
ಬೆಂಗಳೂರು(ಸೆ.28): ಹುಟ್ಟುಹಬ್ಬದ ಆಚರಣೆ ವೇಳೆ ಬಾಲಕರಿಬ್ಬರು ತಂಪು ಪಾನೀಯವೆಂದು ಆಸಿಡ್ ಸೇವಿಸಿ, ಮೃತಪಟ್ಟಿರುವ ಘಟನೆ ಬೆಂಗಳೂರಿನ ಕೆ.ಆರ್ ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಉತ್ತರ ಪ್ರದೇಶ ಮೂಲದ ಆರ್ಯನ್ ಸಿಂಗ್, ಸಾಹಿಲ್ ಮೃತಪಟ್ಟವರು.
ಸಂಜಯ್ ಸಿಂಗ್ ಹಾಗೂ ಅಂಜು ದಂಪತಿ ಪುತ್ರ ಆರ್ಯನ್ ಸಿಂಗ್, ನಿನ್ನೆ ತಡರಾತ್ರಿ ಗೆಳೆಯ ಸಾಹಿಲ್ ನ ಹುಟ್ಟುಹಬ್ಬದ ಆಚರಣೆಗೆ ಬಂದಿದ್ದ. ಹುಟ್ಟು ಹಬ್ಬದ ಕೇಕ್ ತಿಂದು ಆರ್ಯನ್ ತಂಪು ಪಾನೀಯ ಎಂದುಕೊಂಡು ಸ್ನೇಹಿತ ಸಾಹಿಲ್ ಜತೆ ಸೇರಿ ಆಭರಣ ಕರಗಿಸುವ ಆಸಿಡ್ ಕುಡಿದಿದ್ದಾನೆ. ನಂತರ ಮಕ್ಕಳು ಅಸ್ವಸ್ತರಾಗುತ್ತಿದ್ದಂತೆ ಪೋಷಕರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಕ್ಕಳಿಬ್ಬರು ಮೃತಪಟ್ಟಿದ್ದಾರೆ.
ಮಕ್ಕಳ ಪೋಷಕರು ಬಂಗಾರ, ಬೆಳ್ಳಿ ಆಭರಣ ಕೆಲಸ ಮಾಡಿಕೊಂಡಿದ್ದು, ಆಸಿಡ್ನ್ನು ಮನೆಯಲ್ಲಿ ಇಟ್ಟುಕೊಂಡಿದ್ದರು. ಈ ಕುರಿತು ಕೆ.ಆರ್ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.