ರಜೆ ದಿನ ಮಲ್ಯ ಭೇಟಿ ಮಾಡಿ ಸಾಲ ನೀಡಿದ್ದ ಐಡಿಬಿಐ ಸಿಎಂಡಿ..!

Published : Jan 29, 2017, 11:46 AM ISTUpdated : Apr 11, 2018, 12:35 PM IST
ರಜೆ ದಿನ ಮಲ್ಯ ಭೇಟಿ ಮಾಡಿ ಸಾಲ ನೀಡಿದ್ದ ಐಡಿಬಿಐ ಸಿಎಂಡಿ..!

ಸಾರಾಂಶ

ಮಲ್ಯ ಹಾಗೂ ಕಿಂಗ್‌'ಫಿಷರ್ ಏರ್‌ಲೈನ್ಸ್‌ಗೆ ಸಾಲ ಮರುಪಾವತಿ ಉದ್ದೇಶವೇ ಇರಲಿಲ್ಲ ಎಂದು ವರದಿ ತಿಳಿಸಿದೆ.

ನವದೆಹಲಿ(ಜ.29): ‘ಮದ್ಯದ ದೊರೆ’ ವಿಜಯ್ ಮಲ್ಯ ಸಾಲದ ಸುಳಿಗೆ ಸಿಲುಕಿದ್ದರೂ ಅವರ ಒಡೆತನದ ಕಿಂಗ್‌ಫಿಷರ್ ಏರ್‌'ಲೈನ್ಸ್‌ಗೆ ಐಡಿಬಿಐ ಬ್ಯಾಂಕ್ ಆತುರಾತುರವಾಗಿ ಸಾಲ ಮಂಜೂರು ಮಾಡಿತ್ತು. ಇದರ ಹಿಂದೆ ಕ್ರಿಮಿನಲ್ ಸಂಚು ಇದೆ ಎಂಬ ಅಂಶವನ್ನು ಜಾರಿ ನಿರ್ದೇಶನಾಲಯ (ಇ.ಡಿ.) ಪತ್ತೆ ಹಚ್ಚಿದೆ.

ಐಡಿಬಿಐ ಬ್ಯಾಂಕ್ ಕಿಂಗ್‌ಫಿಷರ್ ಸಂಸ್ಥೆಗೆ 860.92 ಕೋಟಿ ರೂ. ಸಾಲ ನೀಡಿತ್ತು. ಆ ಪೈಕಿ ಮೊದಲ ಎರಡು ಕಂತುಗಳಲ್ಲಿ 350 ಕೋಟಿ ರೂ. ಮಂಜೂರಾಗಿತ್ತು. ಆ ಸಾಲ ನೀಡುವುದಕ್ಕೂ ಮುನ್ನ ಐಡಿಬಿಐ ಬ್ಯಾಂಕಿನ ಸಿಎಂಡಿ ಯೋಗೇಶ್ ಅಗರ್‌'ವಾಲ್ ಅವರು ಮಲ್ಯ ಅವರನ್ನು ಬ್ಯಾಂಕಿಗೆ ರಜೆ ಇದ್ದರೂ ಭೇಟಿ ಮಾಡಿದ್ದರು ಎಂಬ ಅಂಶ ಜಾರಿ ನಿರ್ದೇಶನಾಲಯದ ತನಿಖಾ ವರದಿಯಲ್ಲಿದೆ. ಇದರ ಪ್ರತಿ ತನಗೆ ಲಭಿಸಿದೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಬ್ಯಾಂಕಿನಿಂದ ಸಾಲ ಪಡೆಯಲು ಮಲ್ಯ ಅವರು ಕೆಲವೊಂದು ಖಾತ್ರಿಗಳನ್ನು ನೀಡಿದ್ದರು. ಆದರೆ, ಅದರ ಮೌಲ್ಯವನ್ನು ಬ್ಯಾಂಕು ಪರಿಶೀಲಿಸಿರಲೇ ಇಲ್ಲ. ಮುನ್ನೆಚ್ಚರಿಕೆ ವಹಿಸುವಲ್ಲಿ ಬ್ಯಾಂಕು ವಿಫಲವಾಗಿತ್ತು. ಮಲ್ಯ ಹಾಗೂ ಕಿಂಗ್‌'ಫಿಷರ್ ಏರ್‌ಲೈನ್ಸ್‌ಗೆ ಸಾಲ ಮರುಪಾವತಿ ಉದ್ದೇಶವೇ ಇರಲಿಲ್ಲ ಎಂದು ವರದಿ ತಿಳಿಸಿದೆ. ಇತ್ತೀಚೆಗಷ್ಟೇ ಅಗರ್‌'ವಾಲ್ ಹಾಗೂ ಇತರ ಎಂಟು ಮಂದಿಯನ್ನು ಸಿಬಿಐ ಬಂಧಿಸಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

25 ಜನರ ಬಲಿ ಪಡೆದ ಗೋವಾ ಕ್ಲಬ್ ಬೆಂಕಿ ದುರಂತ ಸಂಭವಿಸಿದ ಕೆಲ ಗಂಟೆಗಳಲ್ಲೇ ಥೈಲ್ಯಾಂಡ್‌ಗೆ ಹಾರಿದ ಕ್ಲಬ್ ಮಾಲೀಕ
ಅಣ್ಣಾ, ಇನ್ನು ಎಷ್ಟೊತ್ತು ಎಂದ ಗ್ರಾಹಕನಿಗೆ ಇದು ಪ್ಲೇನ್ ಅಲ್ಲ ಅಂದ ಬೆಂಗ್ಳೂರು ಕ್ಯಾಬ್ ಡ್ರೈವರ್!