
ಕೇಂದ್ರ ಗೃಹ ಸಚಿವರಾದ 2 ದಿನದಲ್ಲೇ, ಸಚಿವರಾದ ನಿರ್ಮಲಾ ಸೀತರಾಮನ್, ಧರ್ಮೇಂದ್ರ ಪ್ರಧಾನ್, ತೋಮರ್ ಜೈಶಂಕರ ಅವರನ್ನು ಕಚೇರಿಗೆ ಕರೆಸಿಕೊಂಡ ಅಮಿತ್ ಭಾಯಿ ಪೆಟ್ರೋಲ್ ಆಯಾತ-ನಿರ್ಯಾತದ ಬಗ್ಗೆ 3 ಗಂಟೆ ಚರ್ಚೆ ನಡೆಸಿದರು.
ಮೋದಿ ಜನಪ್ರಿಯತೆ ಕಾಪಾಡಿಕೊಳ್ಳುವ ಫಾರ್ಮುಲಾ ಇದು!
ಗೃಹ ಇಲಾಖೆಗೆ ಇದು ಯಾವುದೇ ರೀತಿಯಲ್ಲಿ ಸಂಬಂಧಪಟ್ಟ ವಿಷಯ ಅಲ್ಲ. ಆದರೆ ಎಲ್ಲರಿಗೂ, ಸಣ್ಣ ಪುಟ್ಟವಿಷಯಗಳಿಗೆ ಮೋದಿ ಹತ್ತಿರ ಹೋಗೋದು ಬೇಡ ನಾನಿದ್ದೇನೆ ಎಂಬ ಸ್ಪಷ್ಟ ಸಂದೇಶ ಕೊಡುವುದಿತ್ತು. ಮೊದಲೇ ಅಮಿತ್ ಭಾಯಿ ಎಂದರೆ ಗಡ ಗಡ ನಡಗುವ ಬಿಜೆಪಿ ಸಚಿವರು ಇನ್ನು ಮೇಲೆ ನಾತ್‌ರ್ ಬ್ಲಾಕ್‌ನಲ್ಲಿ ಕೇಳದೆ, ಸಚಿವಾಲಯದಲ್ಲಿ ದೊಡ್ಡ ಹೆಜ್ಜೆ ಇಡೋದು ಕಷ್ಟವಿದೆ. ಪಕ್ಷದ ನಂತರ ಈಗ ಸರ್ಕಾರದಲ್ಲೂ ಶಾ ಈಸ್ ಪವರ್ ಫುಲ್ ಬಿಡಿ.
ಶಾ ವರ್ಕಿಂಗ್ ಸ್ಟೈಲ್
ಹತ್ತು ದಿನಗಳಲ್ಲೇ ಅಮಿತ್ ಶಾ ಕೆಲಸದ ಶೈಲಿ ನೋಡಿ ಗೃಹ ಇಲಾಖೆ ಅಧಿಕಾರಿಗಳು ಬೇಸ್ತು ಬಿದ್ದಿದ್ದಾರೆ. ಬೆಳಿಗ್ಗೆ ಸರಿಯಾಗಿ 9:45ಕ್ಕೆ ಮನೆಯಿಂದ ಬರುವ ಅಮಿತ್ ಭಾಯಿ ಕಚೇರಿಯಿಂದ ಹೊರಗಡೆ ಬರುವುದು ರಾತ್ರಿ 8ಗಂಟೆಗೆ. ಮಧ್ಯಾಹ್ನ ಊಟಕ್ಕೆ ಮನೆಗೆ ಹೋಗೋಲ್ಲ.
ಶೀಘ್ರ ಚುನಾವಣೆ : ಮೈತ್ರಿಯಲ್ಲಿ ಸಿಎಂ ಹುದ್ದೆ ಬಿಜೆಪಿಗೆ
12:45ಕ್ಕೆ ಸರಿಯಾಗಿ ಊಟದ ಬ್ಯಾಸ್ಕೆಟ್ ಬರುತ್ತದೆ. ರಾಜನಾಥ್, ಶಿಂಧೆ, ಚಿದು ಇವರೆಲ್ಲರೂ ಬೆಳಿಗ್ಗೆ 10 ಗಂಟೆಗೆ ಬಂದು 1 ಗಂಟೆಗೆ ಮನೆಗೆ ಹೋದರೆ, ಉಳಿದ ಮೀಟಿಂಗ್‌ಗಳು ಮನೆಯಲ್ಲಿ. ಆದರೆ ಶಾ ಸುಮಾರು ಹತ್ತು ಗಂಟೆ ಕಚೇರಿಯಲ್ಲೇ ಇರುತ್ತಾರೆ.
ಗೃಹ ಇಲಾಖೆ ಅಡಿಯಲ್ಲಿ 19 ವಿಭಾಗಗಳಿದ್ದು ದಿನಕ್ಕೆ ಒಂದರ ಬ್ರಿಫಿಂಗ್ ಪಡೆಯುತ್ತಾರೆ. ಮೊನ್ನೆ ಈದ್ ಮಿಲಾದ್ ದಿನ ಅಧಿಕಾರಿಗಳು ರಜೆ ಎಂದು ಭಾವಿಸಿ ಮನೆಯಲ್ಲಿದ್ದರೆ, ಶಾ ಕಚೇರಿಗೆ ಬಂದು ಕುಳಿತಾಗ ಹಿರಿಯ ಅಧಿಕಾರಿಗಳು ಓಡೋಡಿ ಬಂದರಂತೆ. ಟೀಕೆ ಟಿಪ್ಪಣಿ ಏನೇ ಇರಲಿ ಅಮಿತ್ ಭಾಯಿ ಒಬ್ಬ ಕಸಬುದಾರ ಕೆಲಸಗಾರ ಅಂತೂ ಹೌದು.
- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ
ರಾಜಕಾರಣದ ಸುದ್ದಿಗಾಗಿ ‘ಇಂಡಿಯಾ ಗೇಟ್‘ ಕ್ಲಿಕ್ ಮಾಡಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.