ಪರಮಾಣು ಯುದ್ಧ ಸನಿಹವೇ?: ಕೇಳಿದ ಪ್ರಶ್ನೆಗೆ ಇದು ಅಮಿತ್ ಶಾ ಉತ್ತರವೇ?

By Web Desk  |  First Published Sep 20, 2019, 3:06 PM IST

ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಪಡಿಸಿದ ನಂತರ ಆ ರಾಜ್ಯದಲ್ಲಿ ಪರಿಸ್ಥಿತಿ ಇನ್ನೂ ಸಂಪೂರ್ಣ ನಿಯಂತ್ರಣಕ್ಕೆ ಬಂದಿಲ್ಲ. ಅದರ ಬಗ್ಗೆ ಹಾಗೂ ಅಯೋಧ್ಯೆ, ಎನ್‌ಆರ್‌ಸಿ ಮತ್ತು ರಾಜಕೀಯ ಬೆಳವಣಿಗೆಗಳ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹಿಂದುಸ್ತಾನ್‌ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಕುತೂಹಲಕರ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಮಾತುಕತೆಯ ಆಯ್ದ ಭಾಗ ಇಲ್ಲಿದೆ.


ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಪಡಿಸಿದ ನಂತರ ಆ ರಾಜ್ಯದಲ್ಲಿ ಪರಿಸ್ಥಿತಿ ಇನ್ನೂ ಸಂಪೂರ್ಣ ನಿಯಂತ್ರಣಕ್ಕೆ ಬಂದಿಲ್ಲ. ಅದರ ಬಗ್ಗೆ ಹಾಗೂ ಅಯೋಧ್ಯೆ, ಎನ್‌ಆರ್‌ಸಿ ಮತ್ತು ರಾಜಕೀಯ ಬೆಳವಣಿಗೆಗಳ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹಿಂದುಸ್ತಾನ್‌ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಕುತೂಹಲಕರ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಮಾತುಕತೆಯ ಆಯ್ದ ಭಾಗ ಇಲ್ಲಿದೆ.

ಅಯೋಧ್ಯೆ ವಿವಾದಕ್ಕೆ ಸಂಬಂಧಿಸಿದ ತೀರ್ಪನ್ನು ನ.17ರೊಳಗೆ ನೀಡುತ್ತೇನೆಂದು ಸುಪ್ರೀಂಕೋರ್ಟ್‌ ಹೇಳಿದೆ. ಕೊನೆಗೂ ನಿರ್ಣಾಯಕ ದಿನ ಹತ್ತಿರ ಬಂದೇಬಿಟ್ಟಿತಲ್ಲವೇ?

Tap to resize

Latest Videos

ಕಾಂಗ್ರೆಸ್‌ನ ಕಪಿಲ್‌ ಸಿಬಲ್‌ ಅವರು ವಿರೋಧಿಸದೆ ಇದ್ದಿದ್ದರೆ ಲೋಕಸಭೆ ಚುನಾವಣೆಗೂ ಮೊದಲೇ ತೀರ್ಪು ಬಂದಿರುತ್ತಿತ್ತು. ಚುನಾವಣೆಯ ಮೇಲೆ ತೀರ್ಪು ಪ್ರಭಾವ ಬೀರಬಹುದು, ಹಾಗಾಗಿ ಚುನಾವಣೆ ಮುಗಿದ ಮೇಲೆ ತೀರ್ಪು ನೀಡಿ ಎಂದು ಕಾಂಗ್ರೆಸ್‌ ಪಕ್ಷ ಕೇಳಿಕೊಂಡಿತ್ತು. ಈಗ ತ್ವರಿತವಾಗಿ ವಿಚಾರಣೆ ನಡೆಸಿ ತೀರ್ಪು ನೀಡುವುದಾಗಿ ಸುಪ್ರೀಂಕೋರ್ಟ್‌ ಹೇಳಿದೆ.

ಹೊಸ ಕಾಶ್ಮೀರ, ಹೊಸ ಸ್ವರ್ಗ: ಪ್ರಧಾನಿ ಮೋದಿ ಭರವಸೆ!

ತೀರ್ಪು ಬಂದ ಮೇಲೆ ಉಂಟಾಗಬಹುದಾದ ಬೆಳವಣಿಗೆಗಳನ್ನು ಎದುರಿಸಲು ಸರ್ಕಾರ ಸಿದ್ಧವಾಗಿದೆಯೇ?

ಒಂದು ವಿಷಯದಲ್ಲಿ ವಿವಾದವಿದೆ ಎಂದಾದಾಗ ಅದು ಕೋರ್ಟ್‌ಗೆ ಹೋಗುತ್ತದೆ. ಕೋರ್ಟ್‌ ಅದನ್ನು ಇತ್ಯರ್ಥಪಡಿಸುತ್ತದೆ. ಆಗ ಬರುವ ತೀರ್ಪನ್ನು ಇಷ್ಟವೋ ಇಷ್ಟವಿಲ್ಲವೋ ಎರಡೂ ಪಕ್ಷಗಳು ಒಪ್ಪಿಕೊಳ್ಳಬೇಕಾಗುತ್ತದೆ.

ಕಾಶ್ಮೀರದ ವಿಷಯಕ್ಕೆ ಬರೋಣ. ವಿಶೇಷ ಸ್ಥಾನಮಾನ ರದ್ದುಪಡಿಸಿದ ರೀತಿ ಹಾಗೂ ನಂತರ ಕೈಗೊಂಡ ಕ್ರಮಗಳನ್ನು ನೋಡಿದರೆ ನೀವು ಬಹಳ ದಿನಗಳಿಂದ ಅದಕ್ಕಾಗಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಿರಿ ಅನ್ನಿಸುತ್ತದೆ...

ಕಾಶ್ಮೀರದಲ್ಲಿ 370ನೇ ವಿಧಿ ಜಾರಿಗೊಳಿಸಿದ ದಿನದಿಂದಲೇ ನಾವು ಅದನ್ನು ವಿರೋಧಿಸುತ್ತಿದ್ದೆವು. ಆವತ್ತಿನಿಂದಲೇ ಅದನ್ನು ತೆರವುಗೊಳಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದೆವು. ಯಾವಾಗ ಅವಕಾಶ ಸಿಗುತ್ತದೆಯೋ ಆಗ ಅದನ್ನು ತೆಗೆದುಹಾಕಬೇಕು ಎಂಬುದು ನಮ್ಮ ಹಳೆಯ ನಿರ್ಣಯವಾಗಿತ್ತು. ಅದರಂತೆ ರದ್ದುಪಡಿಸಿದ್ದೇವೆ.

ಕಾಶ್ಮೀರದಲ್ಲಿ 3000 ಎಕರೆ ಜಾಗದಲ್ಲಿ ಬಿ.ಆರ್‌. ಶೆಟ್ಟಿ ಫಿಲ್ಮ್‌ ಸಿಟಿ ಸ್ಥಾಪನೆ!

ಅದು ಬಿಜೆಪಿಯ ನಿಲುವಾಯಿತು. ಆದರೆ, ನೀವು ಗೃಹ ಸಚಿವರಾದ ಮೂರೇ ತಿಂಗಳಲ್ಲಿ 370ನೇ ವಿಧಿ ರದ್ದುಪಡಿಸಿದಿರಿ. ಅಂದರೆ ಸರ್ಕಾರದಿಂದಲೂ ಸಾಕಷ್ಟುಸಿದ್ಧತೆ ಮಾಡಿಕೊಂಡಿದ್ದಿರಲ್ಲವೇ?

ಕೇಂದ್ರದಲ್ಲಿರುವುದು ಬಿಜೆಪಿ ಸರ್ಕಾರ. ನಾನು ಬಿಜೆಪಿ ಸರ್ಕಾರದ ಗೃಹಮಂತ್ರಿ. ಈ ಸರ್ಕಾರ ಬಿಜೆಪಿಯ ಅಜೆಂಡಾದಂತೆ ಕೆಲಸ ಮಾಡುತ್ತದೆ. ನಾವು ನಮ್ಮ ಪ್ರಣಾಳಿಕೆಯನ್ನು ಜಾರಿಗೊಳಿಸಿದ್ದೇವೆ.

ಆದರೆ ವಿಶೇಷ ಸ್ಥಾನಮಾನ ರದ್ದುಪಡಿಸಿದ ನಂತರ ವಿಧಿಸಿದ ನಿರ್ಬಂಧಗಳಿಂದ ಜನರಿಗೆ ತೊಂದರೆಯಾಗುತ್ತಿದೆ. ಇದು ಸರಿಹೋಗುವುದು ಯಾವಾಗ?

ದೊಡ್ಡ ಮಟ್ಟದ ನಿರ್ಬಂಧಗಳಾವುವೂ ಕಾಶ್ಮೀರದಲ್ಲಿ ಈಗ ಇಲ್ಲ. ಕೇವಲ ಎಂಟು ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ 144ನೇ ವಿಧಿ ಜಾರಿಗೊಳಿಸಲಾಗಿದೆ. ಎಲ್ಲೂ ಕಫä್ರ್ಯ ಇಲ್ಲ. ಇನ್ನು ಮೊಬೈಲ್‌, ಇಂಟರ್ನೆಟ್‌ ಬಗ್ಗೆ ನೀವು ಹೇಳುವುದಾದರೆ, ಜಮ್ಮು ಕಾಶ್ಮೀರಕ್ಕೆ ಇಂಟರ್ನೆಟ್‌ ಬಂದಿದ್ದೇ ದೇಶದ ಇತರೆಡೆಗೆ ಇಂಟರ್ನೆಟ್‌ ಬಂದ 17 ವರ್ಷದ ನಂತರ. ಅಲ್ಲಿಗೆ ಮೊಬೈಲ್‌ ಫೋನ್‌ ಕಾಲಿಟ್ಟಿದ್ದು ದೇಶದ ಇತರೆಡೆ ಮೊಬೈಲ್‌ ಫೋನ್‌ ಬಂದ 16 ವರ್ಷಗಳ ನಂತರ. ಇದ್ಯಾವುದೂ ಹೊಸ ವಿಷಯ ಅಲ್ಲ.

ಜಮ್ಮು ಕಾಶ್ಮೀರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂದು ದೊಡ್ಡ ಪ್ರಮಾಣದಲ್ಲಿ ಕೂಗೆದ್ದಿದೆ. ನಿಮ್ಮ ಪ್ರತಿಕ್ರಿಯೆಯೇನು?

ಇಷ್ಟುವರ್ಷ ಅಲ್ಲಿ ಸಾವಿರಾರು ಜನರು ಸಾಯುತ್ತಿದ್ದರಲ್ಲ, ಅವರಾರ‍ಯರಿಗೂ ಮಾನವ ಹಕ್ಕು ಇರಲಿಲ್ಲವೇ? ಕಾಂಗ್ರೆಸ್‌ ಸರ್ಕಾರದ ನೀತಿಯಿಂದಾಗಿ ಅಲ್ಲಿ ಹಿಂಸಾಚಾರಗಳು ನಡೆದು ಲಕ್ಷಾಂತರ ಮಹಿಳೆಯರು ವಿಧವೆಯಾದರಲ್ಲ, ಅವರ ಮಕ್ಕಳು ಅನಾಥರಾದರಲ್ಲ, ಅವರಾರ‍ಯರಿಗೂ ಮಾನವ ಹಕ್ಕುಗಳು ಇಲ್ಲವೇ? ಅದಕ್ಕೆ ಯಾರು ಜವಾಬ್ದಾರಿ? ಇಂಟರ್ನೆಟ್‌, ಮೊಬೈಲ್‌ ಬಗ್ಗೆ ಮಾತನಾಡುವವರಿಗೆ ಜನರ ಜೀವಹರಣವಾಗಿದ್ದು ಸಣ್ಣ ವಿಷಯವಾಗಿ ಕಾಣಿಸುತ್ತದೆಯೇ?

ಕಾಶ್ಮೀರದ ವಿಷಯದಲ್ಲಿ ಪಾಕಿಸ್ತಾನವು ಭಾರತಕ್ಕೆ ಪರಮಾಣು ಬಾಂಬ್‌ಗಳ ಹೆಸರು ಹೇಳಿ ಧಮಕಿ ಹಾಕುತ್ತಿದೆ. ಸ್ವತಃ ಅಲ್ಲಿನ ಪ್ರಧಾನಿ ಯುದ್ಧದ ಮಾತನಾಡುತ್ತಿದ್ದಾರೆ. ನಾವು ಯುದ್ಧದ ಕಡೆ ಹೋಗುತ್ತಿದ್ದೇವೆಯೇ?

ಯುದ್ಧದ ಪ್ರಶ್ನೆಯೇ ಇಲ್ಲ. ಜಮ್ಮು ಕಾಶ್ಮೀರವು ಭಾರತದ ಅವಿಭಾಜ್ಯ ಭಾಗ. ಭಾರತದ ಸಂವಿಧಾನಕ್ಕೆ ಅನುಗುಣವಾಗಿ ಜಮ್ಮು ಕಾಶ್ಮೀರದಲ್ಲಿ ಯಾವುದೇ ಬದಲಾವಣೆ ತರಲು ನಮ್ಮ ಸಂಸತ್ತಿಗೆ ಅಧಿಕಾರವಿದೆ. ಪಾಕಿಸ್ತಾನದ ಹೇಳಿಕೆಗಳನ್ನು ಅಷ್ಟೊಂದು ಗಂಭೀರವಾಗಿ ಪರಿಗಣಿಸುವ ಅಗತ್ಯವಿಲ್ಲ. ಇನ್ನು, ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅನುಕಂಪ ಗಿಟ್ಟಿಸಲು ಪ್ರಯತ್ನಿಸುತ್ತಾರೆ. ಅದನ್ನು ಮೊದಲಿನಿಂದಲೂ ಮಾಡುತ್ತಿದ್ದಾರೆ. ಆದರೆ ಮೋದಿ ಸರ್ಕಾರಕ್ಕೆ ಜಾಗತಿಕ ಮಟ್ಟದಲ್ಲಿ ಬಹುದೊಡ್ಡ ರಾಜತಾಂತ್ರಿಕ ಬೆಂಬಲವಿದೆ. ಪಾಕಿಸ್ತಾನದ ಯಾವುದೇ ಸಂಚು ಸಫಲವಾಗಲು ನಾವು ಬಿಡುವುದಿಲ್ಲ.

ಪ್ರಧಾನಿ ಮೋದಿ ಪಿಒಕೆಯನ್ನು ಕೂಡಾ ವಶಪಡಿಸಿಕೊಳ್ಳುತ್ತಾರೆ: ಸಿದ್ದು ಸವದಿ

370ನೇ ವಿಧಿ ರದ್ದುಪಡಿಸಿದ ದಿನ ನೀವು ಸಂಸತ್ತಿನಲ್ಲಿ ಮಾಡಿದ ಭಾಷಣದಲ್ಲಿ ‘ನಮಗೆ ಐದು ವರ್ಷ ಕಾಲಾವಕಾಶ ಕೊಡಿ. ಕಾಶ್ಮೀರದ ಚಹರೆ ಹೇಗೆ ಬದಲಾಗುತ್ತದೆ ನೋಡಿ’ ಎಂದಿದ್ದಿರಿ. ನಿಮ್ಮಲ್ಲಿ ಏನೇನು ಯೋಜನೆಗಳಿವೆ?

ಇಷ್ಟುದಿನ ಭಾರತದ ಸಂಸತ್ತು ರೂಪಿಸಿದ 106 ಕಾನೂನುಗಳು ಕಾಶ್ಮೀರಕ್ಕೆ ಅನ್ವಯಿಸುತ್ತಿರಲಿಲ್ಲ. ಹೀಗಾಗಿ ಇವುಗಳ ಲಾಭವೂ ಅಲ್ಲಿನ ಜನರಿಗೆ ಸಿಗುತ್ತಿರಲಿಲ್ಲ. ಈಗ ವಿಶೇಷ ಸ್ಥಾನ ರದ್ದಾದ ಮೇಲೆ ಇವುಗಳ ಲಾಭ ನೇರವಾಗಿ ಅಲ್ಲಿನ ಜನರಿಗೆ ಸಿಗುತ್ತದೆ. ದೇಶದೆಲ್ಲೆಡೆ ಹೆಣ್ಮಕ್ಕಳ ಮದುವೆಗೆ 18 ವರ್ಷ ಕನಿಷ್ಠ ವಯಸ್ಸಾಗಿದ್ದರೆ ಕಾಶ್ಮೀರದಲ್ಲಿ ಈ ನಿಯಮವೇ ಇರಲಿಲ್ಲ. ಹೀಗಾಗಿ ಬಾಲ್ಯವಿವಾಹಗಳು ನಡೆದು ಹೆಣ್ಮಕ್ಕಳ ಶೋಷಣೆಯಾಗುತ್ತಿತ್ತು. ದೇಶಾದ್ಯಂತ ಅನ್ವಯಿಸುವ ಭ್ರಷ್ಟಾಚಾರ ನಿಯಂತ್ರಣ ಕಾನೂನು ಕಾಶ್ಮೀರಕ್ಕೆ ಅನ್ವಯಿಸುತ್ತಿರಲಿಲ್ಲ. ಹೀಗಾಗಿ ಭ್ರಷ್ಟಾಚಾರದಿಂದ ಇಡೀ ರಾಜ್ಯದ ಜನರ ಶೋಷಣೆಯಾಗುತ್ತಿತ್ತು. ಇನ್ನು ಆ ಸಮಸ್ಯೆ ಇರುವುದಿಲ್ಲ. ಇವುಗಳ ಜೊತೆಗೆ ಉದ್ಯೋಗ, ಶಿಕ್ಷಣ, ಪ್ರವಾಸೋದ್ಯಮ, ಆರೋಗ್ಯ ಹೀಗೆ ಎಲ್ಲ ಕ್ಷೇತ್ರಗಳಲ್ಲೂ ಅಭಿವೃದ್ಧಿ ತನ್ನಿಂತಾನೇ ಆರಂಭವಾಗಲಿದೆ.

ಜಮ್ಮು ಕಾಶ್ಮೀರದ ಪ್ರಮುಖ ರಾಜಕೀಯ ನಾಯಕರಾದ ಅಬ್ದುಲ್ಲಾ ಕುಟುಂಬ ಹಾಗೂ ಮುಫ್ತಿ ಕುಟುಂಬದವರನ್ನು ನೀವು ಗೃಹಬಂಧನದಲ್ಲಿರಿಸಿದ್ದೀರಿ. ಅದರಿಂದಾಗಿ ಅವರ ಭಾವನೆಗಳನ್ನು ಘಾಸಿಗೊಳಿದ್ದೀರಿ ಎಂಬ ಆರೋಪವಿದೆ.

ಸ್ವಾತಂತ್ರ್ಯಾನಂತರ 70 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಜಮ್ಮು ಕಾಶ್ಮೀರದಲ್ಲಿ 40 ಸಾವಿರ ಗ್ರಾಮ ಪಂಚಾಯ್ತಿ ಪ್ರತಿನಿಧಿಗಳು ತಮ್ಮ ಗ್ರಾಮಗಳ ಅಭಿವೃದ್ಧಿಗಾಗಿ ಸ್ವತಂತ್ರವಾಗಿ ಕೆಲಸ ಮಾಡತೊಡಗಿದ್ದಾರೆ. ನಿಮಗೆ ಎರಡು ಕುಟುಂಬದ ‘ಭಾವನೆಗಳು’ ಹೆಚ್ಚೋ ಅಥವಾ 40 ಸಾವಿರ ಜನಪ್ರತಿನಿಧಿಗಳ ಭಾವನೆಗಳು ಹೆಚ್ಚೋ? ನಮ್ಮ ದೇಶದ ಬಹುತೇಕ ಸಮಸ್ಯೆಗಳಿಗೆ ಈ ಕುಟುಂಬ ರಾಜಕಾರಣವೇ ಕಾರಣ. ನಿಧಾನವಾಗಿ ಅದು ನಾಮಾವಶೇಷವಾಗುತ್ತಿದೆ.

ವಯೋವೃದ್ಧ ಫಾರುಖ್‌ ಅಬ್ದುಲ್ಲಾರನ್ನು 2 ವರ್ಷದ ಗೃಹಬಂಧನದಲ್ಲಿ ಇರಿಸಿರುವುದೇಕೆ?

ಜಮ್ಮು ಕಾಶ್ಮೀರದ ಭದ್ರತಾ ಕಾಯ್ದೆಯಡಿ ಅವರನ್ನು ಗೃಹಬಂಧನದಲ್ಲಿ ಇರಿಸಲಾಗಿದೆ. 2 ವರ್ಷದ ಗೃಹಬಂಧನ ಎಂದು ಹೇಳಿದ್ದು ಯಾರು? ಅಂತಹ ಯೋಚನೆ ಕೂಡ ಯಾರಿಗೂ ಇಲ್ಲ.

ಅಸ್ಸಾಂನಲ್ಲಿ ಎನ್‌ಆರ್‌ಸಿ ಜಾರಿಗೊಳಿಸಿದ ನಂತರ 84 ಲಕ್ಷ ಜನರು ಭಾರತೀಯರಲ್ಲ ಎಂಬ ಲೆಕ್ಕಾಚಾರ ಹೊರಬಿದ್ದಿದೆ. ಅಷ್ಟೊಂದು ಜನ ಅಕ್ರಮ ವಲಸಿಗರಿದ್ದಾರೆಯೇ? ಆ ವಿವಾದವನ್ನು ಹೇಗೆ ನಿಭಾಯಿಸುತ್ತೀರಿ?

ಇದರಲ್ಲಿ ವಿವಾದವೇನೂ ಇಲ್ಲ. ಪೌರತ್ವ ನಿರ್ಣಯ ಸರಿಯಾಗಿ ಆಗಿದೆಯೋ ಇಲ್ಲವೋ ಎಂಬುದನ್ನು ನ್ಯಾಯಾಧಿಕರಣಗಳು ನಿರ್ಧರಿಸುತ್ತವೆ. ಯಾರಿಗೆ ವಕೀಲರ ಶುಲ್ಕ ನೀಡಲು ಸಾಧ್ಯವಿಲ್ಲವೋ ಅವರಿಗೆ ಅಸ್ಸಾಂ ಸರ್ಕಾರವೇ ವಕೀಲರ ಶುಲ್ಕ ನೀಡುತ್ತದೆ. ನಾನಿಲ್ಲಿ ಒಂದು ಮಾತು ಹೇಳಬೇಕು. ಯಾರು ಬೇಕಾದರೂ ಅಕ್ರಮವಾಗಿ ಒಳನುಸುಳಿ ಹಾಯಾಗಿ ಬದುಕಬಹುದು ಎಂಬಂತಹ ದೇಶ ಜಗತ್ತಿನಲ್ಲೇ ಇಲ್ಲ. ನೀವು ಅಮೆರಿಕ, ಇಂಗ್ಲೆಂಡ್‌, ನೆದರ್‌ಲೆಂಡ್‌, ರಷ್ಯಾಕ್ಕೆ ನುಸುಳಿಕೊಂಡು ಹೋಗಿ ಅಲ್ಲಿ ಬದುಕಲು ಸಾಧ್ಯವೇ? ಯಾರೂ ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ.

ಹಾಗಿರುವಾಗ ಭಾರತದಲ್ಲಿ ನಾವು ಅಕ್ರಮ ನುಸುಳುಕೋರರನ್ನು ನೋಡಿಕೊಂಡು ಸುಮ್ಮನಿರಬೇಕೇ? ಯಾರು ಬೇಕಾದರೂ ಇಲ್ಲಿಗೆ ಬಂದು ಹೇಗೆ ಬೇಕಾದರೂ ಇದ್ದುಬಿಡಬಹುದೇ? ದೇಶ ಹೀಗೆ ನಡೆಯುವುದಿಲ್ಲ. ಸರ್ಕಾರದ ಬಳಿ ದೇಶದ ಪ್ರಜೆಗಳ ಪಟ್ಟಿಯಿರಬೇಕು. ಇದು ಬಿಜೆಪಿಯ ಪ್ರಣಾಳಿಕೆಯ ಅಂಶ ಕೂಡ ಆಗಿತ್ತು. ಜನರಿಗೆ ನಾವು ಮಾತು ಕೊಟ್ಟಿದ್ದೆವು. ಅದನ್ನು ಜಾರಿಗೊಳಿಸುತ್ತಿದ್ದೇವೆ. ಅಸ್ಸಾಂನಲ್ಲೊಂದೇ ಅಲ್ಲ, ಇಡೀ ದೇಶದಲ್ಲಿ ನಾವು ಎನ್‌ಆರ್‌ಸಿ ಜಾರಿಗೆ ತರುತ್ತೇವೆ. ಭಾರತೀಯರಲ್ಲದವರನ್ನು ದೇಶದಿಂದ ಹೊರಹಾಕುತ್ತೇವೆ.

ಯಾವ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ನಡೆದರೂ ಬೇರೆ ಬೇರೆ ಪಕ್ಷಗಳ ನಾಯಕರು ಬಿಜೆಪಿಗೆ ಗುಳೆ ಬರುತ್ತಾರಲ್ಲ, ಇದರ ಗುಟ್ಟೇನು?

ಹಾಗೇನಿಲ್ಲ. ನಮ್ಮ ಪಕ್ಷದವರೂ ಬೇರೆ ಪಕ್ಷಕ್ಕೆ ಹೋಗುತ್ತಾರೆ. ಯಶವಂತ್‌ ಸಿಹ್ನಾ ಹೋಗಿದ್ದರು. ಬಹಳ ಜನ ಹೋಗುತ್ತಾರೆ. ನೀವು ಅವರನ್ನು ನೋಡುವುದೇ ಇಲ್ಲ! ಇನ್ನು, ಸರ್ಕಾರಗಳು ಚೆನ್ನಾಗಿ ನಡೆಯುವುದಾದರೆ ಬೇರೆ ಬೇರೆ ಪಕ್ಷದ ನಾಯಕರು ತಮ್ಮ ವಿಚಾರಧಾರೆ ಬದಲಿಸಿಕೊಂಡು ಆ ಪಕ್ಷವನ್ನು ಸೇರುತ್ತಾರೆ. ರಾಜಕೀಯದಲ್ಲಿ ಇದು ಸಾಮಾನ್ಯ. ಇಂತಹ ಪ್ರಕ್ರಿಯೆ ಎಲ್ಲ ಚುನಾವಣೆಗಳ ವೇಳೆಯಲ್ಲಿ ಎಲ್ಲ ರಾಜಕೀಯ ಪಕ್ಷಗಳಲ್ಲೂ ನಡೆಯುತ್ತದೆ. ನಾವು ಅಧಿಕಾರದಲ್ಲಿರುವುದರಿಂದ ನಮ್ಮ ಪಕ್ಷಕ್ಕೆ ಬರುವವರು ಎದ್ದು ಕಾಣುತ್ತಾರೆ.

ನೀವು ಇತ್ತೀಚೆಗೆ ಕಾಂಗ್ರೆಸ್‌ಮುಕ್ತ ಭಾರತದ ಬಗ್ಗೆ ಮಾತನಾಡುವುದಿಲ್ಲವಲ್ಲ ಏಕೆ?

ಕಾಂಗ್ರೆಸ್‌ ಸಂಸ್ಕೃತಿಯಿಂದ ಭಾರತದ ರಾಜಕಾರಣವೀಗ ಮುಕ್ತವಾಗಿದೆ. ಭ್ರಷ್ಟಾಚಾರ, ಕುಟುಂಬ ರಾಜಕಾರಣ ಹಾಗೂ ತುಷ್ಟೀಕರಣದ ವಿರುದ್ಧ ಜನರು ತೀರ್ಪು ನೀಡಿದ್ದಾರೆ. ಈ ಮೂರೂ ಕಾಂಗ್ರೆಸ್‌ನ ಕೊಡುಗೆಗಳಾಗಿದ್ದವು.

ನಿಮ್ಮ ರಾಜಕಾರಣದ ಮೇಲೆ ಚಾಣಕ್ಯನ ಪ್ರಭಾವ ಎಷ್ಟಿದೆ?

ಚಾಣಕ್ಯನ ಅರ್ಥಶಾಸ್ತ್ರ ಹಾಗೂ ನೀತಿಶಾಸ್ತ್ರ ಗ್ರಂಥಗಳನ್ನು ಎಲ್ಲರೂ ಓದಬೇಕು. ನನಗೆ ವ್ಯಕ್ತಿಗತವಾಗಿ ಅವುಗಳಿಂದ ಬಹಳ ಲಾಭವಾಗಿದೆ ಎಂದಷ್ಟೇ ಹೇಳಬಲ್ಲೆ.

- ಅಮಿತ್ ಶಾ, ಕೇಂದ್ರ ಗೃಹ ಸಚಿವ 

click me!