ಇಂದಿರಾ ಕ್ಯಾಂಟೀನ್'ಗೆ ಗೌಡರ ಪಕ್ಷ ಸೆಡ್ಡು: ಜೆಡಿಎಸ್'ನಿಂದ 'ನಮ್ಮ ಅಪ್ಪಾಜಿ" ಕ್ಯಾಂಟೀನ್

Published : May 18, 2017, 12:18 AM ISTUpdated : Apr 11, 2018, 12:48 PM IST
ಇಂದಿರಾ ಕ್ಯಾಂಟೀನ್'ಗೆ ಗೌಡರ ಪಕ್ಷ ಸೆಡ್ಡು: ಜೆಡಿಎಸ್'ನಿಂದ 'ನಮ್ಮ ಅಪ್ಪಾಜಿ" ಕ್ಯಾಂಟೀನ್

ಸಾರಾಂಶ

ಬಸವನಗುಡಿಯಲ್ಲಿ ಮೊದಲ ಕ್ಯಾಂಟೀನ್ ಶುರುವಾಗಲಿದೆ. ಬಳಿಕ ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳಿಗೂ ವಿಸ್ತರಣೆಯಾಗಲಿದೆ

ಬೆಂಗಳೂರು(ಮೇ.18): ರಾಜ್ಯ ಸರ್ಕಾರದ ಇಂದಿರಾ ಕ್ಯಾಂಟೀನ್ ಗೆ ಜೆಡಿಎಸ್ ಸೆಡ್ಡು ಹೊಡೆದಿದ್ದು, ಶೀಘ್ರದಲ್ಲಿಯೇ "ನಮ್ಮ ಅಪ್ಪಾಜಿ" ಕ್ಯಾಂಟೀನ್ ಆರಂಭಿಸಲಿದೆ.

ಈ ಕ್ಯಾಂಟೀನ್'ನಲ್ಲಿ 5 ರೂಪಾಯಿಗೆ ಬೆಳಗ್ಗಿನ ಉಪಹಾರ ಮತ್ತು 10 ರೂಪಾಯಿಗೆ ಮಧ್ಯಾಹ್ನದ ಊಟ ದೊರಯಲಿದೆ.  ಜೆಡಿಎಸ್'ನ ವಿಧಾನ ಪರಿಷತ್ ಸದಸ್ಯ ಟಿ.ಎ. ಶರವಣ ತಮ್ಮ ಸ್ವಂತ ಹಣದಿಂದ 'ನಮ್ಮ ಅಪ್ಪಾಜಿ ಕ್ಯಾಂಟೀನ್' ಆರಂಭಿಸಲಿದ್ದಾರೆ. ಬಸವನಗುಡಿಯಲ್ಲಿ ಮೊದಲ ಕ್ಯಾಂಟೀನ್ ಶುರುವಾಗಲಿದೆ. ಬಳಿಕ ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳಿಗೂ ವಿಸ್ತರಣೆಯಾಗಲಿದೆ.ಇಂದು ಜೆಡಿಎಸ್ ರಾಷ್ಟ್ರಾಧ್ಯಕ್ಷ ದೇವೇಗೌಡರ ಹುಟ್ಟು ಹಬ್ಬದ ಪ್ರಯುಕ್ತ ಕ್ಯಾಂಟೀನ್ ಘೋಷಣೆಯಾಗಲಿದೆ.

ಜುಲೈ ತಿಂಗಳಿನಿಂದ ಕ್ಯಾಂಟೀನ್ ಆರಂಭವಾಗಲಿದ್ದು, 5 ರೂಪಾಯಿಗೆ ಬೆಳಗಿನ ಉಪಹಾರವಾದ ಇಡ್ಲಿ, ವಡಾ, ಖಾಲಿ ದೋಸೆ, ಚಟ್ನಿ, ಸಾಂಬಾರ್, 10 ರೂಪಾಯಿಗೆ ಟೊಮ್ಯಾಟೊ ಬಾತ್, ಬಿಸಿಬೇಳೆಬಾತ್, ಪೊಂಗಲ್, ಚಿತ್ರಾನ್ನ, ಮೊಸರನ್ನ ಇರುವ ಮಧ್ಯಾಹ್ನದ ಊಟ ಸಿಗಲಿದೆ. ಕ್ಯಾಂಟೀನ್'ಗೆ ರೈತರಿಂದ ನೇರವಾಗಿ ಆಹಾರ ಧಾನ್ಯ, ತರಕಾರಿ ಖರೀದಸಲಾಗುತ್ತದೆ.

ದೇವೇಗೌಡರ ಸಲಹೆಯಂತೆ ಸ್ವಂತ ಹಣದಿಂದ ನಮ್ಮ ಅಪ್ಪಾಜಿ ಕ್ಯಾಂಟೀನ್'ಅನ್ನು ವಿಧಾನ ಪರಿಷತ್ ಸದಸ್ಯ ಶರವಣ ಅರಂಭಿಸುತ್ತಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬಳ್ಳಾರಿಯಲ್ಲಿ ಎಫ್‌ಡಿಎ ಸ್ಪರ್ಧಾತ್ಮಕ ಪರೀಕ್ಷೆ: ಕಾಲು ಗೆಜ್ಜೆ ತೆಗೆದು ಪರೀಕ್ಷೆ ಬರೆದ ವಿದ್ಯಾರ್ಥಿನಿಯರು
ಜವರಾಯನಂತೆ ಬಂತು ಜಲ್ಲಿಕಲ್ಲು ತುಂಬಿದ್ದ ಲಾರಿ: ಮನೆ ಮುಂದೆ ಚಳಿ ಕಾಯಿಸುತ್ತಿದ್ದ 90 ವರ್ಷದ ವೃದ್ಧ ಬಲಿ