ಹೆಚ್.ಎಂ. ರೇವಣ್ಣ'ಗೆ ಮಾಗಡಿಯಿಂದ ಜೆಡಿಎಸ್ ಟಿಕೆಟ್ ? ಹೆಚ್.ವಿಶ್ವನಾಥ್ ಭೇಟಿ ಮಾಡಿದಾಗ ನಡೆಯಿತು ಸ್ವಾರಸ್ಯಕರ ಚರ್ಚೆ !!!

Published : May 18, 2017, 12:40 AM ISTUpdated : Apr 11, 2018, 01:05 PM IST
ಹೆಚ್.ಎಂ. ರೇವಣ್ಣ'ಗೆ ಮಾಗಡಿಯಿಂದ ಜೆಡಿಎಸ್ ಟಿಕೆಟ್ ? ಹೆಚ್.ವಿಶ್ವನಾಥ್ ಭೇಟಿ ಮಾಡಿದಾಗ ನಡೆಯಿತು ಸ್ವಾರಸ್ಯಕರ ಚರ್ಚೆ  !!!

ಸಾರಾಂಶ

ಕಾಂಗ್ರೆಸ್ ಹಿರಿಯ ಮುಖಂಡ ಹಾಗೂ ಸಿದ್ದರಾಮಯ್ಯಗೆ ಕಾಂಗ್ರೆಸ್ ಗೆ ಕರೆತಂದ ಧುರೀಣ ಹೆಚ್ ವಿಶ್ವನಾಥ್, ಸಿದ್ದು ಮೇಲೆ ಸಿಟ್ಟಾಗಿದ್ದಾರೆ. ಅಷ್ಟೇ ಅಲ್ಲ ಕಾಂಗ್ರೆಸ್ ತೊರೆಯೋ ಹಂತದಲ್ಲೂ ವಿಶ್ವನಾಥ್ ಇದ್ದಾರೆ. ಇದನ್ನರಿತ ಸಿದ್ದರಾಮಯ್ಯ, ತಮ್ಮ ಆಪ್ತ ಹೆಚ್ ಎಂ ರೇವಣ್ಣ ಮತ್ತು ಕೆಲವರನ್ನ ವಿಶ್ವನಾಥ್ ಮನವೊಲಿಕೆಗೆ ಮೈಸೂರಗೆ ಕಳುಹಿಸಿದ್ರು. ಆ ವೇಳೆ ವಿಶ್ವನಾಥ್, ರೇವಣ್ಣ ನಡುವೆ ನಡೆದ ಸಂಭಾಷಣೆ...

ಇದು  ಇಬ್ಬರು ನಾಯಕರ ನಡುವೆ ನಡೆದ  ಸ್ವಾರಸ್ಯಕರ ಚರ್ಚೆ .  ಪಕ್ಷ ಬಿಟ್ಟು ಹೋಗ್ಬೇಡಿ ಅಂತಾ ಅವರು ಗೋಗರೆದ್ರೆ , ಇವರು  ಇಲ್ಲ ಇಲ್ಲ ನಾನ್​ ಬರಲ್ಲ   ಹೋಗಪ್ಪ ಅಂದೇ ಬಿಟ್ರು .  ಕೊನೆಗೆ  ಆ ನಾಯಕ  ಮನವೊಲಿಸಲು  ಒಂದು  ಆಫರ್​ ಅನ್ನು  ಇಡಲಾಯ್ತು.  ಆ ಆಫರ್​  ಆದ್ರು ಏನು?  ಆ ಇಬ್ಬರು ನಾಯಕರು ಯಾರು ಅನ್ನೋದು ಹೇಳ್ತೀವಿ ನೋಡಿ  

ಕಾಂಗ್ರೆಸ್ ಹಿರಿಯ ಮುಖಂಡ ಹಾಗೂ ಸಿದ್ದರಾಮಯ್ಯಗೆ ಕಾಂಗ್ರೆಸ್ ಗೆ ಕರೆತಂದ ಧುರೀಣ ಹೆಚ್ ವಿಶ್ವನಾಥ್, ಸಿದ್ದು ಮೇಲೆ ಸಿಟ್ಟಾಗಿದ್ದಾರೆ. ಅಷ್ಟೇ ಅಲ್ಲ ಕಾಂಗ್ರೆಸ್ ತೊರೆಯೋ ಹಂತದಲ್ಲೂ ವಿಶ್ವನಾಥ್ ಇದ್ದಾರೆ. ಇದನ್ನರಿತ ಸಿದ್ದರಾಮಯ್ಯ, ತಮ್ಮ ಆಪ್ತ ಹೆಚ್ ಎಂ ರೇವಣ್ಣ ಮತ್ತು ಕೆಲವರನ್ನ ವಿಶ್ವನಾಥ್ ಮನವೊಲಿಕೆಗೆ ಮೈಸೂರಗೆ ಕಳುಹಿಸಿದ್ರು. ಆ ವೇಳೆ ವಿಶ್ವನಾಥ್, ರೇವಣ್ಣ ನಡುವೆ ನಡೆದ ಸಂಭಾಷಣೆ...

: ಸರ್ ನಮಸ್ಕಾರ

ಬನ್ನಿ ರೇವಣ್ಣ, ಸಿದ್ದರಾಮಯ್ಯ ಕಳುಹಿಸಿದ್ರಾ ?

 

ಹೌದು ಸರ್, ನಿಮ್ಮಂಥ ಸಿನೀಯರ್ ಕಾಂಗ್ರೆಸ್ ಬಿಟ್ಟೋದ್ರೆ ಹೆಂಗೆ ? ನಮ್ಮವರೆ ಸಿಎಂ ಆಗಿರೋವಾಗ ನೀವ್ಹೀಗೆ ಮಾಡ್ಬಹುದಾ ? ಅಷ್ಟಕ್ಕೂ ಸಿದ್ದರಾಮಯ್ಯರನ್ನ ಕಾಂಗ್ರೆಸ್ ಗೆ ತಂದೋರೆ ನೀವು. ನಿಮ್ಮ ಆ ಪ್ರಯತ್ನದಿಂದಲೇ ಅವರಿವತ್ತು ಮುಖ್ಯಮಂತ್ರಿಯಾಗಿರೋದು

ಹೌದಾ ? ಕರೆದುಕೊಂಡು ಬಂದಿದ್ದಕ್ಕೂ ಒಳ್ಳೆಯ ಮರ್ಯಾದೆಯನ್ನೇ ಸಿದ್ದರಾಮಯ್ಯ ಕೊಟ್ರು ಬಿಡು. ಅದೆಲ್ಲಾ ಬೇಡ. ನಾನು ಪಕ್ಷ ಬಿಡಲು ಡಿಸೈಡ್ ಮಾಡಿದ್ದೀನಿ ಅಷ್ಟೇ.

 

ಅಯ್ಯೋ ಬೇಡಾ ಆತುರದ ನಿರ್ಧಾರ ಬೇಡ ಸರ್. ಆ ಯೋಚ್ನೇ ಬಿಡಿ ಎಲ್ಲವೂ ಒಳ್ಳೆಯದ್ದಾಗುತ್ತೆ.

ಒಳ್ಳೆ ಕಾಲನಾ ಯಾರಿಗೆ ? ಗೋವಿಂದರಾಜ್ ಗೆ ಆ ಕಾಲ ಬಂದಿದೆ. ನಿನಗೂ ಮಂತ್ರಿ ಸ್ಥಾನ ಸಿಗುತ್ತೆ. ಹಾಗಾಗಿ ನಿನಗೂ ಒಳ್ಳೆಯ ಕಾಲ ಬರುತ್ತೆ. ನಮಗೆ ಮಾತ್ರ ಜೆಡಿಎಸ್ ಸೇರೋಕೆ ಒಳ್ಳೆಯ ಕಾಲ ಬಂದಿದೆ..

 

ಸರ್ ಮಂತ್ರಿ ಆಗೋದಾ ? ಅಂತ ಭರವಸೆ ಕೊಟ್ಟಿದ್ದಾರೆ ಸಿಎಂ ಅಷ್ಟೇ.

– ಸಿದ್ದರಾಮಯ್ಯನ ಬಳಿ ಗೋವಿಂದರಾಜು ಅಂತವರಿಗೆ ಮಾತ್ರ ಕೆಲಸ. ನಿಮ್ಮ-ನಮ್ಮಂಥವರಿಗಿಲ್ಲ ಬಿಡು. ನಿನಗೊಂದು ಆಫರ್ ಕೊಡ್ತಾ ಇದ್ದೀನಿ ನೀನ್ಯಾಕೆ ಜೆಡಿಎಸ್ ಗೆ ಬರಬಾರದು ?

 

ಸರ್ ಗೋವಿಂದರಾಜುನಾ ?

ಹೌದು, ಗೋವಿಂದರಾಜು ಮಾಡೋ ಕೆಲಸಾ ನೀನ್ ಮಾಡ್ತೀಯಾ ಅಂತಾ ನಿಮ್ಮ ಸಿಎಂ ನಂಗೆ ಕೇಳಿದ್ರಪ್ಪಾ ? ಅದ್ಯಾವ್ ಕೆಲ್ಸವೋ ಗೊತ್ತಿಲ್ಲ.

 

ಹೋಗ್ಲಿ ಬಿಡಿ ಸರ್, ಈಗ್ಹೇಳಿ ನಾನು ಜೆಡಿಎಸ್ಗಾ ?

ಹೌದು, ನಾನು ಹುಣಸೂರು ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಲು ರೆಡಿಯಾಗಿದ್ದೀನಿ. ನೀನು ಮಾಗಡಿಯಿಂದ ಕಂಟೆಸ್ಟ್ ಮಾಡು.ಈ ಬಾರಿ ಬಾಲಕೃಷ್ಣಗೆ ಟಿಕೆಟ್ ಇಲ್ಲಾ, ನಿನಗೆ ಕ್ಷೇತ್ರದ ಬಗ್ಗೆ ಗೊತ್ತು. ಕುಮಾರಸ್ವಾಮಿ ಅವ್ರೇ ಗೆಲ್ಲಿಸಿಕೊಂಡು ಬರ್ತಾರೆ. ಜೆಡಿಎಸ್ ಸರ್ಕಾರ ಬಂದ್ರೆ ಮಂತ್ರಿಯೂ ಆಗ್ತಿಯಾ

ರೇವಣ್ಣ ಕೆಲ ಕ್ಷಣ ಕಕ್ಕಾಬಿಕ್ಕಿ.. ಮನವೊಲಿಸಲು ಬಂದ್ರೆ ವಿಶ್ವನಾಥ್ ನಂಗೆ ಆಫರ್ ಕೊಡ್ತಿದ್ದಾರೆ​...

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ವೀಕ್ ಡೇಸಲ್ಲಿ ಫ್ರೊಫೆಸರ್, ವೀಕೆಂಡ್‌ನಲ್ಲಿ ಖತರ್ನಾಕ್ ಕಳ್ಳಿ! ಮದುವೆ ಮನೆಗಳಲ್ಲಿ ಕನ್ನ ಹಾಕುತ್ತಿದ್ದ ಶಿಕ್ಷಕಿ!
2026 Holiday Calendar:ಮುಂದಿನ ವರ್ಷ ಕುಟುಂಬದ ಜೊತೆ ಟ್ರಿಪ್ ಹೋಗೋಕೆ ಇಲ್ಲಿದೆ ಬೆಸ್ಟ್ ಲೀವ್ ಪ್ಲಾನ್!