ಸ್ನೇಹಕ್ಕೆ ಸ್ನೇಹ..ಪ್ರೀತಿಗೆ ಪ್ರೀತಿ... ಮೋದಿ-ಟ್ರಂಪ್ ಜುಗಲ್‌ಬಂದಿ, ಪಾಕ್‌ಗೆ ಫಜೀತಿ

By Web Desk  |  First Published Sep 22, 2019, 11:18 PM IST

ಟ್ರಂಪ್ ಗುಣಗಾನ ಮಾಡಿದ ಭಾರತದ ಪ್ರಧಾನಿ/ ಮುಂದಿನ ಸಾರಿಯೂ ಅಮೆರಿಕದಲ್ಲಿ ಟ್ರಂಪ್ ಸರ್ಕಾರ ಬರಲಿದೆ / ಭಾರತ ನನ್ನ ನಿಜವಾದ ಸ್ನೇಹಿತ ಎಂದ ಟ್ರಂಪ್


ಹೂಸ್ಟನ್‌[ಸೆ.22]: ಹೂಸ್ಟನ್‌ನ ಎನ್‌ಆರ್‌ಜಿ ಫುಟ್ಬಾಲ್‌ ಮೈದಾನದಲ್ಲಿ ಎಲ್ಲಿ ನೋಡಿದರಲ್ಲಿ ಭಾರತದ ತ್ರಿವರ್ಣ ಧ್ವಜಗಳು.. ಮೋದಿ ಮೋದಿ ಘೋಷಣೆ..ಜನಗಣ ಮನ .. ಇದಕ್ಕೆಲ್ಲ ಕಾರಣ ಅಮೆರಿಕದ ಟೆಕ್ಸಾಸ್‌ ರಾಜ್ಯದ ಹೂಸ್ಟನ್‌ನಲ್ಲಿ ‘ಹೌಡಿ-ಮೋದಿ’ ಸಮಾವೇಶ.

ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ನಂತರ ರಾತ್ರಿ 10.35ಕ್ಕೆ ಮೋದಿ ಭಾಷಣ ಆರಂಭಿಸಿದರು.ಮತ್ತೆ, ಮತ್ತೆ ಟ್ರಂಪ್ ಅವರನ್ನು ಭೇಟಿಯಾಗುವ ಅವಕಾಶ ನನಗೆ ಸಿಗುತ್ತಿದೆ. ಟ್ರಂಪ್ ಸ್ನೇಹ ಸ್ವಭಾವ, ಸಾಮರ್ಥ್ಯ ವಿವರಿಸಲು ಅಸಾಧ್ಯ ಎಂದು ಮೋದಿ ಟ್ರಂಪ್ ಅವರ ಗುಣಗಾನ ಮಾಡಿದರು.

Tap to resize

Latest Videos

undefined

ವಿಶೇಷ ಚೇತನ ಬಾಲಕನಿಂದ ಜನಗಣಮನ: ಹೌಡಿ ಮೋದಿಯಲ್ಲಿ ಈತನದ್ದೇ ಗುಣಗಾನ!

ಟ್ರಂಪ್ ಆಡಳಿತದಲ್ಲಿ ಅಮೆರಿಕದ ಆರ್ಥಿಕತೆ ಈಗ ಮತ್ತಷ್ಟು ಸದೃಢವಾಗಿದೆ ಎಂದು ಕೊಂಡಾಡಿದ ಮೋದಿ ‘ಅಬ್ ಕೀ ಬಾರ್ ಟ್ರಂಪ್ ಸರ್ಕಾರ್’ ಎಂಬ ಘೋಷಣೆಯನ್ನು ತೇಲಿಬಿಟ್ಟರು.

ನಾನು ಮೊದಲ ಬಾರಿಗೆ ಟ್ರಂಪ್ ಭೇಟಿಯಾದಾಗ ಭಾರತ ನಿಜವಾದ ಸ್ನೇಹಿತ ಎಂದಿದ್ದರು. ಎರಡು ಬಲಿಷ್ಠ ಪ್ರಜಾಪ್ರಭುತ್ವ ರಾಷ್ಟ್ರಗಳ ನಾಯಕರು ಒಂದೇ ವೇದಿಕೆಯಲ್ಲಿದ್ದೇವೆ. ನಾವಿಬ್ಬರೂ ಮನುಷ್ಯತ್ವದ ಸಂಬಂಧಗಳನ್ನು ಬೆಸೆಯಲು ಸದಾ ಕೈಜೋಡಿಸುತ್ತೇವೆ ಎಂದು ಮೋದಿ ಹೇಳಿದರು. ಭಾರತೀಯರನ್ನು ಇದ್ದೇಶಿಸಿ ಮೋದಿ ಟ್ರಂಪ್ ಭಾಷಣದ ನಂತರ ಮಾತನಾಡಲಿದ್ದಾರೆ.

"

click me!