ಬೆಂಗಳೂರಿಗರೇ ಹುಷಾರ್..! ಮನೆಗೆರಡು ಸಸಿ ಕಡ್ಡಾಯ; ಇಲ್ಲದಿದ್ದರೆ ಬಿಬಿಎಂಪಿ ದಂಡ

Published : Jun 07, 2017, 08:23 AM ISTUpdated : Apr 11, 2018, 12:41 PM IST
ಬೆಂಗಳೂರಿಗರೇ ಹುಷಾರ್..! ಮನೆಗೆರಡು ಸಸಿ ಕಡ್ಡಾಯ; ಇಲ್ಲದಿದ್ದರೆ ಬಿಬಿಎಂಪಿ ದಂಡ

ಸಾರಾಂಶ

ಮನೆಗಳ ಮುಂದೆ ಸಸಿ ನೆಡುವುದನ್ನು ಬಿಬಿಎಂಪಿ ಕಡ್ಡಾಯ ಮಾಡುತ್ತಿದೆ. ಸಸಿ ನಡೆದವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಬಿಬಿಎಂಪಿ ಆಯಕ್ತ ಮಂಜುನಾಥ್​ ಪ್ರಸಾದ್ ತಿಳಿಸಿದ್ದಾರೆ. ಅಷ್ಟೇ ಅಲ್ಲ, ಮನೆಮುಂದೆ ಸಸಿ ನೆಡಲು ಬಿಬಿಎಂಪಿಯಿಂದ ಉಚಿತ ಸಸಿ ಕೂಡ ಸಿಗುತ್ತದಂತೆ.

ಬೆಂಗಳೂರು(ಜೂನ್ 07): ಇನ್ಮೇಲೆ ಬೆಂಗಳೂರಿನಲ್ಲಿ ಮನೆಗಳನ್ನ ಕಟ್ಟುವ ಮುಂಚೆ ಎರಡು ಸಸಿಗಳಿಗೆ ಸ್ಥಳ ಬಿಟ್ಟು ಮನೆ ಕಟ್ಟಬೇಕಾಗುತ್ತದೆ. ಸಿಲಿಕಾನ್ ಸಿಟಿಯಲ್ಲಿ ಮರಗಳ ಸಂಖ್ಯೆ ಕಡಿಮೆಯಾಗುತ್ತಿರುವ ಬೆನ್ನಲ್ಲೆ ಬಿಬಿಎಂಪಿ ಮಹತ್ವದ ಕಾಯ್ದೆಯೊಂದನ್ನ ಜಾರಿಗೆ ತರುತ್ತಿದೆ. ಮನೆ ಕಟ್ಟುವಾಗ ಕನಿಷ್ಠ 2 ಸಸಿಯನ್ನಾದರೂ ನೆಡಲೇಬೇಕು ಎಂಬ ಕಾನೂನಿದೆ. ಒಂದು ವೇಳೆ ಎರಡು ಸಸಿಗಳ ನೆಡದಿದ್ರೆ, ಬಿಬಿಎಂಪಿ ಅಧಿಕಾರಿಗಳು ದಂಡ ಹಾಕುತ್ತಾರಂತೆ. ಇಂಥದ್ದೊಂದು ಕಾಯ್ದೆ  ಬಿಬಿಎಂಪಿ ಗೃಹ ನಿರ್ಮಾಣ ಕಾಯ್ದೆಯಲ್ಲಿ ಮೊದಲಿಂದಲ್ಲೂ  ಇದೆ. ಯಾರೇ ಮನೆ ಕಟ್ಟಿದ್ರು, ಮಳೆ ನೀರು ಹರಿದು ಹೋಗೋದಕ್ಕೆ ಸೂಕ್ತ ವ್ಯವಸ್ಥೆ ಇರಬೇಕು. ಜೊತೆಗೆ ಎರಡು ಸಸಿಗಳ ನೆಡುವುದು ಕಡ್ಡಾಯವಾಗಿದೆ.. ಆದ್ರೆ ಈ ರೂಲ್ಸ್ ಇತ್ತೀಚೆಗೆ ಯಾರು ಪಾಲಿಸುತ್ತಿಲ್ಲ.. ಹೀಗಾಗಿ ಬಿಬಿಎಂಪಿ  ಹೀಗ ದಂಡ ಹಾಕೋಕ್ಕೆ ಮುಂದಾಗುತ್ತಿದೆಯಂತೆ.

ಈ ಬಗ್ಗೆ ಸುವರ್ಣನ್ಯೂಸ್​ ಜೊತೆ ಮಾತನಾಡಿದ ಬಿಬಿಎಂಪಿ ಆಯಕ್ತ ಮಂಜುನಾಥ್​ ಪ್ರಸಾದ್, ಮನೆಗಳ ಮುಂದೆ ಸಸಿ ನೆಡುವುದನ್ನು ಬಿಬಿಎಂಪಿ ಕಡ್ಡಾಯ ಮಾಡುತ್ತಿದೆ. ಸಸಿ ನಡೆದವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಅಷ್ಟೇ ಅಲ್ಲ, ಮನೆಮುಂದೆ ಸಸಿ ನೆಡಲು ಬಿಬಿಎಂಪಿಯಿಂದ ಉಚಿತ ಸಸಿ ಕೂಡ ಸಿಗುತ್ತದಂತೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮೈಸೂರು ರೇಷ್ಮೆ ಕಾರ್ಖಾನೆ ಉಳಿಸಿ, ಕ್ರೀಡಾಂಗಣ ವಿರೋಧಿಸಿ ಹೋರಾಟ: ಸರ್ಕಾರಕ್ಕೆ ಮಾರ್ಚ್ 6ರ ಗಡುವು ಕೊಟ್ಟ ಆರ್. ಅಶೋಕ್!
ಮೋದಿ ವಾರಸ್ದಾರ ಯಾರು? ಕೇಸರಿ ಕೋಟೆಯ ಉತ್ತರಾಧಿಕಾರಿ ರೇಸ್‌ನಲ್ಲಿ ಯೋಗಿ, ಅಮಿತ್ ಶಾ ನಡುವೆ ನಿಕಟ ಪೈಪೋಟಿ!