ರಾಜೀವ್ ಹತ್ಯೆಯನ್ನು 5 ವರ್ಷ ಮೊದಲೇ ಊಹಿಸಿದ್ದ ಅಮೆರಿಕ..!

Published : Jan 29, 2017, 11:24 AM ISTUpdated : Apr 11, 2018, 12:42 PM IST
ರಾಜೀವ್ ಹತ್ಯೆಯನ್ನು 5 ವರ್ಷ ಮೊದಲೇ ಊಹಿಸಿದ್ದ ಅಮೆರಿಕ..!

ಸಾರಾಂಶ

‘ರಾಜೀವ್ ನಂತರ ಭಾರತ...’ ಎಂಬ ಈ ವರದಿ 1986ರ ಮಾರ್ಚ್‌ನಲ್ಲಿ ತಯಾರಾಗಿತ್ತು ಎಂಬ ಅಂಶ ಸಿಐಎ ಬಿಡುಗಡೆ ಮಾಡಿರುವ ರಹಸ್ಯ ದಾಖಲೆಗಳಲ್ಲಿ ಇದೆ.

ನವದೆಹಲಿ(ಜ.29): ಜಾಗತಿಕ ನಾಯಕರ ನೀತಿ, ನಿಲುವು, ನಿರ್ಧಾರಗಳ ಬಗ್ಗೆ ಅಮೆರಿಕ ರಹಸ್ಯವಾಗಿ ಮಾಹಿತಿ ಸಂಗ್ರಹಿಸುವುದು ಹೊಸತೇನಲ್ಲ. ಆದರೆ ಮಾಜಿ ಪ್ರಧಾನಿ ರಾಜೀವ್ ಗಾಂಧಿ ವಿಚಾರದಲ್ಲಿ ಅಮೆರಿಕದ ಗುಪ್ತಚರ ಸಂಸ್ಥೆ ಸಿಐಎ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿತ್ತು. ರಾಜೀವ್ ಗಾಂಧಿ ಹತ್ಯೆಯಾಗಿಬಿಟ್ಟರೆ ಅಥವಾ ರಾಷ್ಟ್ರ ರಾಜಕಾರಣದಿಂದ ‘ದಿಢೀರನೆ ನಿರ್ಗಮಿಸಿ ಬಿಟ್ಟರೆ’ ಏನಾಗಬಹುದು ಎಂಬ ಕುರಿತು ಅವರು ಹತ್ಯೆಯಾಗುವ ಐದು ವರ್ಷ ಮೊದಲೇ ವರದಿಯೊಂದನ್ನು ಸಿದ್ಧಪಡಿಸಿಟ್ಟುಕೊಂಡಿತ್ತು ಎಂಬ ಕುತೂಹಲಕರ ಮಾಹಿತಿ ಬೆಳಕಿಗೆ ಬಂದಿದೆ.

‘ರಾಜೀವ್ ನಂತರ ಭಾರತ...’ ಎಂಬ ಈ ವರದಿ 1986ರ ಮಾರ್ಚ್‌ನಲ್ಲಿ ತಯಾರಾಗಿತ್ತು ಎಂಬ ಅಂಶ ಸಿಐಎ ಬಿಡುಗಡೆ ಮಾಡಿರುವ ರಹಸ್ಯ ದಾಖಲೆಗಳಲ್ಲಿ ಇದೆ. ಹಲವಾರು ಅಂಶಗಳನ್ನು ಈ ದಾಖಲೆಯಿಂದ ಅಳಿಸಲಾಗಿದೆ.

1989ರಲ್ಲಿ ರಾಜೀವ್ ಅಧಿಕಾರಾವಧಿ ಮುಗಿಯಲಿದೆ. ಆದರೆ ಅವರ ಅವಧಿ ಮುಗಿಯುವ ಹೊತ್ತಿಗೆ ರಾಜೀವ್‌ಗೆ ಹತ್ಯೆ ಬೆದರಿಕೆಯೂ ಇದೆ. ಒಂದು ವೇಳೆ ರಾಜೀವ್ ಅವರು ಸಿಖ್ ಅಥವಾ ಕಾಶ್ಮೀರಿ ಮುಸ್ಲಿಮರಿಂದ ಹತ್ಯೆಗೆ ಒಳಗಾದರೆ ಭಾರಿ ಪ್ರಮಾಣದ ಕೋಮು ದಳ್ಳುರಿ ಸೃಷ್ಟಿಯಾಗಲಿದೆ. ರಾಷ್ಟ್ರಪತಿಗಳು ಸೇನೆ ಹಾಗೂ ಅರೆಸೇನಾಪಡೆಗಳನ್ನು ದೇಶಾದ್ಯಂತ ನಿಯೋಜಿಸಿದರೂ ಅದನ್ನು ತಡೆಯಲು ಆಗದು ಎಂಬ ಅಂಶ ವರದಿಯಲ್ಲಿದೆ.

ಜತೆಗೆ ರಾಜೀವ್ ಅವರು ನಿರ್ಗಮನದ ಬಳಿಕ ಪಿ.ವಿ. ನರಸಿಂಹರಾವ್ ಹಾಗೂ ವಿ.ಪಿ. ಸಿಂಗ್‌'ರಂತಹ ನಾಯಕರು ಉತ್ತರಾಧಿಕಾರಿಯಾಗುವ ಸಾಧ್ಯತೆ ಇದೆ ಎಂದೂ ಹೇಳಿದೆ.

ವಿಶೇಷ ಎಂದರೆ ಈ ವರದಿ ತಯಾರಾದ ಐದು ವರ್ಷಗಳ ಬಳಿಕ ಅಂದರೆ 1991ರಲ್ಲಿ ರಾಜೀವ್ ಅವರು ತಮಿಳುನಾಡಿನಲ್ಲಿ ಎಲ್‌'ಟಿಟಿಇ ಉಗ್ರರಿಂದ ಹತ್ಯೆಗೆ ಒಳಗಾಗಿದ್ದರು. ಇದಾದ ಬಳಿಕ ನರಸಿಂಹರಾವ್ ಅವರು ಪ್ರಧಾನಿಯಾಗಿ ಆಯ್ಕೆಯಾಗಿದ್ದರು.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಜಪಾನ್‌ನಲ್ಲಿ 7.5 ತೀವ್ರತೆಯ ಭೂಕಂಪ: ಧರಣಿ ಗರ ಗರನೇ ತಿರುಗಿದ ಕ್ಷಣದ ವೀಡಿಯೋಗಳು ವೈರಲ್
ಅನಿಲ್ ಅಂಬಾನಿ ಕುಟುಂಬಕ್ಕೆ ಮತ್ತೊಂದು ಶಾಕ್, ಪುತ್ರನ ವಿರುದ್ದ 228 ಕೋಟಿ ರೂ ವಂಚನೆ ಕೇಸ್