ವಾಷಿಂಗ್ಟನ್‌ನಲ್ಲಿ ಗುಂಡಿನ ದಾಳಿ: ಓರ್ವ ಹತ, ಐವರಿಗೆ ಗಂಭೀರ ಗಾಯ!

By Web DeskFirst Published Sep 20, 2019, 2:44 PM IST
Highlights

ಅಮೆರಿಕ ರಾಜಧಾನಿ ವಾಷಿಂಗ್ಟನ್‌ನಲ್ಲಿ ಆಗುಂತಕರಿಂದ ಗುಂಡಿನ ದಾಳಿ| ವಾಷಿಂಗ್ಟನ್ ಡಿಸಿಯ ಕೊಲಂಬಿಯಾ ರಸ್ತೆ ಬಳಿ ಮುಸುಕುಧಾರಿಗಳಿಂದ ಗುಂಡಿನ ದಾಳಿ| ಗುಂಡಿನ ದಾಳಿಗೆ ಓರ್ವ ಮೃತಪಟ್ಟು, ಐವರಿಗೆ ಗಂಭೀರ ಗಾಯ| ಆಗುಂತಕರಿಗಾಗಿ ತೀವ್ರ ಶೋಧ ಮುಂದುವರೆಸಿರುವ ಪೊಲೀಸರು|

ವಾಷಿಂಗ್ಟನ್(ಸೆ.20): ಅಮೆರಿಕ ರಾಜಧಾನಿ ವಾಷಿಂಗ್ಟನ್‌ನಲ್ಲಿ ಆಗುಂತಕರು ಗುಂಡಿನ ದಾಳಿ ನಡೆಸಿದ್ದು, ಘಟನೆಯಲ್ಲಿ ಓರ್ವ ಮೃತಪಟ್ಟು ಇತರ ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ವಾಷಿಂಗ್ಟನ್ ಡಿಸಿಯ ಕೊಲಂಬಿಯಾ ರಸ್ತೆ ಬಳಿ ಮುಸುಕುಧಾರಿಗಳು ಮನಬಂದಂತೆ ಗುಂಡು ಹಾರಿಸಿದ್ದಾರೆ ಎಂದು ಸ್ಥಳೀಓಯ ಪೊಲೀಸರು ಮಾಹಿತಿ ನೀಡಿದ್ದಾರೆ.

ಏಕಾಏಕಿ ನಡೆದ ಗುಂಡಿನ ದಾಳಿಯಲ್ಲಿ ಆರು ಜನರಿಗೆ ಗುಂಡು ತಗುಲಿದ್ದು, ಕೂಡಲೇ ಗಾಯಾಳುಗಳನ್ನ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಮಾರ್ಗ ಮಧ್ಯೆಯೇ ಓರ್ವ ಮೃತಪಟ್ಟಿದ್ದಾಗಿ ಪೊಲೀಸರು ತಿಳಿಸಿದ್ದಾರೆ.

ಸದ್ಯ ಗುಂಡಿನ ದಾಳಿಗೆ ಕಾರಣ ತಿಳಿದು ಬಂದಿಲ್ಲವಾದರೂ, ಆಗುಂತಕರಿಗಾಗಿ ತೀವ್ರ ಶೋಧ ಮುಂದುವರೆದಿದೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

click me!