ಪಾಕ್ ಗಡಿಯೊಳಗೆ ನುಗ್ಗಿ ಹೊಡೆದ ಭಾರತೀಯ ಸೇನೆಯ ಕಾರ್ಯಾಚರಣೆಯ ಪ್ಲಾನ್ ಹೇಗಿತ್ತು?

Published : Sep 29, 2016, 09:45 AM ISTUpdated : Apr 11, 2018, 12:51 PM IST
ಪಾಕ್ ಗಡಿಯೊಳಗೆ ನುಗ್ಗಿ ಹೊಡೆದ ಭಾರತೀಯ ಸೇನೆಯ ಕಾರ್ಯಾಚರಣೆಯ ಪ್ಲಾನ್ ಹೇಗಿತ್ತು?

ಸಾರಾಂಶ

ಬೆಂಗಳೂರು(ಸೆ. 29): ಉರಿ ಸೇನಾ ನೆಲೆಯ ಮೇಲೆ ಪಾಕ್ ಪ್ರಚೋದಿತ ಉಗ್ರರು ದಾಳಿ ನಡೆಸಿ 19 ಯೋಧರನ್ನು ಹತ್ಯೆಗೈದ ಘಟನೆಗೆ ಭಾರತ ಪ್ರತೀಕಾರ ತೀರಿಸಿಕೊಂಡಿದೆ. ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಅನೇಕ ಉಗ್ರರ ಕ್ಯಾಂಪ್'ಗಳನ್ನು ಭಾರತೀಯ ಯೋಧರು ಧ್ವಂಸ ಮಾಡಿದ್ದಾರೆ. ಸುಮಾರು 35 ಉಗ್ರರನ್ನು ಹತ್ಯೆಗೈದಿದ್ದಾರೆ. ಬಹಳ ಕರಾರುವಾಕ್ಕಾಗಿದ್ದ ಭಾರತೀಯ ಸೇನೆಯ ಕಾರ್ಯಾಚರಣೆ ಹೇಗಿತ್ತು..? ವಿವರ ಇಲ್ಲಿದೆ.

ಕಾರ್ಯಾಚರಣೆ ಹೇಗಿತ್ತು?
* ಗಡಿ ದಾಟಿ ಉಗ್ರರನ್ನು ಹೊಡೆಯಲೆಂದೇ ವಿಶೇಷ ತಂಡ ರಚನೆಯಾಯ್ತು
ಪಿಓಕೆಯಿಂದ ಉಗ್ರರನ್ನು ಒಳನುಸುಳುವ ಪ್ರದೇಶಗಳ ಖಚಿತ ಮಾಹಿತಿ ಸಂಗ್ರಹಿಸಲಾಯ್ತು
ಒಟ್ಟು 8 ಕ್ಯಾಂಪ್'​ಗಳ ಸಂಪೂರ್ಣ ಡೀಟೇಲ್ಸ್, ಮ್ಯಾಪ್ ಮಿಲಿಟರಿ ಬಳಿ ಇತ್ತು
ಮಧ್ಯರಾತ್ರಿ 12.30ರಿಂದ ಬೆಳಗ್ಗೆ 4.30ರ ಮಧ್ಯೆ ಸೈನಿಕರು ಗಡಿ ದಾಟಿ ನುಗ್ಗಿದರು
ಪಾಕ್ ಆಕ್ರಮಿತ ಕಾಶ್ಮೀರದ 2 ಕಿ.ಮೀ. ಪ್ರದೇಶದ, 500 ಮೀ. ವ್ಯಾಪ್ತಿಯಲ್ಲಿ ಉಗ್ರರನ್ನು ಟಾರ್ಗೆಟ್ ಮಾಡಿದರು

ಹೈಅಲರ್ಟ್:
ಗಡಿಭಾಗದ ರಾಜ್ಯಗಳಿಗೆ ಕೇಂದ್ರ ಸರ್ಕಾರದ ಎಚ್ಚರಿಕೆ ಸಂದೇಶ
ಮುನ್ನೆಚ್ಚರಿಕೆ ಕ್ರಮವಾಗಿ ಗಡಿಭಾಗದ ಗ್ರಾಮಸ್ಥರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಕ್ಕೆ ಕೇಂದ್ರ ಸೂಚನೆ
ರಕ್ಷಣಾ ಸಚಿವಾಲಯದಿಂದ ಗಡಿ ರಾಜ್ಯಗಳಲ್ಲಿ ರೆಡ್ ಅಲರ್ಟ್ ಘೋಷಣೆ
ಜಮ್ಮು ಕಾಶ್ಮೀರ, ಪಂಜಾಬ್, ಗುಜರಾತ್​ಗಳಲ್ಲಿ ರೆಡ್ ಅಲರ್ಟ್
ಪಂಜಾಬ್​'ನಲ್ಲಿ ಪಾಕ್ ಗಡಿಯಿಂದ 10 ಕಿ.ಮೀ. ದೂರದವರೆಗಿನ ಸ್ಥಳಗಳಿಂದ ಜನರ ಸ್ಥಳಾಂತರ
ಗಡಿ ಪ್ರದೇಶಗಳಿಗೆ ಹೆಚ್ಚುವರಿ ಭದ್ರತಾ ಪಡೆ ರವಾನೆ
ಸಂಜೆ 4 ಗಂಟೆಗೆ ನವದೆಹಲಿಯಲ್ಲಿ ಸರ್ವಪಕ್ಷ ಸಭೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ನಾಳೆಯಿಂದ ಸಾಲು ಸಾಲು ರಜೆ, ಊರುಗಳತ್ತ ಹರಿದ ಜನಸಾಗರ, ಮೆಜೆಸ್ಟಿಕ್ ಸುತ್ತಮುತ್ತ ಟ್ರಾಫಿಕ್ ಜಾಮ್, ಸವಾರರು ಹೈರಾಣು!
ಮೃತ್ಯುಪಾಶವಾದ ಚಾರ್ಮಾಡಿ ಘಾಟ್: ಒಂದೇ ದಿನ ಮೂರು ಲಾರಿಗಳು ಪಲ್ಟಿ, ಹೆದ್ದಾರಿಯಲ್ಲಿ ನೂರಾರು ವಾಹನಗಳು ಲಾಕ್!