ಅಮರನಾಥ ಯಾತ್ರೆ 2025: ನೋಂದಣಿ ಪ್ರಕ್ರಿಯೆ ಆರಂಭ!

Published : Apr 14, 2025, 01:18 PM ISTUpdated : Apr 14, 2025, 02:20 PM IST
ಅಮರನಾಥ ಯಾತ್ರೆ 2025: ನೋಂದಣಿ ಪ್ರಕ್ರಿಯೆ ಆರಂಭ!

ಸಾರಾಂಶ

ಅಮರನಾಥ ಯಾತ್ರೆ 2025ಕ್ಕೆ ಏಪ್ರಿಲ್ 14ರಿಂದ ನೋಂದಣಿ ಆರಂಭವಾಗಿದೆ. ಆನ್‌ಲೈನ್‌ನಲ್ಲಿ SASB ವೆಬ್‌ಸೈಟ್, ಆಫ್‌ಲೈನ್‌ನಲ್ಲಿ ಗೊತ್ತುಪಡಿಸಿದ ಬ್ಯಾಂಕ್‌ಗಳಲ್ಲಿ ನೋಂದಾಯಿಸಿಕೊಳ್ಳಬಹುದು. ಕಡ್ಡಾಯ ಆರೋಗ್ಯ ಪ್ರಮಾಣಪತ್ರ (CHC) ಅಗತ್ಯ. 13 ವರ್ಷಕ್ಕಿಂತ ಕಡಿಮೆ ಮತ್ತು 70 ವರ್ಷ ಮೇಲ್ಪಟ್ಟವರಿಗೆ ಅವಕಾಶವಿಲ್ಲ. ಜೂನ್ 29 ರಿಂದ ಆಗಸ್ಟ್ 19 ರವರೆಗೆ ಯಾತ್ರೆ ನಡೆಯಲಿದ್ದು, ಪಹಲ್ಗಾಮ್ ಅಥವಾ ಬಾಲ್ಟಾಲ್ ಮಾರ್ಗವಾಗಿ ಹೋಗಬಹುದು. ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಹಿಂದೂಗಳ ಪವಿತ್ರ ಯಾತ್ರಾಸ್ಥಳ, ವಾರ್ಷಿಕ ಪವಿತ್ರ ಅಮರನಾಥ ಯಾತ್ರೆ 2025ಕ್ಕೆ ನೋಂದಣಿ ಪ್ರಕ್ರಿಯೆ ಏಪ್ರಿಲ್‌ 14ರಿಂದ ಆರಂಭವಾಗಿದೆ. ನೋಂದಣಿಯಿಂದ ಹಿಡಿದು ಕಡ್ಡಾಯ ಆರೋಗ್ಯ ತಪಾಸಣೆಗಳು ಮತ್ತು ಏನು ಮಾಡಬೇಕು ಮತ್ತು ಏನು ಮಾಡಬಾರದು ಹೀಗೆ ದೈವಿಕ ಯಾತ್ರೆಯ ಭಾಗವಾಗಲು ಯೋಜಿಸುತ್ತಿರುವವರಿಗೆ ಸಂಪೂರ್ಣ ಮಾರ್ಗಸೂಚಿಗಳು ದೊರೆಯಲಿದೆ. ಯಾತ್ರಿಕರು ಶ್ರೀ ಅಮರನಾಥ ಜೀ ದೇವಾಲಯ ಮಂಡಳಿಯ (SASB) ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಅಥವಾ ದೇಶಾದ್ಯಂತ  ಗೊತ್ತುಪಡಿಸಿದ 540  ಬ್ಯಾಂಕ್ ಶಾಖೆಗಳ ಮೂಲಕ ಆಫ್‌ಲೈನ್‌ನಲ್ಲಿ  ಹೆಸರು ನೋಂದಾಯಿಸಿಕೊಳ್ಳಬಹುದು.

ಉಗ್ರರ ದಾಳಿ ಬೆದರಿಕೆ ನಡುವೆಯೂ 15 ದಿನದಲ್ಲಿ ಅಮರನಾಥಕ್ಕೆ 3 ಲಕ್ಷ ಭಕ್ತರು: ದಾಖಲೆ!

ಆನ್‌ಲೈನ್ ನೋಂದಣಿ ಹಂತಗಳು:
1. ಅಧಿಕೃತ SASB ಪೋರ್ಟಲ್ - https://jksasb.nic.in ಗೆ ಭೇಟಿ ನೀಡಿ.
2. “ಯಾತ್ರಾ 2025 ನೋಂದಣಿ” ಮೇಲೆ ಕ್ಲಿಕ್ ಮಾಡಿ.
3. ಅಗತ್ಯವಿರುವ ದಾಖಲೆಗಳನ್ನು ಅಪ್‌ಲೋಡ್ ಮಾಡಿ 
- ಇತ್ತೀಚಿನ ಪಾಸ್‌ಪೋರ್ಟ್ ಗಾತ್ರದ ಫೋಟೋ
- ಏಪ್ರಿಲ್ 15, 2025 ರ ನಂತರ ನೀಡಲಾದ ಕಡ್ಡಾಯ ಆರೋಗ್ಯ ಪ್ರಮಾಣಪತ್ರ (CHC)
- ಸರ್ಕಾರ ಮಾನ್ಯ ಮಾಡಿರುವ ID ಪುರಾವೆ
4. ನೋಂದಣಿಯನ್ನು ಪೂರ್ಣಗೊಳಿಸಲು ಪಾವತಿ ಮಾಡಿ.

ಆಫ್‌ಲೈನ್  ನಲ್ಲಿ ನೋಂದಣಿ ಮಾಡುವವರ ಗಮನಕ್ಕೆ
ಪಂಜಾಬ್ ನ್ಯಾಷನಲ್ ಬ್ಯಾಂಕ್, ಜಮ್ಮು ಮತ್ತು ಕಾಶ್ಮೀರ ಬ್ಯಾಂಕ್ ಮತ್ತು ಇತರ ಬ್ಯಾಂಕ್‌ಗಳ ನಿರ್ದಿಷ್ಟ ಶಾಖೆಗಳಲ್ಲಿ ಆಫ್‌ಲೈನ್ ನೋಂದಣಿಯನ್ನು ಮಾಡಲಾಗುತ್ತಿದೆ. ವೈಯಕ್ತಿಕವಾಗಿ ನೋಂದಾಯಿಸುವಾಗ ಮೂಲ ದಾಖಲೆಗಳು ಮತ್ತು CHC ಅನ್ನು ಕೊಂಡೊಯ್ಯಲು ಖಚಿತಪಡಿಸಿಕೊಳ್ಳಿ.

ಅಧಿಕೃತ ವೈದ್ಯರು ಅಥವಾ ಆರೋಗ್ಯ ಸಂಸ್ಥೆಗಳು ನೀಡುವ ಕಡ್ಡಾಯ ಆರೋಗ್ಯ ಪ್ರಮಾಣಪತ್ರ (CHC) ಇಲ್ಲದೆ ಯಾರೂ ಯಾತ್ರೆ  ಮಾಡಲು ಅವಕಾಶ ಇರುವುದಿಲ್ಲ.  ನೀವು ಎತ್ತರದ ಚಾರಣವನ್ನು ಮಾಡುವಾಗ ದೈಹಿಕವಾಗಿ ಸದೃಢರಾಗಿದ್ದೀರಿ ಎಂದು ವೈದ್ಯರ ಪ್ರಮಾಣಪತ್ರ ಖಚಿತಪಡಿಸುತ್ತದೆ. ಈ ಪ್ರಮಾಣ ಪತ್ರ ನೀಡುವಾಗ ಏಪ್ರಿಲ್ 15ರ ನಂತರ ತಪಾಸಣೆ ಮಾಡಿಸಿಕೊಂಡ ಪ್ರಮಾಣಪತ್ರ ಇದರಬೇಕು.  13 ವರ್ಷಕ್ಕಿಂತ ಕಡಿಮೆ ಇರುವ ಮತ್ತು 70 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಯಾತ್ರೆಗೆ  ಅವಕಾಶವಿಲ್ಲ. ಬೇಸ್ ಕ್ಯಾಂಪ್‌ಗಳಲ್ಲಿ ಕಠಿಣ ತಪಾಸಣೆ  ಇರುವುದರಿಂದ ನಿಮ್ಮ CHC ಮತ್ತು ಗುರುತಿನ ಚೀಟಿಯನ್ನು ಯಾವಾಗಲೂ ನಿಮ್ಮೊಂದಿಗೆ ಇಟ್ಟುಕೊಂಡೇ ಇರಬೇಕು.

ಅಮರನಾಥ ಗುಹೆಯಲ್ಲಿ ಇಂದಿಗೂ ಕಾಣ ಸಿಗುತ್ತೆ ಶಿವನಿಂದ ಅಮರತ್ವ ಪಡೆದ ಜೋಡಿ ಪಾರಿವಾಳಗಳು!

ಚಾರಣ ಮಾಡುವವರಿಗೆ ಸಲಹೆಗಳು
ಅಮರನಾಥ ಯಾತ್ರೆಯು ಸವಾಲಿನ ಎತ್ತರದ ಪರ್ವತದ ಚಾರಣವಾಗಿದೆ. ಹೀಗಾಗಿ ಕನಿಷ್ಠ ಒಂದು ತಿಂಗಳ ಮೊದಲು ದೈಹಿಕ ಸದೃಢತಾ ತರಬೇತಿಯನ್ನು ಪ್ರಾರಣಭಿಸುವುದು ಬಹಳ ಸೂಕ್ತ.ಉಣ್ಣೆಯ ಬಟ್ಟೆಗಳು, ಜಲನಿರೋಧಕ ಬೂಟುಗಳು, ರೇನ್‌ಕೋಟ್‌ಗಳು ಮತ್ತು ಟಾರ್ಚ್ ನಿಮ್ಮ ಜೊತೆಯಲ್ಲಿರಬೇಕು. ಯಾತ್ರಾ ಅಧಿಕಾರಿಗಳು ಮತ್ತು ಭದ್ರತಾ ಸಿಬ್ಬಂದಿ ನೀಡುವ ಸೂಚನೆಗಳನ್ನು  ಪಾಲಿಸಬೇಕು.

ಚಾರಣ ಮಾಡುವ ಇದನ್ನು ಮಾಡಬೇಡಿ
ಈ ಪ್ರದೇಶವು ಪರಿಸರ ಸೂಕ್ಷ್ಮ ಪ್ರದೇಶವಾಗಿರುವುದರಿಂದ ಪ್ಲಾಸ್ಟಿಕ್ ಚೀಲಗಳನ್ನು ಒಯ್ಯಬೇಡಿ.
ಯಾತ್ರೆಯ ಸಮಯದಲ್ಲಿ ಧೂಮಪಾನ ಅಥವಾ ಮದ್ಯಪಾನ ಮಾಡುವುದನ್ನು ತಪ್ಪಿಸಿ. 
ಹವಾಮಾನದ ಕೆಟ್ಟ ಸಮಯದಲ್ಲಿ ಯಾತ್ರೆಯನ್ನು ಕೈಗೊಳ್ಳಬೇಡಿ.
SASB ಎಲ್ಲಾ ಯಾತ್ರಿಕರು ಸ್ವಚ್ಛತೆಯನ್ನು ಕಾಪಾಡಿಕೊಳ್ಳಲು ಮತ್ತು ಪ್ರದೇಶದ ಪಾವಿತ್ರ್ಯವನ್ನು ಕಾಪಾಡಲು ಮನವಿ ಮಾಡುತ್ತಲೇ ಇರುತ್ತದೆ. ಈ ನಿಯಮವನ್ನು ಚಾಚೂ ತಪ್ಪದೆ ಪಾಲಿಸಿ.

ಸಮುದ್ರಮಟ್ಟದಿಂದ 12756 ಅಡಿ ಎತ್ತರದ ಗುಹೆಯಲ್ಲಿ  ನೈಸರ್ಗಿಕವಾಗಿ ರಚನೆಯಾಗುವ ಹಿಮಲಿಂಗ ದರ್ಶನಕ್ಕೆ ಪ್ರತಿ ವರ್ಷ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಯಾತ್ರೆ ಜೂ.29ರಿಂದ ಆ.19ರವರೆಗೆ ನಡೆಯಲಿದೆ. ಜಮ್ಮು ಮತ್ತು ಕಾಶ್ಮೀರದ ಅಮರನಾಥ ಗುಹಾ ದೇವಾಲಯಕ್ಕೆ ಹೋಗ ಬಯಸುವ ಭಕ್ತರು ಪಹಲ್ಗಾಮ್ ಮಾರ್ಗ (ಸಾಂಪ್ರದಾಯಿಕ ಮತ್ತು ಉದ್ದವಿದೆ) ಅಥವಾ ಬಾಲ್ಟಾಲ್ ಮಾರ್ಗ (ಕಡಿಮೆ ಆದರೆ ಕಡಿದಾದ ದಾರಿ) ಇಲ್ಲಿ ಹೋಗಬಹುದು.

ಇನ್ನು ಇಲ್ಲಿಗೆ ತೆರಳಲು ಹೆಲಿಕಾಪ್ಟರ್ ಸೇವೆಗಳು ಕೂಡ ಲಭ್ಯವಿದೆ ಮತ್ತು ಅಧಿಕೃತ ಸಂಸ್ಥೆಯ ಆನ್‌ಲೈನ್‌ನಲ್ಲಿ ಈ ಸೇವೆಯನ್ನು ಬುಕ್ ಮಾಡಬಹುದು. ಈ ಎರಡೂ ಮಾರ್ಗಗಳನ್ನು ಭಾರತೀಯ ಸೇನೆ ಮತ್ತು ವಿಪತ್ತು ಪ್ರತಿಕ್ರಿಯೆ ತಂಡಗಳು ಮೇಲ್ವಿಚಾರಣೆ ಮಾಡುತ್ತವೆ.  ಸಂಭವಿಸಬಹುದಾದ  ಉಗ್ರರ ದಾಳಿಯ ಹಿನ್ನೆಲೆಯಲ್ಲಿ ಅಮರನಾಥ ಯಾತ್ರೆಯ ಮಾರ್ಗದಲ್ಲಿ ಎಲೆಕ್ಟ್ರಾನಿಕ್‌ ಕಣ್ಗಾವಲು, ಪ್ರವೇಶ ನಿಯಂತ್ರಣ ವ್ಯವಸ್ಥೆ ಸೇರಿದಂತೆ ಹೆಚ್ಚಿನ ಭದ್ರತಾ ಕ್ರಮಗಳನ್ನು ಮಾಡಲಾಗುತ್ತದೆ. ಉಗ್ರರ ದಾಳಿಯಿಂದ ಯಾತ್ರಿಕರನ್ನು ರಕ್ಷಿಸಲು ಅಮರನಾಥ ಯಾತ್ರೆ ಮಾರ್ಗದಲ್ಲಿ ಸಿಸಿಟೀವಿಗಳನ್ನು ಅಳವಡಿಸಲಾಗುತ್ತದೆ, ಸಾವಿರಾರು ಪೊಲೀಸರು, ಸಿಆರ್‌ಪಿಎಫ್‌ ಹಾಗೂ ಐಟಿಬಿಪಿ ಯೋಧರು, ಪ್ಯಾರ ಮಿಲಿಟರಿ ಪಡೆಗಳನ್ನು ಹೆಚ್ಚಿನ ಭದ್ರತೆಗೆ ನಿಯೋಜಿಸಲಾಗುತ್ತದೆ. ಯಾತ್ರೆಗೆ ಬರುವ ಪ್ರತಿಯೊಂದು ವಾಹನವನ್ನು ತಪಾಸಣೆ ಮಾಡಲಾಗುತ್ತದೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
ರಾಷ್ಟ್ರಪತಿಯೂ ಅಲ್ಲ, ಪ್ರಧಾನಿಯೂ ಅಲ್ಲ.. ಕಾರ್‌ನಿಂದ ಇಳಿದ ಬಳಿಕ ಪುಟಿನ್‌ ಶೇಕ್‌ಹ್ಯಾಂಡ್‌ ಮಾಡಿದ್ದು ಇವರಿಗೆ..