ಮರ್ಯಾದೆಗೇಡು ಹತ್ಯೆ: ದಲಿತ ಯುವಕನನ್ನು ಪ್ರೀತಿಸಿದ್ದಕ್ಕೆ ಮಗಳನ್ನೇ ಕೊಂದ ತಾಯಿ

Published : Jun 07, 2017, 08:55 AM ISTUpdated : Apr 11, 2018, 12:35 PM IST
ಮರ್ಯಾದೆಗೇಡು ಹತ್ಯೆ: ದಲಿತ ಯುವಕನನ್ನು ಪ್ರೀತಿಸಿದ್ದಕ್ಕೆ ಮಗಳನ್ನೇ ಕೊಂದ ತಾಯಿ

ಸಾರಾಂಶ

ವಿಜಯಪುರದಲ್ಲಿ ಗರ್ಭಿಣಿಯಾಗಿದ್ದ ಪುತ್ರಿಯನ್ನು ಕುಟುಂಬಸ್ಥರು ಮರ್ಯಾ ದೆಗೇಡು ಹತ್ಯೆಗೈದ ಪ್ರಕರಣ ಮಾಸುವ ಮುನ್ನವೇ ತಾಯಿಯೊಬ್ಬಳು ದಲಿತ ಯುವಕನನ್ನು ಪ್ರೀತಿಸುತ್ತಿದ್ದ ತನ್ನ ಅಪ್ರಾಪ್ತ ವಯಸ್ಸಿನ ಮಗಳನ್ನೇ ಕೊಲೆ ಮಾಡಿರುವ ಘಟನೆ ತಾಲೂಕಿನ ಚಿನ್ನಾಪುರ ಗ್ರಾಮದಲ್ಲಿ ಸೋಮವಾರ ತಡರಾತ್ರಿ ನಡೆದಿದೆ.

ವಿಜಯಪುರ(ಜೂ.07): ವಿಜಯಪುರದಲ್ಲಿ ಗರ್ಭಿಣಿಯಾಗಿದ್ದ ಪುತ್ರಿಯನ್ನು ಕುಟುಂಬಸ್ಥರು ಮರ್ಯಾ ದೆಗೇಡು ಹತ್ಯೆಗೈದ ಪ್ರಕರಣ ಮಾಸುವ ಮುನ್ನವೇ ತಾಯಿಯೊಬ್ಬಳು ದಲಿತ ಯುವಕನನ್ನು ಪ್ರೀತಿಸುತ್ತಿದ್ದ ತನ್ನ ಅಪ್ರಾಪ್ತ ವಯಸ್ಸಿನ ಮಗಳನ್ನೇ ಕೊಲೆ ಮಾಡಿರುವ ಘಟನೆ ತಾಲೂಕಿನ ಚಿನ್ನಾಪುರ ಗ್ರಾಮದಲ್ಲಿ ಸೋಮವಾರ ತಡರಾತ್ರಿ ನಡೆದಿದೆ.

ರಾಜೇಶ್ವರಿ(17) ಕೊಲೆಯಾದ ಯುವತಿ. ಆಕೆಯ ತಾಯಿ ವೆಂಕಟಮ್ಮ ರಾಜೇಶ್ವರಿಯ ತಲೆಗೆ ದೊಣ್ಣೆಯಿಂದ ಹೊಡೆದು ಕೊಲೆ ಮಾಡಿದ್ದಾರೆ ಎಂದು ದೂರು ದಾಖಲಾಗಿದ್ದು ಘಟನೆಗೆ ಸಂಬಂಧಿಸಿದಂತೆ ವೆಂಕಟಮ್ಮ, ಆಕೆಯ ಪುತ್ರ ಚಲಪತಿ, ಬುದ್ಧಿಮಾಂದ್ಯ ಪುತ್ರಿ ಚಂದ್ರಿಕಾಳನ್ನು ಪೊಲೀಸರು ಬಂಧಿಸಿದ್ದಾರೆ. ಪರಿಶಿಷ್ಟವರ್ಗಕ್ಕೆ ಸೇರಿದ ರಾಜೇಶ್ವರಿ ಅದೇ ಗ್ರಾಮದ ಪರಿಶಿಷ್ಟಜಾತಿಗೆ ಸೇರಿದ ಮೋಹನ್‌ ಎಂಬಾತನನ್ನು ಪ್ರೀತಿಸು ತ್ತಿದ್ದು ಇದೇ ಕಾರಣಕ್ಕೆ ತಾಯಿ ಮಗಳ ನಡುವೆ ಆಗಾಗ ಜಗಳ ನಡೆದಿತ್ತು ಎನ್ನಲಾಗಿದೆ.

ಘಟನೆ ವಿವರ: ಪಿಯುಸಿ ಫೇಲಾಗಿದ್ದ ರಾಜೇಶ್ವರಿ ವಿದ್ಯಾಭ್ಯಾಸ ನಿಲ್ಲಿಸಿ ಟೈಲರಿಂಗ್‌ ತರಬೇತಿಗಾಗಿ ವಕ್ಕಲೇರಿ ಗ್ರಾಮಕ್ಕೆ ಹೋಗುತ್ತಿದ್ದಳು. ಜೂ.5 ರ ಸೋಮವಾರ ಸಂಜೆ ಆರೂವರೆ ಸಮಯದಲ್ಲಿ ಗ್ರಾಮದ ಮತ್ತೊಬ್ಬ ಗೆಳತಿ ಜೊತೆಗೆ ವಕ್ಕಲೇರಿಗೆ ಟೈಲರಿಂಗೆ ಹೋಗಿದ್ದ ರಾಜೇಶ್ವರಿ ಬಸ್ಸಿಳಿದು ಬರುವಾಗ ಅವಳ ಪ್ರೇಮಿ ಎದುರಾಗಿದ್ದು ಅವನ ಸಂಗಡ ಹೋಗಿದ್ದಾಳೆ. ಈ ವಿಷಯವನ್ನು ರಾಜೇಶ್ವರಿ ಗೆಳತಿ ವೆಂಕಟಮ್ಮನಿಗೆ ತಲುಪಿದ್ದಾಳೆ. ಇದರಿಂದ ಕೆಂಡಾಮಂ ಡಲವಾದ ವೆಂಕಟಮ್ಮ ಮನೆಗೆ ರಾಜೇಶ್ವರಿ ಬರುತ್ತಿದ್ದಂತೆಯೇ ತರಾಟೆಗೆ ತೆಗೆದುಕೊಂಡಳು. ಮಾತಿಗೆ ಮಾತು ಬೆಳೆದಾಗ ನಾನು ಮೋಹನ್‌ನನ್ನೇ ಮದುವೆಯಾಗುವುದಾಗಿ ರಾಜೇಶ್ವರಿ ಹೇಳಿದ್ದಾಳೆ. ಇದರಿಂದ ಕೆರಳಿದ ತಾಯಿ ದೊಣ್ಣೆಯಿಂದ ಮಗಳ ತಲೆಗೆ ಹೊಡೆದಿದ್ದು ರಕ್ತಸ್ರಾವವಾಗಿ ಆಕೆ ಸಾವಿಗೀಡಾಗಿದ್ದಾಳೆ.

ಸಾವನ್ನು ಮುಚ್ಚಿಡುವ ಸಲುವಾಗಿ ತಾಯಿ ವೆಂಕಟಮ್ಮ ಮತ್ತು ಮಗ ಚಲಪತಿ ಇಬ್ಬರೂ ಸೇರಿ ಆ ರಾತ್ರಿಯೇ ಶವದ ಅಂತ್ಯ ಸಂಸ್ಕಾರ ಮಾಡಲು ಮುಂದಾಗಿದ್ದಾರೆ. ಇದನ್ನು ತಿಳಿದ ಗ್ರಾಮಸ್ಥರು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕೋಲಾರ: ಅಪ್ಪ- ಅಮ್ಮನ ವಿಚ್ಚೇಧನಕ್ಕೆ ಮನನೊಂದು 26 ವರ್ಷದ ಪುತ್ರ ಆತ್ಮ*ಹತ್ಯೆ!
ಟೊಯೋಟಾ ಹೈಡ್ರೋಜನ್ ಕಾರು ಮೂಲಕ ಸಂಸತ್‌ಗೆ ಬಂದ ಪ್ರಹ್ಲಾದ್ ಜೋಶಿ, ಇದರ ಲಾಭವೇನು?