ಐಸಿಸ್‌ ಮುಖ್ಯಸ್ಥ ಬಗ್ದಾದಿ 5 ವರ್ಷದ ಬಳಿಕ ಪ್ರತ್ಯಕ್ಷ

Published : Apr 30, 2019, 11:34 AM IST
ಐಸಿಸ್‌ ಮುಖ್ಯಸ್ಥ ಬಗ್ದಾದಿ 5 ವರ್ಷದ ಬಳಿಕ ಪ್ರತ್ಯಕ್ಷ

ಸಾರಾಂಶ

ಐಸಿಸ್‌ ಮುಖ್ಯಸ್ಥ ಬಗ್ದಾದಿ 5 ವರ್ಷದ ಬಳಿಕ ಪ್ರತ್ಯಕ್ಷ| ಐಸಿಸ್ ಮುಖ್ಯಸ್ಥ ಬದುಕಿದ್ದಾನಾ ಎಂಬ ಗೊಂದಲಕ್ಕೆ ತೆರೆ

ಬಾಗ್ದಾದ್‌[ಏ.30]: ಜಗತ್ತಿನ ಕುಖ್ಯಾತ ಸಂಘಟನೆಗಳಲ್ಲಿ ಮುಂಚೂಣಿಯಲ್ಲಿರುವ ಐಸಿಸ್‌ ಮುಖ್ಯಸ್ಥ ಅಬು ಬಕರ್‌ ಅಲ್‌ ಬಗ್ದಾದಿ ಐದು ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ವಿಡಿಯೋವೊಂದರಲ್ಲಿ ಪ್ರತ್ಯಕ್ಷನಾಗಿದ್ದಾನೆ.

ಆದರೆ ಈ ವಿಡಿಯೋವನ್ನು ಯಾವಾಗ ಚಿತ್ರೀಕರಿಸಲಾಗಿದೆ ಎಂಬುದು ಗೊತ್ತಾಗಿಲ್ಲ.ಆದರೆ ಬಾಗ್ದಾದಿ ಈ ವಿಡಿಯೋದಲ್ಲಿ ಪೂರ್ವ ಸಿರಿಯಾದಲ್ಲಿ ಐಸಿಸ್ ಅಂತಿಮ ಕೋಟೆ ಬಾಗೂಜ್ ಗಾಗಿ ತಿಂಗಾಳಾನುಗಟ್ಟಲೆ ನಡೆದಿದ್ದ ಯುದ್ಧದ ಕುರಿತು ಉಲ್ಲೇಖಿಸಿದ್ದಾರೆ. ಈ ಹೋರಾಟ ಕಳೆದ ತಿಂಗಳಷ್ಟೇ ಮುಕ್ತಾಯಗೊಂಡಿದೆ ಎಂಬುವುದು ಗಮನಾರ್ಹ. 

ಒಂದು ಬೆಡ್ ಮೇಲೆ ಕುಳಿತ ಬಾಗ್ದಾದಿ ತನ್ನ ಎದುರು ಕುಳಿತಿದ್ದ ಮೂವರು ವ್ಯಕ್ತಿಗಳನ್ನುದ್ದೆಶಿಸಿ ಬೂಗೂಜ್ ಹೋರಾಟ ಮುಕ್ತಾಯಗೊಂಡಿದೆ ಎಂದಿದ್ದಾಋಎ. ಆದರೆ ಆ ಮೂವರು ವ್ಯಕ್ತಿಗಳ ಮುಖ ಬ್ಲರ್ ಮಾಡಲಾಗಿದೆ. ಹೀಗಾಗಿ ಗುರುತಿಸುವುದು ಅಸಾಧ್ಯವಾಗಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಿಎಂ, ಡಿಸಿಎಂ ನಡುವೆ ಬೂದಿ ಮುಚ್ಚಿದ ಕೆಂಡದ ಪರಿಸ್ಥಿತಿ: ಸಂಸದ ಜಗದೀಶ್ ಶೆಟ್ಟರ್
ಗೆಳೆಯರ ಜೊತೆ ಟ್ರಿಪ್ ಹೋಗಿದ್ದ ಬೆಂಗಳೂರು ನಿವಾಸಿ ಗೋವಾ ನೈಟ್ ಕ್ಲಬ್ ದುರಂತದಲ್ಲಿ ಮೃತ