ನಟಿ ಆವಂತಿಕಾ ವಿರುದ್ಧ ನಿರ್ಮಾಪಕ ಸುರೇಶ್‌ ದೂರು

By Suvarna Web DeskFirst Published Jun 7, 2017, 8:26 AM IST
Highlights

‘ರಾಜು ಕನ್ನಡ ಮೀಡಿಯಂ' ಚಿತ್ರದ ವಿವಾದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮೆಟ್ಟಿಲೇರಿದೆ. ತಾವು ಅನುಭವಿಸಿರುವ ಸಂ ಕಟ ಬೇರೆ ಯಾವ ನಿರ್ಮಾಪಕರಿಗೂ ಬರ ಬಾರದು. ಸರಿ- ತಪ್ಪುಗಳ ಪರಾಮರ್ಶೆ ನಡೆ ಸಿ, ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಬೇಕೆಂದು ನಿಮಾ ರ್‍ಪಕ ಸುರೇಶ್‌, ವಾಣಿಜ್ಯ ಮಂಡಳಿಗೆ ದೂರು ನೀಡಿದ್ದಾರೆ. ಜೂನ್‌ 15ರಂದು ಸಭೆ ಕರೆದು ವಿವಾದ ಬಗೆಹರಿಸಲು ವಾಣಿಜ್ಯ ಮಂಡಳಿ ನಿರ್ಧರಿಸಿದೆ.

ಬೆಂಗಳೂರು(ಜೂ.07): ಬ‘ರಾಜು ಕನ್ನಡ ಮೀಡಿಯಂ' ಚಿತ್ರದ ವಿವಾದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮೆಟ್ಟಿಲೇರಿದೆ. ತಾವು ಅನುಭವಿಸಿರುವ ಸಂ ಕಟ ಬೇರೆ ಯಾವ ನಿರ್ಮಾಪಕರಿಗೂ ಬರ ಬಾರದು. ಸರಿ- ತಪ್ಪುಗಳ ಪರಾಮರ್ಶೆ ನಡೆ ಸಿ, ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಬೇಕೆಂದು ನಿಮಾ ರ್‍ಪಕ ಸುರೇಶ್‌, ವಾಣಿಜ್ಯ ಮಂಡಳಿಗೆ ದೂರು ನೀಡಿದ್ದಾರೆ. ಜೂನ್‌ 15ರಂದು ಸಭೆ ಕರೆದು ವಿವಾದ ಬಗೆಹರಿಸಲು ವಾಣಿಜ್ಯ ಮಂಡಳಿ ನಿರ್ಧರಿಸಿದೆ.

 

ನಟಿ ಆವಂತಿಕಾಶೆಟ್ಟಿತಮ್ಮ ವಿರುದ್ಧ ಮಾಡಿರುವ ಆರೋಪಗಳನ್ನು ಸಂಪೂರ್ಣ ವಾಗಿ ಅಲ್ಲಗಳೆದಿರುವ ನಿರ್ಮಾಪಕ ಕೆ.ಎ. ಸುರೇಶ್‌, ವಾಣಿಜ್ಯ ಮಂಡಳಿಗೆ 2 ಪುಟಗಳ ದೂರು ನೀಡಿದ್ದಾರೆ. ಚಿತ್ರದ ನಾಯಕಿ ನಟಿ ಆವಂತಿಕಾ ಶೆಟ್ಟಿಒಟ್ಟು 15 ದಿನ ಚಿತ್ರೀಕರ ಣದಲ್ಲಿ ಭಾಗಿಯಾಗಿದ್ದಾರೆ. ಇನ್ನು 25ದಿನಗಳ ಕಾಲ…ಶೀಟ್‌ ಬಾಕಿಯಿದೆ. ಬಂದಿರುವ 15 ದಿನಗಳಲ್ಲೂ ನಿಗದಿತ ಸಮಯಕ್ಕೆ ಸೆಟ್‌ಗೆ ಬಂದಿಲ್ಲ. ಪ್ರತಿ ಸನ್ನಿವೇಶಕ್ಕೂ ಅಸಹಕಾರ ತೋರಿಸುತ್ತಿದ್ದರು. ನಿರ್ದೇಶಕರು ‘ಕಟ್‌' ಹೇಳಿದ ತಕ್ಷಣ ಕ್ಯಾರಾವ್ಯಾನ್‌ಗೆ ಹೋಗಿ ಕೂರುತ್ತಿದ್ದರು. ಮೊದಲ ಹಂತದ ಚಿತ್ರೀಕ ರಣದ ನಂತರ ಡೇಟ್ಸ್‌ ಕೊಡದೆ ಸತಾಯಿ ಸಿದ್ದಾರೆಂದು ಸುರೇಶ್‌ ದೂರಿನಲ್ಲಿ ತಮ್ಮ ಅಳಲು ತೋಡಿಕೊಂಡಿದ್ದಾರೆ.

ಚಿತ್ರೀಕರಣದ ವೇಳೆ ಅವರು ಉಳಿದು ಕೊಂಡಿದ್ದ ಗೋಲ್ಡ್‌ಪಿಂಚ್‌ ಹೋಟೆಲ…ನಲ್ಲಿ ತಮ್ಮ ರೂಂನಲ್ಲಿದ್ದ ವಸ್ತು ಗಳು ಕಳುವಾಗಿವೆ ಎಂದು ಗಲಾಟೆ ಮಾಡಿ, ಚಿತ್ರ ತಂಡದ ಗೌರ ವಕ್ಕೆ ಧಕ್ಕೆ ತಂದಿದ್ದಾರೆ.ಅಲ್ಲದೆ, ಆವಂತಿಕಾಶೆಟ್ಟಿಅವರನ್ನು ಚಿತ್ರದಲ್ಲಿ ಮುಂದುವರಿಸಲು ಸಾಧ್ಯವಿಲ್ಲ. ಅವರಿಂದ ಡಬ್ಬಿಂಗ್‌ ಮಾಡಿ ಸುವುದಿಲ್ಲ ಎಂದು ನಿರ್ಮಾಪಕ ಸುರೇಶ್‌ ವಾಣಿಜ್ಯ ಮಂಡಳಿಗೆ ತಿಳಿಸಿದ್ದಾರೆ.

ಸಾ.ರಾ.ಗೋವಿಂದು ಗರಂ: ದೂರು ಸ್ವೀಕರಿಸಿ, ಪರಿಶೀಲಿಸಿದ ನಂತರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು ದೂರವಾಣಿ ಮೂಲಕ ನಟಿ ಆವಂತಿಕಾಶೆಟ್ಟಿಅವರೊಂದಿಗೆ ಮಾತನಾಡಿದರು. ಚಿತ್ರೀ ಕರಣಕ್ಕೆ ತೊಂದರೆ ಮಾಡಿದ ಕಾರಣಕ್ಕೆ ನಟಿ ಆವಂತಿಕಾಶೆಟ್ಟಿಮೇಲೆ ಸಿಟ್ಟಾದರು. ಆನಂ ತರ ಜೂನ್‌ 15ಕ್ಕೆ ವಾಣಿಜ್ಯ ಮಂಡಳಿ ಸಭೆ ಕರೆಯಲಿದ್ದು, ಅದಕ್ಕೆ ತಾವು ಕಡ್ಡಾಯವಾಗಿ ಹಾಜರಾಗುವಂತೆ ಸೂಚಿಸಿದರು. ಆವಂತಿಕಾ ಡಬ್ಬಿಂಗ್‌ ಕೋರಿ ಕೋರ್ಟ್‌ ಮೆಟ್ಟಿಲೇರಿದ್ದನ್ನು ವಿರೋಧಿಸುತ್ತೇನೆ ಎಂದು ಹೇಳಿದರು.

click me!