ಮತಕ್ಕಾಗಿ ಲಂಚ: ಕೇಜ್ರಿವಾಲ್ ವಿರುದ್ಧ ದೂರು ದಾಖಲಿಸಲು ಚುನಾವಣಾ ಆಯೋಗ ಸೂಚನೆ

By Suvarna Web DeskFirst Published Jan 29, 2017, 11:38 AM IST
Highlights

ಇನ್ಮುಂದೆ ಅಂತಹ ಹೇಳಿಕೆಗಳನ್ನು ನೀಡಿದ್ದಲ್ಲಿ ಪಕ್ಷದ ಮಾನ್ಯತೆಯನ್ನು ರದ್ದುಗೊಳಿಸುವುದಾಗಿ ಚುನಾವಣಾ ಆಯೋಗ ಎಚ್ಚರಿಸಿದೆ.

ನವದೆಹಲಿ (ಜ.29): ಆಮ್ ಆದ್ಮಿ ಪಕ್ಷದ ಮುಖಂಡ ಅರವಿಂದ್ ಕೇಜ್ರಿವಾಲ್ ವಿರುದ್ಧ ಪ್ರಕರಣ ದಾಖಲಿಸುವಂತೆ ಚುನಾವಣಾ ಅಯೋಗ ಸೂಚನೆ ನೀಡಿದೆ.

ಗೋವಾದಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡುವಾಗ, ರಾಜಕೀಯ ಪಕ್ಷಗಳು ಕೊಡುವ ಲಂಚವನ್ನು ಸ್ವೀಕರಿಸಿ, ಆದರೆ ಮತ ಮ್ ಆದ್ಮಿ ಪಕ್ಷಕ್ಕೆ ನೀಡಿ ಎಂದು ಕೇಜ್ರಿವಾಲ್ ಹೇಳಿದ್ದರು.

Latest Videos

ರಾಜಕೀಯ ಪಕ್ಷಗಳು 5 ಸಾವಿರ ರೂ. ನೀಡಿದರೆ, ನೀವು 10 ಸಾವಿರ ರೂ.ಗಳನ್ನು ಕೇಳಿ. ಹೊಸ ನೋಟುಗಳನ್ನೇ ಕೇಳಿ ಪಡೆಯಿರಿ ಎಂದು  ಕೇಜ್ರಿವಾಲ್ ಕಳೆದ. ಜ.8ರಂದು ಮತದಾರರಿಗೆ ಹೇಳಿದ್ದರು.

ಕೇಜ್ರಿವಾಲ್ ‘ಲಂಚ’ ಹೇಳಿಕೆಯನ್ನು ಗಮಭೀರವಾಗಿ ಪರಿಗಣಿಸಿದ್ದ ಚುನಾವಣಾ ಆಯೋಗ ಅವರಿಗೆ ಎಚ್ಚರಿಕೆ ನೀಡಿತ್ತು. ಇನ್ಮುಂದೆ ಅಂತಹ ಹೇಳಿಕೆಗಳನ್ನು ನೀಡಿದ್ದಲ್ಲಿ ಪಕ್ಷದ ಮಾನ್ಯತೆಯನ್ನು ರದ್ದುಗೊಳಿಸುವುದಾಗಿ ಚುನಾವಣಾ ಆಯೋಗ ಎಚ್ಚರಿಸಿದೆ.

ಆದರೆ, ನಮ್ಮಿಂದ ಹಣ ಪಡೆದು ನಮಗೆ ಮತ ಹಾಕುವಂತೆ ಹೇಳಿಲ್ಲ, ಚುನಾವಣೆಯಲ್ಲಿ ನಡೆಯುವ ಭ್ರಷ್ಟಾಚಾರವನ್ನು ತಡೆಯುವ ಉದ್ದೇಶದಿಂದ ಹೇಳಿರುವುದಾಗಿ  ಕೇಜ್ರಿವಾಲ್ ಚುನಾವಣಾ ಆಯೋಗಕ್ಕೆ ಸ್ಪಷ್ಟೀಕರಣ ನೀಡಿದ್ದರು.

click me!