ವಾರಕೊಮ್ಮೆ ಆಸ್ಪತ್ರೆಗೆ ಭೇಟಿ ನೀಡುತ್ತಾನೆ ಯಮ ವೈದ್ಯ: ಈ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಉಚಿತ ಸಾವು ಖಚಿತ

Published : Sep 28, 2017, 10:27 AM ISTUpdated : Apr 11, 2018, 12:54 PM IST
ವಾರಕೊಮ್ಮೆ ಆಸ್ಪತ್ರೆಗೆ ಭೇಟಿ ನೀಡುತ್ತಾನೆ ಯಮ ವೈದ್ಯ: ಈ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಉಚಿತ ಸಾವು ಖಚಿತ

ಸಾರಾಂಶ

ಈ ಆಸ್ಪತ್ರೆಯಲ್ಲಿ ಡಾಕ್ಟರ್​​ ಇಲ್ಲ, ನರ್ಸ್​ಗಳೂ ಇದ್ದರೂ ಚಿಕಿತ್ಸೆ ನೀಡಲ್ಲ. ಚಿಕಿತ್ಸೆಗೆಂದು ಬಡಪಾಯಿಗಳು ಈ ಆಸ್ಪತ್ರೆಗೆ ಬಂದ್ರೆ ಚಿಕಿತ್ಸೆ ನೀಡಲು ಯಾರು ಇಲ್ಲ. ರೋಗ ನಿವಾರಣೆಗೆ ಜನ  ಈ ಸರಕಾರಿ ಆಸ್ಪತ್ರೆಗೆ ಬಂದರೆ ಶಿವನ ಪಾದ ಸೇರೋದು ಗ್ಯಾರಂಟಿ. ಹಾಗಿದ್ದರೆ  ಅದ್ಯಾವ ಆಸ್ಪತ್ರೆ ಅಂತೀರಾ? ಇಲ್ಲಿದೆ ನೋಡಿ ವಿವರ.

ಬೀದರ್(ಸೆ.28): ಇದು ಬೀದರ್ ಜಿಲ್ಲೆ ಔರಾದ್ ತಾಲೂಕಿನ ತೋರಣ ಗ್ರಾಮದ ಸರ್ಕಾರಿ ಆಸ್ಪತ್ರೆ. ಹೆಸರಿಗೆ ಆಸ್ಪತ್ರೆ ರೋಗಿಗಳ ಪಾಲಿಗೆ ನರಕ ಕೂಪ. ಯಾಕಂದ್ರೆ ಆಸ್ಪತ್ರೆಯಲ್ಲಿ ವೈದ್ಯರೇ ಇಲ್ಲ. ಇಲ್ಲಿ ನರ್ಸಗಳೇ ಎಲ್ಲ. 12 ಸಾವಿರ ಜನಸಂಖ್ಯೆ ಹೊಂದಿರುವ ತೋರಣಾದಲ್ಲಿ ಇರೋದು ಇದೊಂದೇ ಆಸ್ಪತ್ರೆ. ಆಸ್ಪತ್ರೆಯಲ್ಲಿ 10 ಬೆಡ್​ಗಳೂ ಇವೆ. ಆದರೆ, ಇರುವ ಒಬ್ಬ ವೈದ್ಯ ವಾರಕ್ಕೊಮ್ಮೆಯೂ ಬರಲ್ಲ. ಇದರಿಂದ ರೊಚ್ಚಿಗೆದ್ದ ಸಾರ್ವಜನಿಕರು ಆಸ್ಪತ್ರೆಗೆ ಬೀಗ ಜಡಿದು ಆಕ್ರೋಶ ವ್ಯಕ್ತಪಡಿಸಿದ್ದರು.

ಪ್ರತಿ ತಿಂಗಳು ಹತ್ತರಿಂದ ಹದಿನೈದು ಗಭಿರ್ಣಿಯರು ಈ ಆಸ್ಪತ್ರೆಗೆ ಬರ್ತಾರೆ. ಡಾಕ್ಟರ್ ಸಿಗದೇ ನರ್ಸ್​ಗಳೇ ಇಲ್ಲಿ ಡಾಕ್ಟರ್ ರೀತಿ ಚಿಕಿತ್ಸೆ ನೀಡ್ತಾರೆ. ಒಂದ್ ವೇಳೆ ಹೆಚ್ಚು ಕಡಿಮೆಯಾದ್ರೆ ಯಾರು ಹೊಣೆ ಅನ್ನೋದು ಸಾರ್ವಜನಿಕರ ಪ್ರಶ್ನೆ.

ಇನ್ನೂ ಇಲ್ಲಿ ಆಸ್ಪತ್ರೆಗಾಗಿ ಹೊಸ ಕಟ್ಟಡ ಕಟ್ಟಲಾಗಿದೆ. ಅದೂ ಕಾಮಗಾರಿ ಮುಗಿಯದೇ ಅರ್ಧಕ್ಕೇ ನಿಂತಿದೆ. ಒಟ್ಟಿನಲ್ಲಿ ಇಲ್ಲಿ ಆಸ್ಪತ್ರೆ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂಥಾಗಿದೆ. ಆರೋಗ್ಯ ಸಚಿವರೇ ಈ ಆಸ್ಪತ್ರೆ ಇನ್ನಾದ್ರೂ ಟ್ರೀಟ್​ಮೆಂಟ್ ಕೊಡಿಸಿ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬೆಂಗಳೂರಿಗೆ ಬಿಗ್‌ ಗಿಫ್ಟ್: ಈ ರಸ್ತೆಲಿ 10.3 ಕಿ.ಮೀ ಉದ್ದದ ಬೃಹತ್ ಸೈಕ್ಲಿಂಗ್ ಕಾರಿಡಾರ್ ಜೂ.27ಕ್ಕೆ ಲೋಕಾರ್ಪಣೆ?
ಅಮ್ಮನ ಚೆನ್ನಾಗಿ ನೋಡಿಕೋ, ಚೆನ್ನಾಗಿ ಓದು, ಸ್ಟೀಲ್ ಪ್ಲಾಂಟ್ ದುರಂತ ಗಾಯಾಳುವಿನ ಕೊನೆಯ ಮಾತು