ಬೇಕಾದ್ರೆ ಬಂದ್ನೋಡಿ: ಬಾಲಾಕೋಟ್ ಗೆ ಬರುವಂತೆ ಭಾರತೀಯ ಪತ್ರಕರ್ತರಿಗೆ ಪಾಕ್ ಆಹ್ವಾನ!

By Web DeskFirst Published Apr 30, 2019, 11:48 AM IST
Highlights

ಭಾರತೀಯ ಸೇನೆಯ ಬಾಲಾಕೋಟ್ ವಾಯುದಾಳಿಗೆ ಪಾಕ್ ಪ್ರತಿಕ್ರಿಯೆ| ಭಾರತೀಯ ಪತ್ರಕರ್ತರಿಗೆ ಮುಕ್ತ ಆಹ್ವಾನ ನೀಡಿದ ಪಾಕಿಸ್ತಾನ| ವಾಯುದಾಳಿ ನಡೆದಿಲ್ಲ ಎಂದು ಪುನರುಚ್ಛಿಸಿದ ಪಾಕಿಸ್ತಾನ| ಸತ್ಯದ ದರ್ಶನಕ್ಕಾಗಿ ಬಾಲಾಕೋಟ್ ಗೆ ಬರುವಂತೆ ಭಾರತೀಯ ಪತ್ರಕರ್ತರಿಗೆ ಆಹ್ವಾನ| ಭಾರತೀಯ ಪತ್ರಕರ್ತರಿಗೆ ಮುಕ್ತ ಆಹ್ವಾನ ನೀಡಿದ ಪಾಕ್ ಸೇನಾ ವಕ್ತಾರ| ಕಳೆದೆರಡು ತಿಂಗಳಿನಿಂದ ಭಾರತ ಜಗತ್ತಿಗೆ ಸುಳ್ಳು ಹೇಳುತ್ತಿದೆ ಎಂದ ಮೇಜರ್ ಜನರಲ್ ಆಸಿಫ್ ಗಫೂರ್|

ಇಸ್ಲಾಮಾಬಾದ್(ಏ.30): ಭಾರತೀಯ ವಾಯುಸೇನೆ ನಡೆಸಿದ್ದ ಬಾಲಾಕೋಟ್ ವಾಯುದಾಳಿ ಪ್ರದೇಶಕ್ಕೆ ಭಾರತೀಯ ಪತ್ರಕರ್ತರನ್ನು ಪಾಕಿಸ್ತಾನ ಆಹ್ವಾನಿಸಿದೆ.

ಭಾರತೀಯ ವಾಯುಸೇನೆ ವಾಯುದಾಳಿಯಿಂದ ಯಾವುದೇ ಉಗ್ರರು ಸತ್ತಿಲ್ಲ ಎಂದು ಪುರುಚ್ಛಿಸಿರುವ ಪಾಕಿಸ್ತಾನ, ಈ ಕುರಿತು ಪರಿಶೀಲನೆಗಾಗಿ ಭಾರತೀಯ ಪತ್ರಕರ್ತರನ್ನು ಬಾಲಾಕೋಟ್ ಪ್ರದೇಶಕ್ಕೆ ಕರೆದುಕೊಂಡು ಹೋಗಲು ಸಿದ್ಧ ಎಂದು ಪಾಕಿಸ್ತಾನ ಹೇಳಿದೆ.

ಈ ಕುರಿತು ಮಾತನಾಡಿರುವ ಪಾಕ್ ಸೇನಾ ವಕ್ತಾರ ಮೇಜರ್ ಜನರಲ್ ಆಸಿಫ್ ಗಫೂರ್, ಭಾರತ ಸರ್ಕಾರ ಮತ್ತು ವಾಯುಸೇನೆ ಪ್ರತಿಪಾದಿಸುತ್ತಿರುವ ಬಾಲಾಕೋಟ್ ವಾಯುದಾಳಿ ಪ್ರದೇಶಕ್ಕೆ ಭಾರತೀಯ ಪತ್ರಕರ್ತರಿಗೆ ಮುಕ್ತ ಆಹ್ವಾನವಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಕಳೆದೆರಡು ತಿಂಗಳಿನಿಂದ ಭಾರತ ಜಗತ್ತಿಗೆ ಮತ್ತು ತನ್ನ ಜನತೆಗೆ ಸುಳ್ಳು ಹೇಳುತ್ತಿದ್ದು, ಸತ್ಯದ ದರ್ಶನಕ್ಕಾಗಿ ಭಾರತೀಯ ಪತ್ರಕರ್ತರನ್ನು ಆಹ್ವಾನಿಸುತ್ತಿರುವುದಾಗಿ ಆಸಿಫ್ ಗಫೂರ್ ತಿಳಿಸಿದ್ದಾರೆ.

Pakistan admits presence of terrorists in its territory

Read story | https://t.co/IDdMV1w9JD pic.twitter.com/ifSCXv4Rch

— ANI Digital (@ani_digital)

ಆದರೆ ಬಾಲಾಕೋಟ್ ದಾಳಿಯಲ್ಲಿ ಯಾವುದೇ ಉಗ್ರರು ಸತ್ತಿಲ್ಲ ಎಂದು ಹೇಳುವ ಮೂಲಕ ಪಾಕಿಸ್ತಾನ ತನ್ನ ನೆಲದಲ್ಲಿ ಉಗ್ರರು ಆಶ್ರಯ ಪಡೆದಿರುವುದಾಗಿ ಒಪ್ಪಿಕೊಂಡಂತಾಗಿದೆ.

click me!