
ಲಕ್ನೋ[ಏ.13]: ಕೆಲವೊಮ್ಮೆ ಮೂಕ ಪ್ರಾಣಿಗಳು ಮಾಡುವ ಕೆಲಸ ಮಾನುಷ್ಯರನ್ನು ಜೀವನ ಪರ್ಯಂತ ಅವುಗಳಿಗೆರ ಋಣಿಯಾಗುವಂತೆ ಮಾಡುತ್ತದೆ. ುತ್ತರ ಪ್ರದೇಶದ ಬಾಂದಾ ಜಿಲ್ಲೆಯಲ್ಲಿ ನಡೆದ ಭೀಕರ ಅಗ್ನಿ ಅವಘಡ ಸಂಭವಿಸಿದ್ದು, ಈ ಸಂದರ್ಭದಲ್ಲಿ ಸಾಕು ನಾಯಿಯೊಂದು ಎಲ್ಲರನ್ನೂ ಅಲರ್ಟ್ ಮಾಡಿದೆ. ಇದರಿಂದ ಜನರೂ ಸೂಕ್ತ ಸಮಯಕ್ಕೆ ಎಚ್ಚೆತ್ತು ಅಲ್ಲಿಂದ ದೂರ, ಸುರಕ್ಷಿತ ಸ್ಥಳಕ್ಕೆ ತೆರಳಿ ತಮ್ಮ ಪ್ರಾಣ ಕಾಪಾಡಿಕೊಳ್ಳುವಲ್ಲಿ ಸಫಲರಾಗಿದ್ದಾರೆ. ದುರಾದೃಷ್ಟವಶಾತ್ 35ಕ್ಕೂ ಹೆಚ್ಚು ಮಂದಿಯ ಪ್ರಾಣ ಕಾಪಾಡಿದ ಆ ಮೂಕ ನಾಯಿ ಬೆಂಕಿಯಲ್ಲಿ ಸುಟ್ಟು ಕರಕಲಾಗಿದೆ.
ರೈಲು ಅಪಘಾತದಲ್ಲಿ ಮಾಲೀಕ ನಿಧನ: ಶವ ಬಿಟ್ಟು ಕದಲದ ನಾಯಿ!: ವಿಡಿಯೋ ವೈರಲ್
ಬಾಂದಾ ಜಿಲ್ಲೆಯ ಲಖನ್ ಕಾಲೋನಿಯ ಬಹುಮಹಡಿ ಕಟ್ಟಡದಲ್ಲಿದ್ದ ಫರ್ನೀಚರ್ ಶೋ ರೂಂನಲ್ಲಿ ಗುರುವಾರ ತಡರಾತ್ರಿ ಬೆಂಕಿ ತಗುಲಿತ್ತು. ಈ ವೇಳೆ ಎಚ್ಚೆತ್ತ ಶೋ ರೂಂ ಮಾಲಿಕನ ನಾಯಿ ಜೋರಾಗಿ ಬೊಗಳಿ ಎಲ್ಲರನ್ನೂ ಎಬ್ಬಿಸಿದೆ. ಬೆಂಕಿ ಕಂಡ ಜನರು ಆ ಕೂಡಲೇ ಅಲ್ಲಿಂದ ಸುರಕ್ಷಿತ ಸ್ಥಳಕ್ಕೆ ತೆರಳಿದ್ದಾರೆ. ಆದರೆ ಕಟ್ಟಡದಲ್ಲಿದ್ದ ಸಿಲಿಂಡರ್ ಸ್ಫೋಟಗೊಂಡ ಕಾರಣ ನಾಯಿ ಈ ದುರಂತದಲ್ಲಿ ಸಾವನ್ನೊಪ್ಪಿದೆ. ಸ್ಟೋಟದಿಂದಾಗಿ ಆಸುಪಾಸಿನ ನಾಲ್ಕು ಕಟ್ಟಡಗಳು ಧ್ವಂಸಗೊಂಡಿವೆ.
ಘಟನಾ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ದುರಂತಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಓರ್ವ ಸಿಬ್ಬಂದಿ 'ಮೊದಲ ಅಂತಸ್ತಿನಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಈ ಬೆಂಕಿ ಅವಘಡ ಸಂಭವಿಸಿದೆ. ಆದರೆ ಆ ಪ್ರದೇಶದಲ್ಲಿ ಅಕ್ರಮವಾಗಿ ದಾಸ್ತಾನಿರಿಸಿದ್ದ ಮರದ ತುಂಡುಗಳಿಂದ ಬೆಂಕಿ ವೇಗವಾಗಿ ಹಬ್ಬಿಕೊಂಡಿದೆ' ಎಂದಿದ್ದಾರೆ. ಬೆಂಕಿಯ ತೀವ್ರತೆಗೆ ಆಸುಪಾಸಿನ ಕಟ್ಟಡಗಳೂ ಹಾನಿಯಾಗಿದೆ. ಒಟ್ಟಾರೆಯಾಗಿ ಸುಮಾರು 5 ಲಕ್ಷ ಮೌಲ್ಯದ ಸಾಮಾನು ಸುಟ್ಟು ಭಸ್ಮವಾಗಿದೆ ಎಂದು ಅಂದಾಜಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.