ಕೆಎಂಸಿಆರ್‌ಐಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ. ಈ ಘಟನೆಯಲ್ಲಿ ಮೂವರು ಪೊಲೀಸ್‌ ಸಿಬ್ಬಂದಿ ಕೂಡ ಗಾಯಗೊಂಡಿದ್ದಾರೆ. ಗಾಯಾಳುಗಳು ಕೆಎಂಸಿಆರ್‌ಐನಲ್ಲಿ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ.

ಮಂಡ್ಯ: ಮತಾಂತರಕ್ಕೆ ಒಪ್ಪದ ಪತ್ನಿ, ಅತ್ತೆ ಮೇಲೆ ಮಾರಣಾಂತಿಕ ಹಲ್ಲೆ?

ಮಾದಕ ವ್ಯಸನಿ ಆರೋಪಿ: ಆರೋಪಿ ರಿತೇಶ್‌ ಕುಮಾರ್‌ ಕಳೆದ ಕೆಲ ತಿಂಗಳಿಂದ ಇಲ್ಲೇ ವಾಸವಾಗಿದ್ದ. ಆತ ಗಾಂಜಾ ಸೇರಿದಂತೆ ವಿವಿಧ ಮಾದಕ ವ್ಯಸನಿಯಾಗಿದ್ದ. ಗಾಂಜಾ ಅಮಲಿನಲ್ಲೇ ಈತ ಬಾಲಕಿಯನ್ನು ಅಪಹರಿಸಿ, ಅತ್ಯಾಚಾರಕ್ಕೆ ಯತ್ನಿಸಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Explainer: ವಿಶ್ವದ ಅತಿದೊಡ್ಡ ಏರ್‌ಲೈನ್ಸ್‌ ಸ್ಮಶಾನವಾದ ಭಾರತ, ದೇಶದಲ್ಲಿ ವಿಮಾನ ಕಂಪನಿ ಬದುಕೋದು ಯಾಕೆ ಕಷ್ಟ?
ರತನ್ ಟಾಟಾ ಮಲತಾಯಿ, ಲ್ಯಾಕ್‌ಮೆ ಫ್ಯಾಶನ್ ಸಂಸ್ಥಾಪಕಿ ಸೈಮನ್ ಟಾಟಾ ನಿಧನ