
ಮುಂಬೈ : ಮಹಾರಾಷ್ಟ್ರ ಭದ್ರತಾ ಪಡೆಯ ಯೋಧರೋರ್ವರು ತಮ್ಮ ಜೀವವನ್ನೇ ಪಣಕ್ಕಿಟ್ಟು ರೈಲು ಹಳಿಯ ಮೇಲೆ ಬೀಳುತ್ತಿದ್ದ ಮಗುವನ್ನು ರಕ್ಷಣೆ ಮಾಡುವ ಮೂಲಕ ಸಾಹಸ ಮೆರೆದಿದ್ದಾರೆ.
ಮಹಾರಾಷ್ಟ್ರದ ಬೀವಂಡಿ ಪ್ರದೇಶದಲ್ಲಿ ಮೊಹಮ್ಮದ್ ದಿಶಾನ್ ಅವರು ಪತ್ನಿ ಹಾಗೂ 5 ವರ್ಷದ ಮಗುವಿನೊಂದಿಗೆ ರೈಲಿಗಾಗಿ ಕಾಯುತ್ತಿದ್ದರು.
ಈ ವೇಳೆ ರೈಲು ಆಗಮಿಸಿದ್ದು, ಅವಸರವಾಗಿ ಮಗುವಿನ ಕೈ ಹಿಡಿದುಕೊಂಡು ಪೋಷಕರು ರೈಲು ಏರಲು ತೆರಳಿದ್ದಾರೆ. ಆದರೆ ಈ ವೇಳೆ ಮಗು ಪೋಷಕರ ಕೈಯಿಂದ ಜಾರಿ ಬಿದ್ದಿದೆ. ಇನ್ನೇನು ರೈಲಿನ ಅಡಿಗೆ ಮಗು ಬೀಳಬೇಕು ಎನ್ನುವಷ್ಟರಲ್ಲಿ ತಕ್ಷಣವೇ ಆಗಮಿಸಿದ ಯೋಧ ಸಚಿನ್ ಮಗುವನ್ನು ರಕ್ಷಣೆ ಮಾಡಿದ್ದಾರೆ.
2- 3 ಸೆಕೆಂಡ್ ಗಳ ಅಂತರದಲ್ಲಿ ಸಂಭವಿಸಬಹುದಾದ ಅವಘಡವೊಂದನ್ನು ತಪ್ಪಿಸಿದ್ದಾರೆ. ಆದರೆ ಈ ವೇಳೆ ಮಗು ಹಾಗೂ ಯೋಧಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಪ್ರಥಮ ಚಿಕಿತ್ಸೆ ನೀಡಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.