ಬಸ್-ಟ್ರ್ಯಾಕ್ಟರ್​ ನಡುವೆ ಭೀಕರ ರಸ್ತೆ ಅಪಘಾತ: 8 ಮಂದಿ ಸಾವು, ಹಲವರಿಗೆ ಗಾಯ

Published : Sep 22, 2019, 09:30 PM ISTUpdated : Sep 22, 2019, 09:36 PM IST
ಬಸ್-ಟ್ರ್ಯಾಕ್ಟರ್​ ನಡುವೆ ಭೀಕರ ರಸ್ತೆ ಅಪಘಾತ: 8 ಮಂದಿ ಸಾವು, ಹಲವರಿಗೆ ಗಾಯ

ಸಾರಾಂಶ

ಬಸ್-ಟ್ರ್ಯಾಕ್ಟರ್​ ನಡುವೆ ಭೀಕರ ರಸ್ತೆ ಅಪಘಾತ| ಘಟನೆಯಲ್ಲಿ ಎಂಟು ಮಂದಿ ದಾರುಣ ಸಾವು| ಸುಮಾರು 30 ರಿಂದ 40 ಪ್ರಯಾಣಿಕರಿಗೆ ಗಾಯ. 

ಅಜ್ಮೇರ್(ರಾಜಸ್ಥಾನ)​:  ಬಸ್​ ಮತ್ತು ಟ್ರ್ಯಾಕ್ಟರ್​ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 8 ಮಂದಿ ಪ್ರಯಾಣಿಕರು ಸಾವನ್ನಪ್ಪಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಅಜ್ಮೇರ್​ ಬಳಿ ನಡೆದಿದೆ.

ರಾಜ್​ಕೋಟ್​ಗೆ ತೆರಳುತ್ತಿದ್ದ ಬಸ್​​ ಅಜ್ಮೇರ್​ನ ಮಂಗಲಿಯವಾಸ್ ಲಮನಾ ಗ್ರಾಮದ ಬಳಿ  ಅಪಘಾತ ಸಂಭವಿಸಿದೆ.ಬಸ್​ನಲ್ಲಿ 60 ರಿಂದ 70 ಮಂದಿ ಪ್ರಯಾಣಿಕರು ಇದ್ದರು ಎಂದು ತಿಳಿದುಬಂದಿದೆ. ಬಸ್​ ಓವರ್​ಟೇಕ್​ ಮಾಡಲು ಹೋಗಿ ಟ್ರ್ಯಾಕ್ಟರ್ನ ಟ್ರೇಲರ್​ಗೆ ಗುದ್ದಿದೆ ಎನ್ನುವುದು ಪ್ರತ್ಯಕ್ಷದರ್ಶಿಗಳ ಮಾತು.

ಘಟನೆಯಲ್ಲಿ  ಸುಮಾರು 30 ರಿಂದ 40 ಪ್ರಯಾಣಿಕರು ಗಾಯಗೊಂಡಿದ್ದು, ಅವರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ. ಗಾಯಗೊಂಡವರಲ್ಲಿ ಕೆಲವರನ್ನು ತಕ್ಷಣ ಜೆಎಲ್​ಎನ್​ ಆಸ್ಪತ್ರೆಗೆ ಆಂಬುಲೆನ್ಸ್​ ಸಹಾಯದಿಂದ ರವಾನಿಸಲಾಗಿದ್ದು, ಇನ್ನು ಕೆಲವರನ್ನು ಬೆವಾರ್​ನ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

ಘಟನಾ ಸ್ಥಳಕ್ಕೆ ಅಜ್ಮೇರ್​ನ ಪೊಲೀಸ್​ ವರಿಷ್ಠಾಧಿಕಾರಿ ಕುನ್ವಾರ್​ ರಾಷ್ಟ್ರದೀಪ್​ ಹಾಗೂ ಇತರೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಾಗಿದ್ದು, ಅಜ್ಮೇರ್​ ಪೊಲೀಸರು ತನಿಖೆ ಆರಂಭಿಸಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Gold Price: ಸಂಬಳದಲ್ಲಿ ಹಣ ಉಳಿದಿದ್ಯಾ? ಇಲ್ಲಿದೆ ನೋಡಿ ಇಂದಿನ ಚಿನ್ನದ ಬೆಲೆ
Bengaluru: ಕ್ಯಾಬ್ ಚಾಲಕನ ಮೇಲೆ ಯುವತಿ ರೇಪ್ ಆರೋಪ, ತನಿಖೆ ವೇಳೆ ಬಿಗ್ ಟ್ವಿಸ್ಟ್!