ನಾಗರಿಕತ್ವ ವಿವಾದ: ಗೃಹ ಸಚಿವಾಲಯದಿಂದ ರಾಹುಲ್‌ಗೆ ನೊಟೀಸ್!

Published : Apr 30, 2019, 12:40 PM ISTUpdated : Apr 30, 2019, 01:50 PM IST
ನಾಗರಿಕತ್ವ ವಿವಾದ: ಗೃಹ ಸಚಿವಾಲಯದಿಂದ ರಾಹುಲ್‌ಗೆ ನೊಟೀಸ್!

ಸಾರಾಂಶ

ನಾಗರಿಕತ್ವ ವಿವಾದ ಹಿನ್ನೆಲೆ ಗೃಹ ಸಚಿವಾಲಯದಿಂದ ರಾಹುಲ್‌ಗೆ ನೊಟೀಸ್| 15 ದಿನದಲ್ಲಿ ಉತ್ತರಿಸುವಂತೆ ರಾಹುಲ್ ಗಾಂಧಿಗೆ ಸೂಚನೆ| ಬಿಜೆಪಿ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ ಬರೆದಿದ್ದ ಪತ್ರ| ಬ್ಯಾಕೊಪ್ಸ್ ಲಿಮಿಟೆಡ್ ಕಂಪನಿ ಮಾಹಿತಿಯ ಪ್ರಕಾರ ರಾಹುಲ್ ಬ್ರಿಟಿಷ್ ಪ್ರಜೆ|

ನವದೆಹಲಿ(ಏ.30): ಮಹತ್ವದ ಬೆಳವಣಿಗೆಯೊಂದರಲ್ಲಿ ನಾಗರಿಕತ್ವ ವಿವಾದಕ್ಕೆ ಸಂಬಂಧಪಟ್ಟಂತೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗೆ ಕೇಂದ್ರ ಗೃಹ ಸಚಿವಾಲಯ ನೊಟೀಸ್ ಜಾರಿ ಮಾಡಿದೆ.ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ನೀಡಿದ ದೂರನ್ನು ಸ್ವೀಕರಿಸಿರುವ ಗೃಹ ಸಚಿವಾಲಯ, ತಮ್ಮ ನಾಗರಿಕತ್ವಕ್ಕೆ ಸಂಬಂಧಪಟ್ಟಂತೆ ನೀಡಿರುವ ದೂರಿಗೆ 15 ದಿನಗಳೊಳಗೆ ವಿವರಣೆ ನೀಡುವಂತೆ ಸೂಚನೆ ನೀಡಿದೆ.

"

ಗೃಹ ಸಚಿವಾಲಯಕ್ಕೆ ಪತ್ರ ಬರೆದಿರುವ ಸುಬ್ರಹ್ಮಣ್ಯ ಸ್ವಾಮಿ, ಬ್ಯಾಕೊಪ್ಸ್ ಲಿಮಿಟೆಡ್ ಎನ್ನುವ ಕಂಪನಿ 2003ರಲ್ಲಿ ಇಂಗ್ಲೆಂಡ್‌ನಲ್ಲಿ ನೋಂದಣಿಯಾಗಿತ್ತು. 51ನೇ ಸೌತ್ ಗೇಟ್ ಸ್ಟ್ರೀಟ್, ವಿಂಚೆಸ್ಟರ್, ಹ್ಯಾಂಪ್ ಶೈರ್ ಎಸ್ಒ23 9ಇಎಚ್ ಎಂದು ವಿಳಾಸ ಬರೆಯಲಾಗಿದೆ. ಈ ಕಂಪನಿಯ ನಿರ್ದೇಶಕರಲ್ಲಿ ರಾಹುಲ್ ಗಾಂಧಿ ಅವರ ಹೆಸರಿದೆ ಎಂದು ತಿಳಿಸಿದ್ದಾರೆ.

ಬ್ಯಾಕೊಪ್ಸ್ 2005 ಅಕ್ಟೋಬರ್‌ನಿಂದ 2006ರ ಅಕ್ಟೋಬರ್‌ವರೆಗೆ ಸಲ್ಲಿಸಿರುವ ಐಟಿ ಸಲ್ಲಿಕೆಯಲ್ಲಿ ರಾಹುಲ್ ಗಾಂಧಿಯವರ ಹುಟ್ಟಿದ ದಿನಾಂಕ 19/06/1970 ಎಂದು ನಮೂದಾಗಿದೆ. ಅಲ್ಲದೆ ತಾವು ಬ್ರಿಟನ್ ಪ್ರಜೆ ಎಂದು ರಾಹುಲ್ ಗಾಂಧಿ ಘೋಷಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬಿಹಾರದಲ್ಲಿ NDA ಗೆಲುವು ನಿಜ, ಆದ್ರೆ ಸೋತಿದ್ದು ಪ್ರಜಾಪ್ರಭುತ್ವ: ತೇಜಸ್ವಿ ಯಾದವ್
ಚಾಲನೆಯಲ್ಲಿದ್ದಾಗಲೇ ಪ್ರಜ್ಞೆ ಕಳೆದುಕೊಂಡ ಚಾಲಕ: ವಿಮಾನ ಟೇಕಾಫ್‌ದಂತೆ ಮೇಲೇರಿದ ಮರ್ಸಿಡಿಸ್: ವೀಡಿಯೋ